ಕನ್ನಡಪ್ರಭ ವಾರ್ತೆ ಬಾಗೂರು
ದೇಶದ ಬೆನ್ನೆಲುಬು ರೈತ ಮುಂಗಾರು ಮಳೆ ಬಾರದೆ ರೈತರ ಬೆಳೆಗಳು ನಷ್ಟವಾಗಿವೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಸಹಕರಿಸಬೇಕು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿ ಕೇಂದ್ರದ ಗ್ರಾಮ ದೇವತೆ ಶ್ರೀ ಸಂತೆಕಾಳೇಶ್ವರಿ ಹಾಗೂ ಶ್ರೀ ಚಿಕ್ಕಮ್ಮ ದೇವಾಲಯದ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಭುವನಹಳ್ಳಿ ಯೋಗೇಶ್ ಅವರು ದೇವಾಲಯಗಳ ಜೀರ್ಣೋದ್ದಾರ ನೀರಾವರಿ ವಿದ್ಯಾರ್ಥಿಗಳಿಗೆ ನೆರವು ಸೇರಿದಂತೆ ಈ ಭಾಗದ ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ ವೈಯಕ್ತಿಕವಾಗಿ ಸಹಾಯ ಮಾಡುವ ಮೂಲಕ ಈ ಭಾಗದ ಜನರ ಪ್ರೀತಿ ವಿಶ್ವಾಸ ಗಳಿಸಿ ಸಮಾಜ ಸೇವೆಗೆ ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.ಹೋಬಳಿ ಕೇಂದ್ರದ ಶ್ರೀ ಸಂತೆಕಾಳೆಶ್ವರಿ ದೇವಾಲಯ ಜೀರ್ಣೋದ್ಧಾರ ಸೇರಿದಂತೆ ₹2 ಕೋಟಿ ವೆಚ್ಚದಲ್ಲಿ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣದ ಜೊತೆಗೆ ಹೋಬಳಿ ಕೇಂದ್ರ ಸಂಪರ್ಕಿಸುವ ಪ್ರಮುಖ 4 ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ಜೊತೆಗೆ ಪ್ರಸ್ತುತ ಸಾಲಿನಿಂದಲೇ ಕೆಪಿಎಸ್ ಶಾಲೆ ಪ್ರಾರಂಭಗೊಳಿಸಲಾಗಿದೆ. ಅಭಿವೃದ್ಧಿಯ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಸೇವೆ ಸೇರಿದಂತೆ ನೂತನ ಪೊಲೀಸ್ ಠಾಣೆ ನಿರ್ಮಾಣಕ್ಕೂ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು. ಬಾಗೂರು ಏತ ನೀರಾವರಿ ಯೋಜನೆಯ ಮೂಲಕ ಈ ಭಾಗದ 20ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಮೂಲಕ ರೈತರಿಗೆ ನೆರವಾಗಿದ್ದೇವೆ ಈ ವರ್ಷ ಜೂನ್ ತಿಂಗಳು ಕಳೆದರೂ ಮಳೆಯಾಗಿಲ್ಲ. ಪ್ರಸ್ತುತ 40% ಅಷ್ಟು ಮಳೆ ಕೊರತೆ ಉಂಟಾಗಿದ್ದು ಜುಲೈ ತಿಂಗಳಲಾದರೂ ದೇವರ ದಯೆಯಿಂದ ಉತ್ತಮ ಮಳೆಯಾಗಿ ಹೇಮಾವತಿ ಜಲಾಶಯ ತುಂಬಲಿ ಎಂದು ದೇವರನ್ನು ಪ್ರಾರ್ಥಿಸಿರುವುದಾಗಿ ತಿಳಿಸಿದರು.