ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ ಅತ್ಯವಶ್ಯಕ

| Published : Oct 27 2025, 03:00 AM IST

ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ ಅತ್ಯವಶ್ಯಕ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡೆಗಳಿಂದ ಹೆಚ್ಚಿನ ಆರೋಗ್ಯ ದೊರೆಯುತ್ತದೆ. ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ ಅತ್ಯವ್ಯಶಕ ಎಂದು ಕೊಪ್ಪಳದ ನಿವೃತ್ತ ಸಹಾಯಕ ಕಾರ್ಯಕಾರಿ ಅಭಿಯಂತರ ಎಂ ಬಸವರಾಜಪ್ಪ ತಿಳಿಸಿದರು.

ಹೊಳೆಹೊನ್ನೂರು: ಕ್ರೀಡೆಗಳಿಂದ ಹೆಚ್ಚಿನ ಆರೋಗ್ಯ ದೊರೆಯುತ್ತದೆ. ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ ಅತ್ಯವ್ಯಶಕ ಎಂದು ಕೊಪ್ಪಳದ ನಿವೃತ್ತ ಸಹಾಯಕ ಕಾರ್ಯಕಾರಿ ಅಭಿಯಂತರ ಎಂ ಬಸವರಾಜಪ್ಪ ತಿಳಿಸಿದರು.

ಅವರು ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್‌ನ ಆವರಣದಲ್ಲಿ ಚನ್ನಗಿರಿ, ಶಿವಮೊಗ್ಗ, ಭದ್ರಾವತಿ, ಕೈಮರ ಹಾಗೂ ಗುರುಪುರ ಜ್ಞಾನದೀಪ ಪೂರ್ವ ಪ್ರಾಥಮಿಕ ಶಾಲೆಗಳ 4ನೇ ವಾರ್ಷಿಕ ಕ್ರೀಡಾಕೂಟವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಪ್ರತಿ ದಿನ ಕೇವಲ ಅರ್ಧ ಗಂಟೆಗಳ ಕಾಲ ಆಟಗಳಲ್ಲಿ ತೊಡಗಿದರೆ ನಮ್ಮೆಲ್ಲರ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಬಾಲ್ಯದಲ್ಲಿ ಸಣ್ಣಪುಟ್ಟ ಆಟಗಳನ್ನು ಆಡಲು ಮಕ್ಕಳಿಗೆ ಅವಕಾಶ ಮಾಡಿಕೊಟ್ಟರೆ ಮುಂದೆ ಅದು ಬೇರೆ ಬೇರೆ ವಿಶೇಷ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ. ಈ ರೀತಿಯ ಕ್ರೀಡಾ ಚಟುವಟಿಕೆಗಳು ಅತ್ಯಂತ ಹೆಚ್ಚಿನ ರೀತಿಯಲ್ಲಿ ಶಾಲೆಗಳಲ್ಲಿ ನಡೆಯಲಿ ಎಂದರು.

ಶ್ರೀ ಅರಬಿಂದೊ ಫೌಂಡೇಶನ್ ಫಾರ್ ಎಜುಕೇಶನ್ ಹಾಗೂ ಜ್ಞಾನದೀಪ ವಿದ್ಯಾ ಸಂಸ್ಥೆಯ ಅಧ್ಯಕ್ಷ ತಲವಾನೆ ಪ್ರಕಾಶ್ ಮಾತನಾಡಿ, ಚಿಣ್ಣರ ಆಟ ನೋಡಲು ಚೆಂದ. ಆಟ ಎನ್ನುವುದು ಕೇವಲ ಮಕ್ಕಳಿಗಷ್ಟೇ ಸೀಮಿತವಾಗಿಲ್ಲ ಮನೆಯಲ್ಲಿರುವ ದೊಡ್ಡವರೂ ಸಹ ಮಕ್ಕಳ ಜೊತೆ ಸೇರಿ ಆಟವಾಡಿ ಅವರಿಗೂ ಸಹಕಾರ ನೀಡಬೇಕು. ಮನುಷ್ಯನಿಗೆ ಆಟಗಳು ಅನೇಕ ಪಾಠಗಳನ್ನು ಕಲಿಸುತ್ತವೆ. ಮಕ್ಕಳು ಆಟವಾಡುವುದರಿಂದ ಸೃಜನಶೀಲತೆ, ಸಾಮಾಜಿಕ ಪ್ರಜ್ಞೆ, ಚಿಂತನಶೀಲತೆಯ ಅರಿವು ಮೂಡುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀಕಾಂತ್ ಎಂ.ಹೆಗಡೆ ಮಾತನಾಡಿ, ನಮ್ಮ ಶಾಲೆಯು ಕ್ರೀಡೆಗಳಿಗೆ ಅತ್ಯಂತ ಪ್ರಮುಖವಾದ ಸ್ಥಾನವನ್ನು ನೀಡುತ್ತಿದೆ. ವರ್ಷದಿಂದ ವರ್ಷಕ್ಕೆ ವಿಭಿನ್ನವಾದ ಪರಿಕಲ್ಪನೆಗಳೊಂದಿಗೆ ಈ ಕ್ರೀಡಾಕೂಟ ನಡೆದು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ದಿನದ ಕ್ರೀಡಾಕೂಟದಲ್ಲಿ ಎಲ್ಲಾ ಮಕ್ಕಳು ತುಂಬಾ ಸಂತೋಷದಿಂದ ಪಾಲ್ಗೊಳ್ಳಬೇಕು. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.ಜ್ಞಾನದೀಪ ವಿದ್ಯಾ ಸಂಸ್ಥೆಯ ಖಜಾಂಚಿಗಳಾದ ಡಾ.ಕೆ.ಆರ್.ಶ್ರೀಧರ್, ಕಾರ್ಯದರ್ಶಿ ಬಿ.ಎಲ್.ನೀಲಕಂಠ ಮೂರ್ತಿ, ಶೈಕ್ಷಣಿಕ ನಿರ್ದೇಶಕ ಎಚ್.ಎನ್.ಎಸ್.ರಾವ್, ಶಾಲೆಯ ಹಿರಿಯ ಉಪ ಪ್ರಾಂಶುಪಾಲ ಡಾ.ರೆಜಿ ಜೋಸೆಫ್, ವಾಣಿ ಕೃಷ್ಣಪ್ರಸಾದ್, ಶ್ರೀ ಅರಬಿಂದೊ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಂ.ಜೋಸೆಫ್ ಉಪಸ್ಥಿತರಿದ್ದರು.