ಬ್ಯಾಂಕಿಂಗ್ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಬಗ್ಗೆ ಎಂಬಿಎ, ಎಂಸಿಎ, ಎಂಎಸ್‌ಡಬ್ಲ್ಯು, ಎಂಕಾಂ, ಎಂಎ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಸಿಎ, ಸಿಎಫ್, ಎಎಫ್, ಆರ್‌ಎಂ ಮತ್ತು ಎನ್ಐ, ಎಂಎಸ್‌ನಂತಹ ಸರ್ಟಿಫಿಕೇಟ್ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಬೇಕು.
ಮುಂಡರಗಿ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪೂರಕ ಅಧ್ಯಯನ ಕೈಗೊಂಡರೆ ಉದ್ಯೋಗ ಪಡೆಯಬಹುದು. ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳು ಉತ್ತಮ ಸಂವಹನ ಕೌಶಲ್ಯ ಹೊಂದಿದ್ದರೆ ಸೇಲ್ಸ್ ಕಂಟೆಂಟ್, ರೈಟಿಂಗ್, ಇನ್ಫ್ಲುಯೆನ್ಶೆರ್ ಮತ್ತು ಬೋಧನಾ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಪಡೆಯಬಹುದು ಎಂದು ಹುಬ್ಬಳ್ಳಿಯ ಶ್ರೇಯಸ್ ಮುರುಡೇಶ್ವರ ತಿಳಿಸಿದರು.
ಸ್ಥಳೀಯ ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಗುರುವಾರ ಪದವಿ ನಂತರದ ವೃತ್ತಿ ಅವಕಾಶಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಸೂಲ ವ್ಯಕ್ತಿಯಾಗಿ ಮಾತನಾಡಿದರು.ಬ್ಯಾಂಕಿಂಗ್ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಬಗ್ಗೆ ಎಂಬಿಎ, ಎಂಸಿಎ, ಎಂಎಸ್‌ಡಬ್ಲ್ಯು, ಎಂಕಾಂ, ಎಂಎ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಸಿಎ, ಸಿಎಫ್, ಎಎಫ್, ಆರ್‌ಎಂ ಮತ್ತು ಎನ್ಐ, ಎಂಎಸ್‌ನಂತಹ ಸರ್ಟಿಫಿಕೇಟ್ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಸಹಾಯಕ ಪ್ರಾಧ್ಯಾಪಕರಾದ ಡಾ. ವನಜಾಕ್ಷಿ ಭರಮಗೌಡರ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವೇಳಾಪತ್ರಿಕೆ ತಯಾರಿಸಿ ದಿನದಲ್ಲಿ 8ರಿಂದ 10 ಗಂಟೆಗಳ ಕಾಲ ವಿವಿಧ ಸ್ಪರ್ಧಾತ್ಮಕ ಪುಸ್ತಕಗಳನ್ನು ಅಧ್ಯಯನ ಮಾಡಿದಲ್ಲಿ ಯಶಸ್ಸು ಗಳಿಸಬಹುದು ಎಂದರು.ವಾಣಿಜ್ಯ ವಿಭಾಗದ ಉಪನ್ಯಾಸಕಿ ಸಂಗೀತ ಮರಳಿ, ಡಾ. ಆರ್.ಎಚ್. ಜಂಗನವಾರಿ ಮಾತನಾಡಿದರು. ಪ್ರಾ. ಡಾ. ಸಂತೋಷ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ಸಚಿನ್ ಉಪ್ಪಾರ, ಕೆ.ಕೆ. ಉಳ್ಳಾಗಡ್ಡಿ, ರಘುವೀರ್ ಕೊಂಚಿಗೇರಿ, ಅನುಷಾ ಬಳ್ಳಾರಿ, ಕೋಟೆಪ್ಪ ಗುಂಡಿಕೇರಿ ಉಪಸ್ಥಿತರಿದ್ದರು. ಜ್ಯೋತಿಕಾ ಪಿ. ನಿರೂಪಿಸಿ, ತೇಜಸ್ವಿನಿ ಪಾಟೀಲ ವಂದಿಸಿದರು.