ವ್ಯಕ್ತಿಯ ಜೀವನ ಪರಿಪೂರ್ಣವಾಗಿಸುವ ಶಿಕ್ಷಕರು: ಶಾಸಕ ಜಿ.ಎಚ್.ಶ್ರೀನಿವಾಸ್

| Published : Sep 06 2024, 01:08 AM IST

ಸಾರಾಂಶ

ತರೀಕೆರೆ, ಶಿಕ್ಷಣಕ್ಕೆ ಪರಿವರ್ತನೆ ಶಕ್ತಿ ಇದೆ. ಅದರಂತೆ ಶಿಕ್ಷಕರು ವ್ಯಕ್ತಿಯ ಜೀವನವನ್ನು ಪರಿಪೂರ್ಣವಾಗಿಸುತ್ತಾರೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ತರೀಕೆರೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ । ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಶಿಕ್ಷಣಕ್ಕೆ ಪರಿವರ್ತನೆ ಶಕ್ತಿ ಇದೆ. ಅದರಂತೆ ಶಿಕ್ಷಕರು ವ್ಯಕ್ತಿಯ ಜೀವನವನ್ನು ಪರಿಪೂರ್ಣವಾಗಿಸುತ್ತಾರೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು ಜಿಲ್ಲೆ, ತಾಲೂಕು ಅಡಳಿತ, ತರೀಕೆರೆ-ಅಜ್ಜಂಪುರ, ಪುರಸಭೆ ತರೀಕೆರೆ,ಅಜ್ಜಂಪುರ ಪಪಂ, ಜಿಲ್ಲಾ-ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ, ಉಪ ನಿರ್ದೇಶಕರ ಕಚೇರಿ (ಅಡಳಿತ) (ಅಭಿವೃದ್ದಿ) ಚಿಕ್ಕಮಗಳೂರು ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಯಿಂದ ಪಟ್ಟಣದ ಶ್ರೀ ಗುರು ಸಿದ್ದರಾಮೇಶ್ವರ ಮಾಂಗಲ್ಯ ಮಂದಿರದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ 137ನೇ ಜನ್ಮ ದಿನೋತ್ಸವ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಮಚ್ಚು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗುರುಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನೋತ್ಸವವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಅಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ ರಾಷ್ಟ್ರಪತಿ ಗಳಾಗಿರುವುದು ಬಹಳ ದೊಡ್ಡ ಸಾಧನೆ. ಶಿಕ್ಷಕರನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ. ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಬಹಳ ಕಷ್ಟ ಪಟ್ಟು ಶಿಕ್ಷಣ ಕಲಿತರು, ಜಾಗೃತರಾಗಬೇಕು, ಶಿಕ್ಷಣಕ್ಕೆ ಹೆಚ್ಚು ಮಹತ್ವವಿದೆ ಎಂದರು.

ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಮಕ್ಕಳ ಬಗ್ಗೆ ಹೆಚ್ಚು ಶ್ರಮ ವಹಿಸಿ, ಮಕ್ಕಳನ್ನು ತಿದ್ದಿ ತೀಡುತ್ತಾರೆ. ಸರ್ಕಾರ 7ನೇ ವೇತನ ಆಯೋಗ ಜಾರಿಗೆ ತಂದಿದೆ. ವಿಶೇಷ ತರಗತಿಗಳನ್ನು ಆಯೋಜಿಸಿ ಎಸ್ ಎಸ್ ಎಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ತರಬೇಕು ಎಂದ ಅವರು, ಪಟ್ಟಣದಲ್ಲಿ ಗುರುಭವನ ನಿರ್ಮಾಣಕ್ಕೆ ತಾವು ಸಹಕರಿಸುವುದಾಗಿ ಹೇಳಿದರು.

ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮಾತನಾಡಿ ಜ್ಞಾನಕ್ಕಿಂತ ಮಿಗಿಲಾದ ವರವಿಲ್ಲ, ಸುಜ್ಞಾನದ ಕಡೆಗೆ ಶಿಕ್ಷಕರು ಕರೆದೊಯ್ಯುತ್ತಾರೆ, ಗುರುವಿಗೆ ಗೌರವ ಕೊಡಬೇಕು ಎಂದು ಹೇಳಿದರು.

ಖ್ಯಾತ ಕನ್ನಡ ವಿದ್ವಾಂಸ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ನೀವು ಹೇಗೆ ಆಲೋಚಿಸುತ್ತೀರಿ ಅದೇ ಸರಿಯಾದ ಗುರಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೆಚ್ಚು ಮಾತನಾಡಲು ಅವಕಾಶವಿರುವುದು ಶಿಕ್ಷಕರಿಗೆ ಮಾತ್ರ, ನಿಮ್ಮ ಮಾತು ಬಹಳಷ್ಟು ಕಾಲ ಉಳಿಯುತ್ತದೆ. ನಿಮ್ಮ ಅಂತರಂಗ ಭದ್ರವಾಗಿರ ಬೇಕು. ಮಗುವಿನ ಮನಸ್ಸಿನ ಮೇಲೆ ನಿಮ್ಮ ಪ್ರಭಾವ ಇದೆ, ಮಕ್ಕಳ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ನೀವು ಇರುತ್ತೀರಿ, ನಾವು ಸ್ವಚ್ಚವಾಗಿರಬೇಕು, ಶಿಕ್ಷಕ ವೃತ್ತಿಯನ್ನು ಬಹಳ ನೆಮ್ಮದಿಯಿಂದ ಕಳೆಯರಿ ಎಂದು ಸಲಹೆ ಮಾಡಿದರು.

