ಸಾರಾಂಶ
ತುರುವೇಕೆರೆ: ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿರುವ ಮಾಯಸಂದ್ರದ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಮಾಯಸಂದ್ರ ಕ್ಷೇತ್ರದ ಸದಸ್ಯ ಎಂ.ಎಂ.ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾದರು.ಈ ಹಿಂದಿನ ಅಧ್ಯಕ್ಷರಾಗಿದ್ದ ಪೂರ್ಣಿಮಾ ವಾಸುರವರು ರಾಜೀನಾಮೆ ನೀಡಿದ್ದರಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಮಂಗಳವಾರ ನಡೆದ ಚುನಾವಣೆಯಲ್ಲಿ ಎಂ.ಎಂ.ಶ್ರೀನಿವಾಸ್ ರವರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ೧೫ ಮಂದಿ ಸದಸ್ಯರ ಈ ಗ್ರಾಮ ಪಂಚಾಯ್ತಿಯಲ್ಲಿ ಚುನಾವಣೆ ಸಂದರ್ಭದಲ್ಲಿ ೯ ಸದಸ್ಯರು ಮಾತ್ರ ಹಾಜರಿದ್ದರು. ಚುನಾವಣಾಧಿಕಾರಿಗಳಾಗಿ ತಹಸೀಲ್ದಾರ್ ಇ.ಅಹಮದ್ ಕರ್ತವ್ಯ ನಿರ್ವಹಿಸಿದರು. ನೂತನ ಅಧ್ಯಕ್ಷರನ್ನು ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರಾದ ಎನ್.ಜಿ.ಮಂಜುನಾಥ್, ಖಾದಿರ್ ಪಾಷಾ, ಹುಸ್ಮಾಭಾನು ತಬ್ರೇಜ್, ಪೂರ್ಣಿಮಾ ವಾಸು, ಚಂದ್ರ, ಮಂಗಳಗೌರಮ್ಮ ಹೊನ್ನಪ್ಪ, ಭಾರತಿ ಲಕ್ಷ್ಮಣ್, ಮುಖಂಡರಾದ ಕಣಕೂರು ಚಂದ್ರಶೇಖರ್, ಕಣಕೂರು ವಾಸು, ಮಾಯಸಂದ್ರ ಸುಬ್ರಹ್ಮಣ್ಯ ಸೇರಿದಂತೆ ಹಲವಾರು ಮಂದಿ ಅಭಿನಂದಿಸಿದರು. ಪಿಡಿಓ ಸುರೇಶ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.ಸಂಭ್ರಮ : ಮಾಯಸಂದ್ರ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೂ ಪಂಚಾಯ್ತಿ ಸದಸ್ಯರ ಒಡಂಬಡಿಕೆ ಅನ್ವಯ ದಲಿತ ಸಮುದಾಯಕ್ಕೆ ಸೇರಿದ ಎಂ.ಎಂ.ಶ್ರೀನಿವಾಸ್ ರವರಿಗೆ ಅಧ್ಯಕ್ಷ ಸ್ಥಾನ ನೀಡಲಾಯಿತು.
ಅಧ್ಯಕ್ಷರಾಗಿ ಎಂ.ಎಂ.ಶ್ರೀನಿವಾಸ್ ರವರು ಆಯ್ಕೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಹಾಗೂ ದಲಿತ ಸಮುದಾಯದ ಹಲವಾರು ಮಂದಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.