ಸರ್ಕಾರಿ ನೌಕರರ ಸಾಕಷ್ಟು ಬೇಡಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು ಇನ್ನುಳಿದ ಬೇಡಿಕೆಗಳಿಗೂ ಸ್ಪಂದಿಸಲಿದ್ದಾರೆ. ಈ ನಿಟ್ಟಿನಲ್ಲಿ ನಾನು ಸಹಾ ನೌಕರರ ಸಮಸ್ಯೆಗೆ ಸದಾ ಧ್ವನಿಯಾಗುವೆ ಎಂದು ಶಾಸಕ ಎ. ಆರ್‌. ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸರ್ಕಾರಿ ನೌಕರರ ಸಾಕಷ್ಟು ಬೇಡಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು ಇನ್ನುಳಿದ ಬೇಡಿಕೆಗಳಿಗೂ ಸ್ಪಂದಿಸಲಿದ್ದಾರೆ. ಈ ನಿಟ್ಟಿನಲ್ಲಿ ನಾನು ಸಹಾ ನೌಕರರ ಸಮಸ್ಯೆಗೆ ಸದಾ ಧ್ವನಿಯಾಗುವೆ ಎಂದು ಶಾಸಕ ಎ. ಆರ್‌. ಕೃಷ್ಣಮೂರ್ತಿ ಹೇಳಿದರು.

ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆ, ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನವಾಗಬೇಕಾದರೆ ನೌಕರರ ಕರ್ತವ್ಯ ಅತಿ ಮುಖ್ಯ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಈ ಯೋಜನೆಗಳ ಜಾರಿಗೆ ಸಮರ್ಪಕ ರೀತಿ ಸ್ಪಂದಿಸುತ್ತಿದ್ದಾರೆ. ಆ ಮೂಲಕ ಕೊಳ್ಳೇಗಾಲದಲ್ಲೂ ಸಹಾ ನೌಕರರು ಪ್ರಮಾಣಿಕವಾಗಿ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ನೌಕರರ ಅನೇಕ ಬೇಡಿಕೆಗಳನ್ನು ಈಡೇರಿಸಿದ್ದಾರೆ, ಇನ್ನುಳಿದ ಬೇಡಿಕೆ ಈಡೆರಿಸುವ ನಿಟ್ಟಿನಲ್ಲಿ ಮುಂದಾಗುತ್ತಾರೆ, ನಾನು ಸಹಾ ಸರ್ಕಾರದ ಗಮನ ಸೆಳೆಯುವೆ ಎಂದರು.

ತಾಲೂಕು ಘಟಕದ ಅಧ್ಯಕ್ಷ ಜೋಸೆಫ್ ಅಲೆಗ್ಸಾಂಡರ್ ಮಾತನಾಡಿ, ಸರ್ಕಾರಿ ನೌಕರ ಸಂಘದ ತಾಲೂಕು ಘಟಕ ಕೊಳ್ಳೇಗಾಲದಲ್ಲೊಂದು ಐತಿಹಾಸಿಕ ನೌಕರರ ಸಮ್ಮೇಳನ ಮಾಡಬೇಕೆಂಬ ಅಭಿಲಾಷೆ ಹೊಂದಲಾಗಿದೆ. ಜನವರಿ ಇಲ್ಲವೇ ಫೆಬ್ರವರಿ ತಿಂಗಳಲ್ಲಿ ಈ ಸಮ್ಮೇಳನ ಅಯೋಜನೆ ನಿಟ್ಟಿನಲ್ಲಿ ಚಿಂತಿಸಲಾಗಿದೆ. ಶಾಸಕರು ಈ ನಿಟ್ಟಿನಲ್ಲಿ ಸದಾಕಾಲ ನಮ್ಮ ಜೊತೆಗಿರಬೇಕು, ಸಮ್ಮೇಳನಕ್ಕೆ ಮುಖ್ಯಮಂತ್ರಿಗಳನ್ನೇ ಕರೆ ತರಬೇಕು ಎಂಬ ಮಹಾದಾಸೆ ನಮ್ಮದಾಗಿದ್ದು ಈ ನಿಟ್ಟಿನಲ್ಲಿ ಶಾಸಕರು ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ನೌಕರರ ಸಂಘದ ಕಟ್ಟಡ ನಾಲ್ಕೂವರೆ ದಶಕಗಳಿಂದಲೂ ಇಲ್ಲಿ ಕಾರ್ಯನಿರ್ವಹಿಸುತ್ತಿದೆ, ಈ ನಿಟ್ಟಿನಲ್ಲಿ ಸಂಘಕ್ಕೆ ದಾಖಲೆ ಕುರಿತು ಇಸ್ವತ್ತು ಕೊಡಿಸುವ ನಿಟ್ಟಿನಲ್ಲಿ ಶಾಸಕರು ಸ್ಪಂದಿಸಬೇಕು. ಸರ್ಕಾರ ನೌಕರರ ಸಮಸ್ಯೆಗೆ ಸ್ಪಂದಿಸಿ 6ನೇ ವೇತನ ಮತ್ತು 7ನೇ ವೇತನ ಅಯೋಗ ಜಾರಿಗೊಳಿಸುವ ಮೂಲಕ ಉತ್ತಮ ಕೆಲಸ ಮಾಡಿದೆ. ಮಹಿಳಾ ನೌಕರ ಹಿತಾಸಕ್ತಿ ಕಾಪಾಡುವಲ್ಲಿ ಮುಂದಿದ್ದು ಖುತು ಚಕ್ರ ರಜೆ ಜಾರಿಗೊಳಿಸಿದ್ದನ್ನ ನಮ್ಮ ತಾಲೂಕು ಘಟಕ ಸ್ವಾಗತಿಸುತ್ತದೆ ಎಂದರು.

ಈ ವೇಳೆ ಪ್ರಧಾನ ಕಾರ್ಯದರ್ಶಿ ಚಿಕ್ಕರಾಜು, ಸತೀಶ್, ಹರೀಶ್, ದಿವಾಕರ್, ಬಸವರಾಜು ಇನ್ನಿತರಿದ್ದರು.