ರಾಮನಾಥಪುರ: ರಾಜ್ಯ ಮಟ್ಟದ ಎತ್ತಿನ ಗಾಡಿ ಹಾಗೂ ಎರಡು ಹಲ್ಲು ಕರುಗಳ ಚಕ್ಕಡಿ ಗಾಡಿ ಓಟದ ಸ್ವರ್ಧೆಯಲ್ಲಿ ಯಾವುದೇ ಅವಗಡಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸುವಂತೆ ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಮನವಿ ಮಾಡಿದರು.

ರಾಮನಾಥಪುರ ಹೋಬಳಿ ಕೂಡಲೂರು ಗ್ರಾಮದ ಶ್ರೀ ಬಸವೇಶ್ವರ ಯುವಕ ಬಳಗ ವತಿಯಿಂದ ರಾಜ್ಯಮಟ್ಟದ ಜೋಡಿ ಎತ್ತಿನ ಗಾಡಿ ಮತ್ತು ಹಾಲು ಹಲ್ಲು ಮತ್ತು ಎರಡು ಹಲ್ಲು ಕರುಗಳ ಚಕ್ಕಡಿ ಗಾಡಿ ಓಟದ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಕೋರಿದರು.

ಈ ಕಾರ್ಯಕ್ರಮದಲ್ಲಿ ಮುಖಂಡರಾದ ಮೊಗಣ್ಣ, ರೇವಣ್ಣ ಟ್ರೋಫಿ ದಾನಿಗಳಾದ ವಿನಯ್, ಶ್ರೀ ಬಸವೇಶ್ವರ ಯುವಕರ ಸಂಘದ ಪದಾಧಿಕಾರಿಗಳಾದ ಪ್ರಸನ್ನ, ದರ್ಶನ್, ವೇಣು, ಸೋಮೇಶ್, ಗಜಾನನ, ಪಾಲಾಕ್ಷ, ಅಭಿಷೇಕ್, ಯಶವಂತ, ರಕ್ಷಿತ್, ಸುಮಂತ್, ರವಿ, ಲೋಕೇಶ್, ಮನು, ಪವನ್ ಮುಂತಾದವರು ಭಾಗವಹಿಸಿದ್ದರು.