ಕೆ.ಎಂ.ದೊಡ್ಡಿ: ಇಲ್ಲಿನ ಚಾಂಶುಗರ್ಸ್ ಕಾರ್ಖಾನೆ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿಗೆ ಎರಡನೇ ಆಷಾಢ ಶುಕ್ರವಾರ ಹಿನ್ನೆಲೆ ವಿಶೇಷ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಖ್ಯಾತ ಉದ್ಯಮಿ ಸಜನ್ ಜ್ಯೂವೆಲರ್ಸ್ ಮಾಲೀಕ ಸಜನ್ ಸಿಂಗ್ ಪುರೋಹಿತ್ ಅವರ ಕುಟುಂಬ ದೇವಿಗೆ ವಿಶೇಷ ಪೂಜೆ ಏರ್ಪಡಿಸಿದ್ದರು. ಈ ವೇಳೆ ತಾಯಿಗೆ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದ ದೇವಿಗೆ ವಿವಿಧ ಅಭಿಷೇಕಗಳು ಜರುಗಿದವು.

ಬೆಳಗ್ಗೆಯಿಂದ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬಂತು. ಪ್ರಧಾನ ಅರ್ಚಕ ಕಾರ್ತಿಕ್ ಆರಾಧ್ಯ ನೇತೃತ್ವದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾದ ಭಕ್ತರು ಪ್ರಸಾದ ಸ್ವೀಕರಿಸಿದರು.

ದೇವಾಲಯದಲ್ಲಿರುವ ಉತ್ಸವ ಮೂರ್ತಿ ಶ್ರೀ ಚಾಮುಂಡೇಶ್ವರಿ ತಾಯಿಗೆ ನಾರಿಯರು ನಿಂಬೆ ಹಣ್ಣಿನ ಆರತಿ ಬೆಳಗಿದರೆ ಗಣಪತಿ ಮತ್ತು ಸುಬ್ರಹ್ಮಣ್ಯ ಸ್ವಾಮಿಗೆ ನಮಿಸಿದ ಭಕ್ತರು ದೇವಾಲಯ ಪ್ರಾಂಗಣದಲ್ಲಿರುವ ಶ್ರೀ ಆಂಜನೇಯ, ಶ್ರೀ ಕಾಲಭೈರವೇಶ್ವರ, ಶ್ರೀ ಸಿದ್ಧಿ ವಿನಾಯಕ, ಆದಿಶೇಷ ಮತ್ತು ವಾಸುಕಿ ದೇವರುಗಳಿಗೆ ವಿಶೇಷ ಪೂಜೆ ನೆರವೇರಿಸಿದರು.

ಈ ವೇಳೆ ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಸಜನ್ ಸಿಂಗ್ ಪುರೋಹಿತ್ ಅವರ ಕುಟುಂಬದಿಂದ ಪುಳಿಯೋಗರೆ, ಮೊಸರು ಅನ್ನ ಮತ್ತು ಸಿಹಿ ಪೊಂಗಲ್ ನೀಡಲಾಯಿತು.


------------

24ಕೆಎಂಎನ್ ಡಿ12

ಚಾಂಶುಗರ್ಸ್ ಕಾರ್ಖಾನೆ ಆವರಣದ ಶ್ರೀ ಚಾಮುಂಡೇಶ್ವರಿ ತಾಯಿಗೆ ಎರಡನೇ ಆಷಾಢ ಶುಕ್ರವಾರ ಹಿನ್ನೆಲೆ ವಿಶೇಷ ಪೂಜೆಗಳು ನಡೆದು ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.