ಬೇಲೂರು ತಾಲೂಕು, ಅರೇಹಳ್ಳಿ ಹೋಬಳಿ ಮರವತ್ತಿ ಗ್ರಾಮದ ಎಂ ,ಜೆ ಭದ್ರೆಗೌಡ ಮತ್ತು ಲತಾ ಭದ್ರೆಗೌಡ ಇವರ ಮಗಳಾಗಿ ರೈತಾಪಿ ಕುಟುಂಬದಲ್ಲಿ ಜನಿಸಿ ಬೆಳೆದ ಆತ್ಮೀಯ ಅವರು, ಬೇಲೂರು ತಾಲೂಕಿಗೆ ಹೆಮ್ಮೆ ತರುವ ಸಾಧನೆ ಮಾಡಿ ಜಿಲ್ಲೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಪ್ರತಿಭಾವಂತ ಕಬಡ್ಡಿ ಆಟಗಾರ್ತಿ ಕುಮಾರಿ ಎಂ.ಬಿ. ಆತ್ಮೀಯ ಅವರು 2023ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು 2023ರ ಕರ್ನಾಟಕ ಕ್ರೀಡಾ ರತ್ನ ರಾಜ್ಯದ ಅತ್ಯುನ್ನತ ಗ್ರಾಮೀಣ ಕ್ರೀಡಾ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಪ್ರತಿಭಾವಂತ ಕಬಡ್ಡಿ ಆಟಗಾರ್ತಿ ಕುಮಾರಿ ಎಂ.ಬಿ. ಆತ್ಮೀಯ ಅವರು 2023ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಬೇಲೂರು ತಾಲೂಕು, ಅರೇಹಳ್ಳಿ ಹೋಬಳಿ ಮರವತ್ತಿ ಗ್ರಾಮದ ಎಂ ,ಜೆ ಭದ್ರೆಗೌಡ ಮತ್ತು ಲತಾ ಭದ್ರೆಗೌಡ ಇವರ ಮಗಳಾಗಿ ರೈತಾಪಿ ಕುಟುಂಬದಲ್ಲಿ ಜನಿಸಿ ಬೆಳೆದ ಆತ್ಮೀಯ ಅವರು, ಬೇಲೂರು ತಾಲೂಕಿಗೆ ಹೆಮ್ಮೆ ತರುವ ಸಾಧನೆ ಮಾಡಿ ಜಿಲ್ಲೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಆತ್ಮೀಯ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಗೆಂಡೇಹಳ್ಳಿಯಲ್ಲಿ ಪೂರ್ಣಗೊಳಿಸಿ, ಪದವಿ ಶಿಕ್ಷಣವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದಿದ್ದಾರೆ. ಬಾಲ್ಯದಿಂದಲೇ ಕಬಡ್ಡಿಯತ್ತ ಆಸಕ್ತಿ ಹೊಂದಿದ್ದ ಇವರು ಇಂದು ವೃತ್ತಿಪರ ಕಬಡ್ಡಿ ಆಟಗಾರ್ತಿಯಾಗಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಯಶಸ್ಸು ಗಳಿಸಿದ್ದಾರೆ. ಇವರು ಉತ್ತರ ಕ್ಷೇತ್ರ (23–24) ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಹಾಗೂ ಹರಿಯಾಣದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕಬಡ್ಡಿ ಸ್ಪರ್ಧೆಯಲ್ಲಿ ತಂಡದ ನಾಯಕಿಯಾಗಿಯೂ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಜೊತೆಗೆ ಆಂಧ್ರಪ್ರದೇಶ, ಚೆನ್ನೈ, ಮಧ್ಯಪ್ರದೇಶ, ಉತ್ತರಪ್ರದೇಶ, ಕೇರಳ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕರ್ನಾಟಕ ಪರವಾಗಿ ಸ್ಪರ್ಧಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಪದಕ ವಿಜೇತರಾಗಿರುವ ಇವರು, ಕರ್ನಾಟಕ ಪರವಾಗಿ 10ಕ್ಕೂ ಹೆಚ್ಚು ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅದಲ್ಲದೆ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಕಬ್ಬಡಿ ಪಂದ್ಯಾವಳಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳಿಗೆ ಹಾಜರಾಗಿದ್ದಾರೆ. ಇವರ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು 2023ರ ಕರ್ನಾಟಕ ಕ್ರೀಡಾ ರತ್ನ ರಾಜ್ಯದ ಅತ್ಯುನ್ನತ ಗ್ರಾಮೀಣ ಕ್ರೀಡಾ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ಹೊಸ ಹೆಬ್ಬಾಗಿಲು ತೆರೆದಿರುವ ಈ ಸಾಧನೆ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದೆ.