ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಗಳಾಗಿ ಸಮಾಜಕ್ಕೆ ಮಾದರಿಯಾಗಲಿ: ಇಸ್ರೋ ಇಂಜಿನಿಯರ್ ಶಾಜಹಾನ್

| Published : Sep 17 2025, 01:05 AM IST

ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಗಳಾಗಿ ಸಮಾಜಕ್ಕೆ ಮಾದರಿಯಾಗಲಿ: ಇಸ್ರೋ ಇಂಜಿನಿಯರ್ ಶಾಜಹಾನ್
Share this Article
  • FB
  • TW
  • Linkdin
  • Email

ಸಾರಾಂಶ

ಜಯನಗರ ಡಿವಿಷನ್ ಅತ್ಯಂತ ಹೆಚ್ಚು ಅಂಕ ಗಳಿಸುವ ಮೂಲಕ ಚಾಂಪಿಯನ್ ಆಯಿತು. ಕೆ.ಆರ್‌.ಪುರಂ ಡಿವಿಷನ್ 2ನೇ ಸ್ಥಾನ, ಶಿವಾಜಿನಗರ ಡಿವಿಷನ್ ತೃತೀಯ ಸ್ಥಾನವನ್ನು ಪಡೆದುಕೊಂಡವು.

ಬೆಂಗಳೂರು: ವಿದ್ಯಾರ್ಥಿಗಳು ಎಲ್ಲಾ ವಿಭಾಗದಲ್ಲೂ ಪ್ರಾವೀಣ್ಯತೆಯನ್ನು ಪಡೆದು ಬಹುಮುಖ ಪ್ರತಿಭೆಗಳಾಗಿ ಸಮಾಜಕ್ಕೆ ಮಾದರಿಯಾಗಬೇಕು. ಉತ್ತಮ ಭವಿಷ್ಯ ರೂಪಿಸಲು ಇದು ಸಹಕಾರಿಯಾಗಬಹುದು. ಈ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ಎಲ್ಲಾ ವರ್ಷ ನಡೆಸಿಕೊಂಡು ಬರುವ ಸಾಹಿತ್ಯೋತ್ಸವ ಅತ್ಯಂತ ಶ್ಲಾಘನೀಯ ಎಂದು ಇಸ್ರೋ ಬೆಂಗಳೂರು ಹೆಡ್‌ಕ್ವಾರ್ಟರ್ಸ್ ಉಪ ನಿರ್ದೇಶಕರಾದ ಶಹಜಹಾನ್.ಕೆ ಹೇಳಿದ್ದಾರೆ.ಲಾಲ್‌ಬಾಗ್‌ನ ಅಲ್-ಅಮೀನ್ ಪಿ.ಯು. ಕಾಲೇಜಿನಲ್ಲಿ ನಡೆದ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಅಧ್ಯಕ್ಷರಾದ ಫಾರೂಕ್ ಅಮಾನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಯ್ಯದ್ ಇಬ್ರಾಹಿಂ ಬಾಫಖಿ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಅಲಿ ಸ್ವಾಗತಿಸಿದರು. ಎಸ್.ಎಮ್.ಎ ಜಿಲ್ಲಾಧ್ಯಕ್ಷ ಅಬ್ದುಲ್ ಹಕೀಂ ಆರ್.ಟಿ ನಗರ, ಕೆ.ಎಂ.ಜೆ ಅಧ್ಯಕ್ಷರಾದ ಮೌಲಾನ ಹುಸೈನ್ ಮಿಸ್ಬಾಹಿ, ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಸ‌ಅ‌ದಿ ಕಿನ್ಯ, ಅಲ್ ಅಮೀನ್ ವಿದ್ಯಾಸಂಸ್ಥೆಯ ಜೊತೆ ಕಾರ್ಯದರ್ಶಿ ಎಂ.ಜೆಡ್.ಅಲೀ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬೆಳಗ್ಗೆ ನಡೆದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಮುಹಮ್ಮದ್ ಕೋಯಾ ತಂಙಳ್ ಮತ್ತು ಸಯ್ಯದ್ ಮಿಸ್ಅಬ್ ಅಲ್ ಹೈದ್ರೊಸಿ ತಂಙಳ್ ನೇತೃತ್ವ ನೀಡಿದರು. ಐದು ವೇದಿಕೆಗಳಲ್ಲಿ ನೂರ ಇಪ್ಪತ್ತಕ್ಕೂ ಹೆಚ್ಚು ಸ್ಪರ್ಧೆಗಳು ನಡೆದಿದ್ದು, ಏಳು ಡಿವಿಷನ್‌ಗಳಿಂದ ಆಯ್ಕೆಯಾದ ಸುಮಾರು 400 ಸ್ಪರ್ಧಾರ್ಥಿಗಳು ಭಾಗವಹಿಸಿದರು. ತೀರ್ಪುಗಾರರಾಗಿ ಡಾ.ಸಿ.ಎಂ ಹನೀಫ್ ಅಂಜದಿ, ಆರಿಫ್ ಸ‌ಅದಿ ಭಟ್ಕಳ, ಸಯ್ಯದ್ ಹುಸೈನ್ ತಂಙಳ್, ನಾಸಿರ್ ಬಜ್ಪೆ, ಸಿನಾನ್ ಇಂದಬೆಟ್ಟು, ಶಮೀರ್ ಯಂಶ ಬೇಂಗಿಲ, ಸುಹೈಬ್ ರಝಾ ಸಖಾಫಿ, ಸ್ವಾಲಿಹ್ ತೋಡಾರ್, ಸ್ವಾಲಿಹ್ ದಾರಿಮಿ, ಅಶ್ರಫ್ ಅಮ್ಜದಿ ಸಹಕರಿಸಿದರು.ಜಿಲ್ಲೆಯಲ್ಲಿ ಈ ವರೆಗೆ ಸಂಘಟನೆಗೆ ನೇತೃತ್ವ ನೀಡಿದ ನಾಯಕರುಗಳ ಸಂಗಮ, ಕಾರ್ನ್‌ಬಾಲ್ ಕಾರ್ಯಕ್ರಮದಲ್ಲಿ ಬಶೀರ್ ಸಖಾಫಿ ವಾಣಿಯಂಬಲ, ಅಬ್ದುರಹ್ಮಾನ್ ಹಾಜಿ, ರಶೀದ್ ಹಾಜಿ, ಇಸ್ಮಾಯಿಲ್ ಸಹದಿ ಕಿನ್ಯ, ಸ್ವಾಲಿಹ್, ಜಲೀಲ್ ಹಾಜಿ, ಹಬೀಬ್ ನಾಳ, ಹಾರಿಸ್ ಮದನಿ, ಇಬ್ರಾಹಿಂ ಸಖಾಫಿ ಪಯೋಟ, ಕೆಎಂಜೆ ರಾಜ್ಯ ಕಾರ್ಯದರ್ಶಿ ಹಮೀದ್ ಬಜ್ಪೆ, ಎಸ್ಸೆಸ್ಸೆಫ್‌ ರಾಷ್ಟ್ರೀಯ ಕಾರ್ಯದರ್ಶಿ ಶರೀಫ್ ಮಾಸ್ಟರ್, ಎನ್‌ಸಿ ಅಬ್ದುಲ್ಲಾ, ಮುನೀರ್ ಕಾವುಂಬಾಡಿ, ಮುಸ್ತಫಾ ಅಲ್ ಅಹ್ಸನಿ, ತಾಜುದ್ದೀನ್ ಫಾಳಿಲಿ ಮುಂತಾದ ಗಣ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು.ಜಯನಗರ ಡಿವಿಷನ್‌‌ನ ಸಾಹಿಲ್ ಎ.ಕೆ. ಸ್ಟೇಜ್ ಸ್ಪರ್ಧೆಯಲ್ಲಿ ಅತೀ ಹೆಚ್ಚು ಅಂಕ ಗಳಿಸುವ ಮೂಲಕ ಸ್ಟಾರ್ ಆಫ್ ದಿ ಫೆಸ್ಟ್ , ಶಿವಾಜಿನಗರ ಡಿವಿಷನ್‌ನ ಮುಹಮ್ಮದ್ ಮುಆವಿಯಾ ಸ್ಟೆಜೇತರ ಸ್ಪರ್ಧೆಯಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ

