ಕೊಡಗಿನ ಹಿರಿಯ ಸಾಹಿತಿ ನಾಗೇಶ್ ಕಾಲೂರು ಕೊಡವ ಭಾಷಾ ಆವೃತ್ತಿಗೆ ಸಂಪಾದಕರಾಗಿರುವ ಕನಕದಾಸರ ಸಮಗ್ರ ಸಾಹಿತ್ಯ ಕೃತಿ 15 ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಲಿದೆ.

ಕನ್ನಡಪ್ರಭವಾರ್ತೆ ಮಡಿಕೇರಿ

ಕೊಡಗಿನ ಹಿರಿಯ ಸಾಹಿತಿ ನಾಗೇಶ್ ಕಾಲೂರು ಕೊಡವ ಭಾಷಾ ಆವೃತ್ತಿಗೆ ಸಂಪಾದಕರಾಗಿರುವ ಕನಕದಾಸರ ಸಮಗ್ರ ಸಾಹಿತ್ಯ ಕೃತಿ 15 ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಲಿದೆ.

ಕನಕದಾಸರ ಸಮಗ್ರ ಸಾಹಿತ್ಯವು ಕೊಡವ ಭಾಷೆ ಸೇರಿದಂತೆ ಭಾರತದ 14 ಭಾಷೆಗಳಿಗೆ ಅನುವಾದಿಸಲ್ಪಟ್ಟಿದೆ. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದಿಂದ ಈ ಕೃತಿಗಳನ್ನು ಪ್ರಕಟಿಸಲಾಗಿದೆ.

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು 2013-24 ನೇ ಸಾಲಿನಲ್ಲಿ ಕನಕದಾಸರ ಸಮಗ್ರ ಸಾಹಿತ್ಯವನ್ನು ಕೊಡವ ಸೇರಿದಂತೆ ಭಾರತದ 14 ಭಾಷೆಗಳಿಗೆ ಅನುವಾದ ಮಾಡುವ ಯೋಜನೆ ಹಮ್ಮಿಕೊಂಡಿತ್ತು. ಪ್ರತೀ ಭಾಷೆಯೂ 3 ಸಂಪುಟಗಳಲ್ಲಿ ಮುದ್ರಣಗೊಂಡಿದೆ. ಕೊಡವ ಮತ್ತು ಕನ್ನಡ ಸಾಹಿತ್ಯ ಜಗತ್ತಿನಲ್ಲಿ ವಚನ ಸಾಹಿತ್ಯ ಬಿಟ್ಟರೆ ಇಷ್ಟೂ ಭಾಷೆಗಳಲ್ಲಿ ಕೃತಿಯೊಂದು ಪ್ರಕಟವಾಗಿರುವುದು ಇದೇ ಮೊದಲು.

ಕನಕದಾಸರ ಸಮಗ್ರ ಸಾಹಿತ್ಯ ಕೃತಿಯು ಕೊಡವ, ಇಂಗ್ಲೀಷ್, ಹಿಂದಿ, ಬೆಂಗಾಳಿ, ಮರಾಠಿ, ಪಂಜಾಬಿ, ಅಸ್ಸಾಮಿ, ಉದು೯, ತೆಲುಗು, ತಮಿಳು, ಮಲಯಾಳಂ, ಕೊಂಕಣಿ, ಬ್ಯಾರಿ, ತುಳು, ತೆಲುಗು, ಮುಂತಾದ 14 ಭಾಷೆಗಳಲ್ಲಿ ಅನುವಾದಗೊಂಡಿದೆ.

ಕೊಡವ ಭಾಷಾ ಕೖತಿಗಳಿಗೆ ಸಂಪಾದಕರಾಗಿ ನಾಗೇಶ್ ಕಾಲೂರು ಕಾರ್ಯನಿರ್ವಹಿಸಿದ್ದು, ಅನುವಾದಕರಾಗಿ ನಾಗೇಶ್ ಕಾಲೂರು, ಬಾಚರಣಿಯಂಡ ಅಪ್ಪಣ್ಣ, ರಾಣುಅಪ್ಪಣ್ಣ, ಮೊಣ್ಣಂಡ ಶೋಭಾ ಸುಬ್ಬಯ್ಯ, ಬಡಕಡಮ್ಮಂಡ ಕಸ್ತೂರಿ ಗೋವಿಂದಮಯ್ಯ, ದಿ. ಮುಲ್ಲೇಂಗಡ ಬೇಬಿ ಚೋಂದಮ್ಮ, ಮುಲ್ಲೇಗಂಡ ರೇವತಿ ಪೂವಯ್ಯ ಕಾಯ೯ನಿವ೯ಹಿಸಿದ್ದಾರೆ.

ಮೂರು ಸಂಪುಟಗಳ ಪೈಕಿ ಮೊದಲ ಸಂಪುಟದಲ್ಲಿ ಕನಕದಾಸರ 360 ಕೀತ೯ನೆಗಳು ಮತ್ತು ಮುಂಡಿಗೆಗಳು, ಎರಡನೇ ಸಂಪುಟದಲ್ಲಿ ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆ, ನಳಚರಿತ್ರೆ ಕಾವ್ಯಗಳು, ಮೂರನೇ ಸಂಪುಟದಲ್ಲಿ ಮೋಹನ ತರಂಗಿಣಿ ಮಹಾಕಾವ್ಯ ಸಾಹಿತ್ಯಗಳಿವೆ.

ಮೇ 15 ರಂದು ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದ ಸಾಂಸ್ಕೖತಿಕ ಸಮುಚ್ಚಯದಲ್ಲಿ ಸಂಜೆ 5 ಗಂಟೆಗೆ ಕನಕಶಿಲ್ಪವನದ ಲೋಕಾಪ೯ಣೆಯೊಂದಿಗೆ 14 ಕೃತಿಗಳ ಲೋಕಾಪ೯ಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.