ಬರಿ ಮಾಹಿತಿ ಜ್ಞಾನ ಅಲ್ಲ, ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡು ಮೆದುಳಿಗಿಂತ ಮನಸ್ಸಿಗೆ ಪಾಠ ಮಾಡಬೇಕು ಎಂದ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದಪ್ಪ ಮಾತನಾಡಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ತರೀಕೆರೆಯಲ್ಲಿ ಆಯೋಜಿಸಲಾಗಿದೆ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ದೊಡ್ಡ ತತ್ವಜ್ಞಾನಿಗಳು, ಶಿಕ್ಷಕ ವೃತ್ತಿಗೆ ಘನತೆ ತಂದುಕೊಟ್ಟವರು, ದೊಡ್ಡ ಸಾಧನೆ ಮಾಡಿದವರು, ಪವಿತ್ರವಾದ ಹುದ್ದೆ ಶಿಕ್ಷಕ ವೃತ್ತಿ, ಒಳ್ಳೆಯ ಸಮಾಜ ಸೃಷ್ಠಿ.ಯಾಗಬೇಕು. ಎಲ್ಲರಿಗ ಶಿಕ್ಷಣ ತಲುಪಿಸಬೇಕು, ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ಶಿಕ್ಷಣದ ಬಗ್ಗೆ ಪ್ರೀತಿ ಇದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ (ವರ್ಮ) ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಸಾ.ಶಿ.ಇ.ಉಪ ನಿರ್ದೇಶಕ ಜಿ.ಕೆ.ಪುಟ್ಚರಾಜು, ಶಿಕ್ಷಕ ಎಂ.ಬಿ.ರಾಮಚಂದ್ರಪ್ಪ ಮತ್ತಿತರರು ಮಾತನಾಡಿದರು.

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ನೆರವೇರಿಸಲಾಯಿತು, ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.-- ಬಾಕ್ಸ್--

ಶಕ್ತಿಯುತ ಸಮಾಜ ಬೆಳೆಸಿ: ಡಿಸಿ ಮೀನಾ

ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯನ್ನು 15ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ತಂದಿದ್ದೀರಿ ಎಲ್ಲರಿಗೂ ಶುಭಾಷಯಗಳು ಎಂದು ಚಿಕ್ಕಮಗಳೂರು ಜಿಲ್ಲಾ ಧಿಕಾರಿ ಮೀನಾ ನಾಗರಾಜ್ ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಚಿಕ್ಕಮಗಳೂರು ಜಿಲ್ಲೆ ಕಲೆ ಸಾಹಿತ್ಯ ಇರುವ ಜಿಲ್ಲೆ, ಎಲ್ಲ ಮಕ್ಕಳಿಗೂ ಮಂಡಳಿ ಪರೀಕ್ಷೆಗೆ ಹೇಗೆ ಸಿದ್ದರಾಗಬೇಕು. ಎಲ್ಲರೂ ಕೈಜೋಡಿಸಿ ಜಿಲ್ಲೆಯ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರಥಮ ಸ್ಥಾನ ತನ್ನಿ, ನಾವು ಶಿಕ್ಷಕರನ್ನು ನೆನಪಿಸಿ ಕೊಳ್ಳುತ್ತೇವೆ, ಶಿಕ್ಷಣದಿಂದ ಯಾರೂ ಹೊರಗಡೆ ಇರಬಾರದು. ಒಂದನೇ ಕ್ಲಾಸಿನಿಂದಲೇ ಹೆಚ್ಚು ಒತ್ತು ಕೊಡಬೇಕು, ಬದಲಾವಣೆ ತನ್ನಿ, ಶಕ್ತಿಯುತವಾದ ಸಮಾಜವನ್ನು ಬೆಳೆಸಬೇಕು ಎಂದು ಹೇಳಿದರು.

--

5ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 137ನೇ ಜನ್ಮ ದಿನೋತ್ಸವ ಅಂಗವಾಗಿ ಜಿಲ್ಲಾ ಮಚ್ಚು ತಾಲೂಕು, ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆಯನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ನೆರವೇರಿಸಿದರು. ಶಾಸಕ ಜಿ.ಎಚ್.ಶ್ರೀನಿವಾಸ್, ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ (ವರ್ಮ) ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮತ್ತಿತರರು ಇದ್ದರು.