ಸಾರಾಂಶ
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಮಕ್ಕಳು ಸ್ನೇಹಿತರ ಜೊತೆ ಆಟಗಳನ್ನು ಆಡುವುದರಿಂದ ದೈಹಿಕ ಚಟುವಟಿಕೆಯುಕ್ತ ಚುರುಕುತನ ಮೂಡುತ್ತದೆ. ಮೊಬೈಲ್‌ಗಳನ್ನು ಬಳಸುವ ವಯಸ್ಸು ನಿಮ್ಮದಲ್ಲ. ಮೊಬೈಲ್‌ಗಳಿಂದ ದೂರವಿರಬೇಕು ಎಂದು ಕೆಪಿಸಿ ಶಾಲೆಯ ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿಯ ಉಪಾದ್ಯಕ್ಷ ನಿರ್ವಾಣೇಗೌಡ (ಟಿ.ವಿ.ಕುಮಾರ್) ತಿಳಿಸಿದರು.೨೦೨೪-೨೫ ನೇ ಸಾಲಿನ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯಲ್ಲಿ ಮುಖ್ಯ ಅಥಿತಿಗಳಾಗಿ ಬಾಗವಹಿಸಿ ಮಾತನಾಡಿದರು. ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ, ಪಾಠಗಳಂತೆ ಆಟಗಳಲ್ಲೂ ಭಾಗವಹಿಸಿ ಶಾಲೆಗೆ, ಗ್ರಾಮಕ್ಕೆ ಕೀರ್ತಿ ತರುವಂತೆ ತಿಳಿಸಿದರು.
ರಾಮನಾಥಪುರ ಹೊಬಳಿ ಸಂಯೋಜಕ ಸದಾಶಿವಪ್ಪ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವಲ್ಲಿ ಇರುವ ವೇದಿಕೆಯೇ ಪ್ರತಿಭಾ ಕಾರಂಜಿಯಾಗಿದೆ. ಕ್ಲಸ್ಟರ್ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ ಕೀರ್ತಿ ತರುವಂತೆ ಸ್ಪರ್ಧಿಗಳಿಗೆ ತಿಳಿಸಿದರು.ಶಿಕ್ಷಣ ಇಲಾಖೆ ಬಸವಾಪಟ್ಟಣ ಕೆ.ಪಿ.ಎಸ್ ಶಾಲೆಯ ಕ್ಲಸ್ಟರ್ ಮಟ್ಟದ ಪ್ರತಿಬಾ ಕಾರಂಜಿಯಲ್ಲಿ ಸುಮಾರು ೧೨ ಶಾಲೆಗಳು ಭಾಗವಹಿಸಿದ್ದವು. ಕಿರಿಯ ಪ್ರಾಥಮಿಕ ಪಾಠಶಾಲೆ ೧೨ ಮತ್ತು ಹಿರಿಯ ಪ್ರಾಥಮಿಕ ಪಾಠಶಾಲೆಗಳಿಗೆ ೧೫ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಪ್ರಮುಖವಾಗಿ ಛದ್ಮವೇಷಧಾರಿ, ಕಥೆ ಹೇಳುವುದು, ದೇಶಭಕ್ತಿಗೀತೆ, ಬಾವಗೀತೆ, ಮಿಮಿಕ್ರಿ, ಕ್ಲೇ ಮಾಡೆಲ್ (ಮಣ್ಣಿನ ಮಾದರಿ) ಚಿತ್ರ ಬಿಡಿಸುವ ಸ್ವರ್ಧೆ ಇನ್ನು ಹಲವು ಸ್ಪರ್ದೆಗಳನ್ನು ಏರ್ಪಡಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಗೆ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಸಯ್ಯದ್ ಸಮೀರ್ ಮತ್ತು ಸುಖೇಶ್ ಧನಸಹಾಯ ಮಾಡಿದರು. ಎಸ್.ಡಿ ಎಂ.ಸಿ ಅಧ್ಯಕ್ಷರಾದ ನಿರ್ವೇಣೇಗೌಡ ವಿಜೇತರಿಗೆ ಬಹುಮಾನ ನೀಡಿದರು.ಸಂಯೋಜಕರಾದ ವಿಶ್ವೇಶ್ವರಯ್ಯ, ಶಿಕ್ಷಕ ಸಂಘದ ಪ್ರತಿನಿಧಿ ಮಂಜೇಗೌಡ, ಬಸವಾಪಟ್ಟಣ ಗ್ರಾಪಂ ಅಧ್ಯಕ್ಷ ರಾದಶೇಖರ್, ಕೆಪಿಎಸ್ ಶಾಲೆಯ ಮುಖ್ಯಶಿಕ್ಷಕಿ ಸರಸ್ವತಿ, ಶಿಕ್ಷಕರಾದ ಸೈಯದ್ ಜಮೀರ್, ಲೋಕೆಶ್, ನಿಂಗೇಗೌಡ, ವಿಜಯಕುಮಾರಿ ಇದ್ದರು.ಫೋಟೋ: ಬಸವಾಪಟ್ಟಣದಲ್ಲಿ ಆಯೋಜಿಸಿದ ಪ್ರತಿಭಾ ಕಾರಂಜಿಯಲ್ಲಿ ಕೆಪಿಸಿ ಶಾಲೆಯ ಶಾಲಾಬಿವೃದ್ದಿ ಉಸ್ತುವಾರಿ ಸಮಿತಿಯ ಉಪಾದ್ಯಕ್ಷ ನಿರ್ವಾಣೇಗೌಡ ಮಾತನಾಡಿದರು.