ಪೆನ್ ಆಫ್ ದಿ ಫೆಸ್ಟ್ ಆಗಿ ಆಯ್ಕೆಯಾದರು. ಜಯನಗರ ಡಿವಿಷನ್ ಅತ್ಯಂತ ಹೆಚ್ಚು ಅಂಕ ಗಳಿಸುವ ಮೂಲಕ ಚಾಂಪಿಯನ್ ಆಯಿತು. ಕೆ.ಆರ್‌.ಪುರಂ ಡಿವಿಷನ್ 2ನೇ ಸ್ಥಾನ, ಶಿವಾಜಿನಗರ ಡಿವಿಷನ್ ತೃತೀಯ ಸ್ಥಾನವನ್ನು ಪಡೆದುಕೊಂಡವು.ರಾತ್ರಿ ನಡೆದ ಮಹಬ್ಬ ಇಶಲ್ ನೈಟ್ ಕಾರ್ಯಕ್ರಮದಲಿ ಪ್ರಖ್ಯಾತ ಹಾಡುಗಾರರು ಭಾಗವಹಿಸಿದ್ದರು. ಅನಸ್ ಸಿದ್ದೀಖಿ ಕಾಮಿಲ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮರಂಭದ ದುಆಕ್ಕೆ ಸಯ್ಯದ್ ಶೌಕತ್ ಅಲಿ ಸಖಾಪಿ ನೇತೃತ್ವ ನೀಡಿದರು.ರಾಜ್ಯ ಎಸ್.ಜೆ.ಎಂ ಕಾರ್ಯದರ್ಶಿ ತಾಜುದ್ದೀನ್ ಫಾಳಿಲಿ, ಎಸ್.ಜೆ.ಎಂ ಜಿಲ್ಲಾ ಕಾರ್ಯದರ್ಶಿ ಸಂಶುದ್ದೀನ್ ಅಝ್‌ಹರಿ, ಎಸ್.ವೈ.ಎಸ್ ರಾಜ್ಯ ನಾಯಕ ನಾಸಿರ್ ಕ್ಲಾಸಿಕ್, ಶಾಫಿ ಸಹದಿ ಮೆಜೆಸ್ಟಿಕ್ ಸೇರಿದಂತೆ ಹಲವಾರು ಉಲಮಾ ಉಮರಾ ಹಾಗೂ ಸಂಘಟನಾ ನಾಯಕರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಪ್ರೋಗ್ರಾಂ ಸಮಿತಿ ಚೇರ್ಮನ್ ವಾಜಿದ್ ಅಮ್ಜದಿ ಸ್ವಾಗತಿಸಿ, ಅಡ್ವೋಕೇಟ್ ನೌಫಲ್ ಮರ್ಝೂಖಿ ಧನ್ಯವಾದ ಸಲ್ಲಿಸಿದರು.