ವಿವಿಧ ಗ್ರಾಮೀಣ ಕ್ರೀಡೆಗೆ ಬೆಂಬಲಿಸುವುದು ನಮ್ಮ ಮಣ್ಣಿನ ಗುಣ: ಭಂಡಾರಿ ಶ್ರೀನಿವಾಸ್

| Published : Oct 19 2024, 01:35 AM IST

ವಿವಿಧ ಗ್ರಾಮೀಣ ಕ್ರೀಡೆಗೆ ಬೆಂಬಲಿಸುವುದು ನಮ್ಮ ಮಣ್ಣಿನ ಗುಣ: ಭಂಡಾರಿ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಬಯಲು ಸೀಮೆಯಾಗಿರುವ ನಮ್ಮ ಕಡೂರು ತಾಲೂಕಿನ ಮಣ್ಣಿನ ಗುಣದಂತೆ ಕಬಡ್ಡಿ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು ಹಾಗು ಕ್ರೀಡಾ ಪಟುಗಳಿಗೆ ಮೊದಲಿನಿಂದಲೂ ಬೆನ್ನು ತಟ್ಟಿ ಬೆಂಬಲಿಸುತ್ತಾ ಬರುತ್ತಿದೆ ಎಂದು ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಕಡೂರಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಕನ್ನಡಪ್ರಭ ವಾರ್ತೆ, ಕಡೂರು

ಬಯಲು ಸೀಮೆಯಾಗಿರುವ ನಮ್ಮ ಕಡೂರು ತಾಲೂಕಿನ ಮಣ್ಣಿನ ಗುಣದಂತೆ ಕಬಡ್ಡಿ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು ಹಾಗು ಕ್ರೀಡಾ ಪಟುಗಳಿಗೆ ಮೊದಲಿನಿಂದಲೂ ಬೆನ್ನು ತಟ್ಟಿ ಬೆಂಬಲಿಸುತ್ತಾ ಬರುತ್ತಿದೆ ಎಂದು ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಕಡೂರಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಆರಂಭಗೊಂಡ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ 14 ಮತ್ತು 17 ವರ್ಷ ವಯೋಮಾನದ ಬಾಲಕ- ಬಾಲಕಿಯರ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಡೂರು ಪಟ್ಟಣದಲ್ಲಿ ಹಿಂದೆ ಕುಸ್ತಿ, ವಾಲಿಬಾಲ್‌ನಂತಹ ಕ್ರೀಡೆಗಳಲ್ಲಿ ರಾಜ್ಯಮಟ್ಟದಲ್ಲಿ ಸತತ ಗೆಲುವು ಸಾಧಿಸುತ್ತಿದ್ದು ಇತಿಹಾಸ.ನಮ್ಮ ದೇಸಿ ಕ್ರೀ ಡೆಗಳಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ನಮ್ಮಮಣ್ಣಿನ ಗುಣವಾಗಿದೆ. ಕಬಡ್ಡಿ ಆಟವು ನಮ್ಮ ಗ್ರಾಮೀಣ ಸೊಗಡಿನ ಕ್ರೀಡೆ ಆಗಿದ್ದು. ಇತ್ತೀಚೆಗೆ ಈ ಕಬಡ್ಡಿ ಆಟ ಅಂತಾರಾಷ್ಟ್ರೀಯ ಮಾನ್ಯತೆ ಪಡೆಯುತ್ತಿದೆ ಎಂದರು.

ಕಡೂರಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ಆಯೋಜನೆ ಮಾಡಲು ಮುಖ್ಯ ಕಾರಣ ನಮ್ಮ ಶಾಸಕರಾದ ಕೆ.ಎಸ್.ಆನಂದ್ ರವರ ಕ್ರೀಡಾಸಕ್ತಿ. ಕ್ರೀಡಾಭಿಮಾನಿಗಳು ಮತ್ತು ವಿವಿಧ ಇಲಾಖೆಗಳು, ಪುರಸಭೆಯಿಂದ ಅಗತ್ಯ ಸಹಕಾರ ನೀಡಿರುವುದರಿಂದ ಇಂತಹ ಕ್ರೀಡಾಕೂಟ ಇಲ್ಲಿ ಆಯೋಜನೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಕ್ರೀಡೆ ಗೆಲ್ಲಬೇಕು. ಕಬಡ್ಡಿ ಕ್ರೀಡಾಕೂಟ ನಮ್ಮೆಲ್ಲರನ್ನು ಬೆಸೆಯುವ ಕೂಟವಾಗಲಿ ಶಿಕ್ಷಕ ವೈ.ಎಂ.ಗೋಪಿಯವರ ಶ್ರಮ ಅಭಿನಂದನೀಯ ಎಂದರು.

ಕ್ರೀಡಾಕೂಟ ಉದ್ಘಾಟಿಸಿದ ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು ಮಾತನಾಡಿ, ಕಬಡ್ಡಿಯಂತಹ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕಾರಣವಾಗುವಂತಹ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ದೊರೆಯಬೇಕು ಎಂದರು.

ಪುರಸಭೆ ಸದಸ್ಯ ತೋಟದಮನೆ ಮೋಹನ್ ಮಾತನಾಡಿ, ಅಪಾರ ದೈಹಿಕ ಶ್ರಮ ಬೇಡುವ ಕಬಡ್ಡಿ ಕ್ರೀಡೆ ನಮ್ಮ ನಾಡಿನ ಸಂಸ್ಕೃತಿ, ಕಲೆಯ ಪ್ರತೀಕ ಎಂದು ಹೇಳಿ ಶುಭ ಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜು ನಾಯ್ಕ , ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಾಗರಾಜು ಮಾತನಾಡಿದರು. ಪುರಸಭೆ ಸದಸ್ಯ ಕೆ‌.ಎಂ .ಮೋಹನ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭೈರೇಗೌಡ, ತಾಲೂಕು ಅಧ್ಯಕ್ಷ ಕೆ.ಎಂ.ಹರೀಶ್, ಬಿಜಿಎಸ್ ಶಾಲಾ ಮುಖ್ಯಸ್ಥೆ ಸುಮಿತ್ರಾ, ಆರ್.ಪಿ.ವಸತಿ ಕಾಲೇಜು ಪ್ರಾಚಾರ್ಯ ರವಿಕಾಂತ್, ನಿವಾಸ್ ಕನ್ಸ್ ಟ್ರಕ್ಷನ್ಸ್ ಸಾಗರ್ ಜಗದೀಶ್, ಕ್ರೀಡಾ ಸಂಯೋಜಕ ವೈಎಂ. ಗೋಪಿ ಮತ್ತಿತರರು ಇದ್ದರು.