ಸಾರಾಂಶ
ವಿಜಯಪುರ: ದೇಶೀಯ ಕ್ರೀಡೆಗಳಿಂದ ದೈಹಿಕ-ಮಾನಸಿಕ ಸದೃಢತೆ ಕಾಪಾಡಿಕೊಳ್ಳಬೇಕು ಎಂದು ವಾಲಿಬಾಲ್ ಕ್ರೀಡಾಪಟು ಶ್ರೀರಾಮಪ್ಪ ಹೇಳಿದರು.
ವಿಜಯಪುರ: ದೇಶೀಯ ಕ್ರೀಡೆಗಳಿಂದ ದೈಹಿಕ-ಮಾನಸಿಕ ಸದೃಢತೆ ಕಾಪಾಡಿಕೊಳ್ಳಬೇಕು ಎಂದು ವಾಲಿಬಾಲ್ ಕ್ರೀಡಾಪಟು ಶ್ರೀರಾಮಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಹಸ್ರ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಾಲಿಬಾಲ್ ಕ್ರೀಡೆ ವಿರಲು ಸಾಧ್ಯ. ಮುಂದಿನ ಪೀಳಿಗೆಗೂ ದೇಶೀಯ ಕ್ರೀಡೆಗಳನ್ನು ಪರಿಚಯ ಮಾಡಿಸಬೇಕಿದೆ. ಕ್ರಿಕೆಟ್‌ನಂತೆ ಈ ಕ್ರೀಡೆಯೂ ಹೆಚ್ಚು ಪ್ರಚಲಿತವಾಗಿದ್ದು, ಇಂತಹ ಅವಕಾಶಗಳನ್ನು ಯುವಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಯುವಮುಖಂಡ ಗಿರೀಶ್ ಮಾತನಾಡಿ, ಯುವಕರಲ್ಲಿ ಕ್ರೀಡಾ ಮನೋಭಾವ ವೃದ್ಧಿಗೊಳಿಸಬೇಕು, ಯುವಕರನ್ನು ಒಂದುಗೂಡಿಸಲು ವಾಲಿಬಾಲ್ ಕ್ರೀಡಾಕೂಟ ಹೆಚ್ಚು ಉಪಕಾರಿ. ಇದು ರಾಜ್ಯ ಮಟ್ಟದ ಕ್ರೀಡಾಕೂಟ ಆಗಿದ್ದು, ೨೨ ತಂಡಗಳ ಆಟಗಾರರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.ಆಯೋಜಕರಾದ ಸುಜಯ್, ಅರುಣ್ ಕುಮಾರ್, ಟೈಲರ್ ಮಂಜುನಾಥ್,ಕೇಶವ, ಶ್ರೀನಿವಾಸ್, ಅಭಿ, ಬಾಬು ಇತರರಿದ್ದರು.