ಸಮೂಹ ಗಾಯನ ಸ್ಪರ್ಧೆ, ಭಾರತ್‌ ಕೋ ಜಾನೋ ರಸಪ್ರಶ್ನೆ ಕಾರ್ಯಕ್ರಮ

| Published : Sep 06 2024, 01:08 AM IST

ಸಾರಾಂಶ

ಭಾರತ್ ವಿಕಾಸ ಪರಿಷದ್‌ನ ಸ್ವಾಮಿ ವಿವೇಕಾನಂದ ಶಾಖೆ ದಾವಣಗೆರೆ ವತಿಯಿಂದ ಮಕ್ಕಳಲ್ಲಿ ದೇಶಭಕ್ತಿ, ಸಂಸ್ಕಾರ, ಸುಜ್ಞಾನ ಬೆಳಸುವ ಉದ್ದೇಶದಿಂದ ನಗರದ ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶಾಖಾ ಮಟ್ಟದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ ಹಾಗೂ ಭಾರತ್ ಕೋ ಜಾನೊ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ದಾವಣಗೆರೆ: ಭಾರತ್ ವಿಕಾಸ ಪರಿಷದ್‌ನ ಸ್ವಾಮಿ ವಿವೇಕಾನಂದ ಶಾಖೆ ದಾವಣಗೆರೆ ವತಿಯಿಂದ ಮಕ್ಕಳಲ್ಲಿ ದೇಶಭಕ್ತಿ, ಸಂಸ್ಕಾರ, ಸುಜ್ಞಾನ ಬೆಳಸುವ ಉದ್ದೇಶದಿಂದ ನಗರದ ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶಾಖಾ ಮಟ್ಟದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ ಹಾಗೂ ಭಾರತ್ ಕೋ ಜಾನೊ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಸಮೂಹ ಗಾಯನ ಸ್ಪರ್ಧೆಯಲ್ಲಿ ರಾಷ್ಟ್ರಜ್ಞಾನ ವಿದ್ಯಾಲಯ ಸಿಬಿಎಸ್‌ಇ ಸ್ಕೂಲ್(ಪ್ರಥಮ) ಶಿರಮಗೊಂಡನಹಳ್ಳಿಯ ಅನ್ಮೋಲ್ ಶಾಲೆ (ದ್ವಿತೀಯ)ಯ ಮಕ್ಕಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಭಾರತ್ ಕೋ ಜಾನೋ ಸ್ಪರ್ಧೆಯಲ್ಲಿ ಜೂನಿಯರ್ ವಿಭಾಗದಲ್ಲಿ ಬಾಪೂಜಿ ಹೈಯರ್ ಪ್ರೈಮರಿ ಇಂಗ್ಲಿಷ್ ಮೀಡಿಯಂ ಸಿಬಿಎಸ್‌ಸಿ ಶಾಲಾ ವಿದ್ಯಾರ್ಥಿಗಳಾದ ಪ್ರಚೀತಾ ಎಸ್.ರಾಜ್ ಮತ್ತು ಚಿನ್ಮಯ್ ಆರ್.ಕಲಾಲ್ ಇವರು ಪ್ರಥಮ ಬಹುಮಾನ, ಬಿಇಎ ಹೈಯರ್ ಪ್ರೈಮರಿ ಸಿಬಿಎಸ್‌ಸಿ ಸ್ಕೂಲ್‌ನ ವಿದ್ಯಾರ್ಥಿಗಳಾದ ಎ.ಜೆ.ಶಶಾಂಕ್, ಮೋಕ್ಷ ದ್ವಿತೀಯ ಬಹುಮಾನವನ್ನು ಪಡೆದಿದ್ದು, ಇವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಸೀನಿಯರ್ ವಿಭಾಗದಿಂದ ಸಿದ್ಧಗಂಗಾ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಆರ್.ಅಜಯ್ ಕುಮಾರ, ಭೂಮಿಕಾ ಇಟಗಿ (ಪ್ರಥಮ),ಅಮೃತ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಸಾತ್ವಿಕ್ ಪಾಂಡು ಮತ್ತು ಅನನ್ಯ ನಿಗಮ್ (ದ್ವಿತೀಯ) ಅವರು ನಗದು, ಪಾರಿತೋಷಕ ನೀಡಿ ಗೌರವಿಸಿದರು. ಭಾರತ್ ವಿಕಾಸ ಪರಿಷತ್ ಅಧ್ಯಕ್ಷ ಮೌನೇಶಪ್ಪ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟೀನ್ ಡಿಸೋಜ, ಮಾಗನೂರು ಬಸಪ್ಪ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಪ್ರಸಾದ್ ಬಂಗೇರ, ನಿಕಟಪೂರ್ವ ಅಧ್ಯಕ್ಷ ಎಲ್.ವಿ.ನಾಗಾನಂದ್ ಭಾಗವಹಿಸಿದ್ದರು.