ಸಮಾಜ ಸೇವಕ ಅಣತಿ ಯೋಗೇಶ್ ಮಾತನಾಡಿ ತಾಲೂಕಿನ ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಈ ಭಾಗದ ದೇವಾಲಯ ನೀರಾವರಿ ಸೇರಿದಂತೆ ಅನೇಕ ಕೆಲಸಗಳಿಗೆ ವೈಯಕ್ತಿಕವಾಗಿ ಸಹಕಾರ ನೀಡಿದ್ದೇನೆ ಸದಾ ತಾಲೂಕಿನ ಅಭಿವೃದ್ಧಿಯ ಬಗ್ಗೆ ಚಿಂತಿಸುವ ಶಾಸಕರ ಕಾರ್ಯವೈಕರಿ ಎಲ್ಲರೂ ಮೆಚ್ಚುವಂತದ್ದು ಮುಂಬರುವ ದಿನಗಳಲ್ಲೂ ಅವರ ಜೊತೆಗೂಡಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಸಂತೆಕಳೇಶ್ವರಿ ದೇವಾಲಯದಲ್ಲಿ ಶಾಸಕ ಬಾಲಕೃಷ್ಣ ಹಾಗೂ ಸಮಾಜ ಸೇವಕ ಭುವನಹಳ್ಳಿ ಯೋಗೇಶ್ ವಿಶೇಷ ಪೂಜೆ ಸಲ್ಲಿಸಿದರು. ಅಭಿಮಾನಿಗಳು ಕಾರ್ಯಕರ್ತರು ಆಯೋಜಿಸಿದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ. ಎಚ್. ಶಿವಣ್ಣ, ಮೂಡ ನಹಳ್ಳಿ ಚಂದ್ರೇಗೌಡ, ವಿ.ಎನ್. ಮಂಜುನಾಥ್, ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಉದ್ಯಮಿ ಮರವನಹಳ್ಳಿ ದೇವರಾಜ್, ಪುರಸಭಾ ಮಾಜಿ ಅಧ್ಯಕ್ಷ ಕೋಟೆಮೋಹನ್, ಮುಖಂಡರಾದ ಮರಿ ದೇವೇಗೌಡ, ರಾಮಚಂದ್ರು, ಶಿವಶಂಕರ ಕುಂಟೆ, ಓಬಳಾಪುರ ಬಸವರಾಜ್, ಅಣ್ಣೇಗೌಡ, ಬಾಗೂರು ಮನು, ನಿವೃತ್ತ ಸೈನಿಕ ಮಧು, ಮೂಡನಹಳ್ಳಿ ಕೃಷ್ಣೇಗೌಡ, ಚಂದ್ರೇಗೌಡ, ಇಂದ್ರೇಶ್, ಮರಗೂರು ಅನಿಲ್ ಕುಮಾರ್, ಹುಲಿಕೆರೆ ಸಂಪತ್ ಕುಮಾರ್, ಲಕ್ಷ್ಮಣ್, ಮಲ್ಲೇಶ್, ಕಾಳೇಶ್, ಪ್ರಮೋದ್, ಮಹೇಶ್, ದೊಡಗನ್ನಿ ಸತೀಶ್, ಭುವನಳ್ಳಿ ಕೃಷ್ಣಮೂರ್ತಿ, ಗ್ರಾಮಸ್ಥರು ಹಾಜರಿದ್ದರು.ರಾಜ್ಯ ಸರ್ಕಾರಗಳು ರೈತರ ನೆರವಿಗೆ ಸಹಕರಿಸಬೇಕು
ಅಭಿವೃದ್ಧಿಯ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಸೇವೆ ಸೇರಿದಂತೆ ನೂತನ ಪೊಲೀಸ್ ಠಾಣೆ ನಿರ್ಮಾಣಕ್ಕೂ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು. ಬಾಗೂರು ಏತ ನೀರಾವರಿ ಯೋಜನೆಯ ಮೂಲಕ ಈ ಭಾಗದ 20ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಮೂಲಕ ರೈತರಿಗೆ ನೆರವಾಗಿದ್ದೇವೆ ಈ ವರ್ಷ ಜೂನ್ ತಿಂಗಳು ಕಳೆದರೂ ಮಳೆಯಾಗಿಲ್ಲ. ಪ್ರಸ್ತುತ 40% ಅಷ್ಟು ಮಳೆ ಕೊರತೆ ಉಂಟಾಗಿದ್ದು ಜುಲೈ ತಿಂಗಳಲಾದರೂ ದೇವರ ದಯೆಯಿಂದ ಉತ್ತಮ ಮಳೆಯಾಗಿ ಹೇಮಾವತಿ ಜಲಾಶಯ ತುಂಬಲಿ ಎಂದು ದೇವರನ್ನು ಪ್ರಾರ್ಥಿಸಿರುವುದಾಗಿ ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.