ಸಾರಾಂಶ
ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಿಲ್ಲ. ಕಳೆದ 3 ದಶಕಗಳಿಂದ ಅರಬಾವಿ ಮತಕ್ಷೇತ್ರದ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಿಲ್ಲ. ಕಳೆದ 3 ದಶಕಗಳಿಂದ ಅರಬಾವಿ ಮತಕ್ಷೇತ್ರದ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಮತ್ತು ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ₹20 ಲಕ್ಷ ವೆಚ್ಚದ ಅಂಬೇಡ್ಕರ್ ಭವನ ಹಾಗೂ ₹16 ಲಕ್ಷ ವೆಚ್ಚದ ಮೆಥೋಡಿಸ್ಟ್ ಚರ್ಚ್‌ನ ಕಾಂಪೌಂಡ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲ ಸಮಾಜಗಳನ್ನು ಒಗ್ಗೂಡಿಸುವ ಮೂಲಕ ಆಯಾ ಸಮಾಜಗಳ ಪ್ರಮುಖರಿಗೆ ವಿವಿಧ ಕ್ಷೇತ್ರಗಳಲ್ಲಿ ಸ್ಥಾನಮಾನ ನೀಡಲಾಗಿದೆ. ಮುಂದಿನ ದಿನಗಳಲ್ಲೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಗೆ, ಸಮಾಜಗಳ ಪ್ರಗತಿಗಾಗಿ ವಿಶೇಷ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ರೇ.ಅಬ್ರಾಹಂ.ಎಚ್ ಮತ್ತು ಫಾದರ್ ಮ್ಯಾಥ್ಯೂ.ಎಚ್ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಮುಖಂಡರಾದ ಲಕ್ಷ್ಮಣ ಹುಚ್ಚರೆಡ್ಡಿ, ಬಸಪ್ಪ ಸಂಕನ್ನವರ, ರಾಮಪ್ಪ ಕೆಂಚರೆಡ್ಡಿ, ಮುತ್ತೆಪ್ಪ ಕೊಪ್ಪದ, ಗುರುಪುತ್ರ ದಡ್ಡಿಮನಿ, ಗ್ಯಾನಪ್ಪ ಮಾರಾಪೂರ, ರಾಮಪ್ಪ ಅವರಾದಿ, ಯಾಕೂಬ್ ಹಾದಿಮನಿ, ಯೋಹಾನ ಹಾದಿಮನಿ, ಯೋಹನಾ ಮಾರಾಪೂರ, ಸುಂದರ ಹಾದಿಮನಿ, ಯಶವಂತ ನಡುವಿನಮನಿ, ಶಿವಲಿಂಗ ಹಾದಿಮನಿ, ರಾಜೇಶ ದಡ್ಡಿಮನಿ, ಉದಯ ಸನದಿ, ಈರಪ್ಪ ಜಿನಗನ್ನವರ, ನಾಗಪ್ಪ ಪೂಜೇರಿ, ಅಶೋಕ ಮಾಚಕನೂರ, ವಿದ್ಯಾ ಪೂಜೇರಿ, ದಲಿತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.ಕೋಟ್...
ದಲಿತರ ಕಾಲೋನಿ ಜೊತೆಗೆ ಇಡೀ ಕಮಲದಿನ್ನಿ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಯಡಿ ಅನುದಾನ ಒದಗಿಸಿದೆ. ಸಾಮಾಜಿಕ, ಧಾರ್ಮಿಕವಾಗಿ ಸಮಾಜದ ವಿವಿಧ ಚಟುವಟಿಕೆಗಳಿಗೆ ಸುಸಜ್ಜಿತವಾದ ಅಂಬೇಡ್ಕರ್ ಭವನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಮಾಜಕ್ಕೆ ಅನುಕೂಲವಾಗಲು ಈ ಭವನ ನಿರ್ಮಿಸಿದ್ದು, ಸ್ವಚ್ಛತೆಯ ಜತೆಗೆ ಉತ್ತಮ ಕಾರ್ಯಗಳಿಗೆ ಇದನ್ನು ಉಪಯೋಗಿಸಿಕೊಳ್ಳಬೇಕು.- ಬಾಲಚಂದ್ರ ಜಾರಕಿಹೊಳಿ, ಶಾಸಕ ಮತ್ತು ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷರು.