ಎಸ್ಸೆಸ್ಸೆಲ್ಸಿ: ಹೊಸಪೇಟೆ ತಾಲೂಕಿಗೆ ವಿಶಾಲಾಕ್ಷಿ ಸೇರಿ ಮೂವರು ಟಾಪರ್‌

| Published : May 12 2024, 01:23 AM IST

ಎಸ್ಸೆಸ್ಸೆಲ್ಸಿ: ಹೊಸಪೇಟೆ ತಾಲೂಕಿಗೆ ವಿಶಾಲಾಕ್ಷಿ ಸೇರಿ ಮೂವರು ಟಾಪರ್‌
Share this Article
  • FB
  • TW
  • Linkdin
  • Email

ಸಾರಾಂಶ

ನಗರಪ್ರದೇಶದ ವಿದ್ಯಾರ್ಥಿಗಳು ಗ್ರಾಮೀಣಪ್ರದೇಶದ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಹೊಸಪೇಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೊಸಪೇಟೆ ತಾಲೂಕು ಈ ಬಾರಿ ಶೇ.61.75 ಫಲಿತಾಂಶ ಪಡೆದಿದೆ. ತಾಲೂಕಿನಲ್ಲಿ 89 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ‘ಎ+’, 313 ವಿದ್ಯಾರ್ಥಿಗಳು ‘ಎ’ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ತಾಲೂಕಿನ ಗೌರವ ಹೆಚ್ಚಿಸಿದ್ದಾರೆ ಎಂದು ಬಿಇಒ ಚನ್ನಬಸಪ್ಪ ಮಗ್ಗದ ತಿಳಿಸಿದ್ದಾರೆ. ತಾಲೂಕಿನಲ್ಲಿ 5393 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 3330 ಉತ್ತೀರ್ಣರಾಗಿದ್ದು, ಶೇ.61.75ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಬಾಲಕಿಯರ ಸರ್ಕಾರಿ ಪ್ರೌಢಶಾಲೆ (ಮಾಜಿ ಪುರಸಭೆ) ವಿದ್ಯಾರ್ಥಿನಿ ಎಸ್‌.ವಿಶಾಲಾಕ್ಷಿ, ಮರಿಯಮ್ಮನಹಳ್ಳಿಯ ಪ್ರಾರ್ಥನಾ ಪ್ರೌಢಶಾಲೆಯ ವಿ. ಸ್ನೇಹಾ, ನಗರದ ಟಿಎಂಎಇ ರೋಸ್‌ಬಡ್‌ ಶಾಲೆಯ ಅಬ್ದುಲ್‌ ಎಚ್‌. 611 ಅಂಕಗಳನ್ನು ಗಳಿಸಿ ತಾಲೂಕಿಗೆ ಮೊದಲ ಸ್ಥಾನ ಗಳಿಸಿದ್ದಾರೆ.

ನಗರಪ್ರದೇಶದ ವಿದ್ಯಾರ್ಥಿಗಳು ಗ್ರಾಮೀಣಪ್ರದೇಶದ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ ಸರ್ಕಾರಿ ಪ್ರೌಢಶಾಲೆಗಳು ಉತ್ತಮ ಫಲಿತಾಂಶ ಪಡೆದಿವೆ ಎಂದು ಬಿಇಒ ಬಿಇಒ ಚನ್ನಬಸಪ್ಪ ಮಗ್ಗದ ತಿಳಿಸಿದ್ದಾರೆ.

19 ಶಾಲೆಗಳಲ್ಲಿ ಶೇ.100 ಫಲಿತಾಂಶ:

ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವು ಶೇ.65.61 ಆಗಿದ್ದು, 10 ವಿದ್ಯಾರ್ಥಿಗಳು 600ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಗಿಟ್ಟಿಸಿ ಟಾಪ್ ಟೆನ್ ಸಾಧಕರಾಗಿ ಹೊರಹೊಮ್ಮಿದ್ದಾರೆ. 19 ಶಾಲೆಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿ ಸಾಧನೆ ತೋರಿವೆ. ಎರಡು ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಯುವರಾಜ ನಾಯ್ಕ ತಿಳಿಸಿದ್ದಾರೆ.