ಹಳೆ ವೈಷಮ್ಯ: ಸ್ನೇಹಿತರಿಂದಲೇ ಹತ್ಯೆ

| Published : Oct 19 2024, 01:34 AM IST

ಸಾರಾಂಶ

ಮಾಗಡಿ: 15 ದಿನಗಳ ಹಿಂದೆ ಸ್ನೇಹಿತರ ನಡುವೆ ನಡೆದಿದ್ದ ಜಗಳ ದ್ವೇಷಕ್ಕೆ ತಿರುಗಿ ಸ್ನೇಹಿತರಿಂದಲೇ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಗಡಿ: 15 ದಿನಗಳ ಹಿಂದೆ ಸ್ನೇಹಿತರ ನಡುವೆ ನಡೆದಿದ್ದ ಜಗಳ ದ್ವೇಷಕ್ಕೆ ತಿರುಗಿ ಸ್ನೇಹಿತರಿಂದಲೇ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ತರಕಾರಿ ವ್ಯಾಪಾರಿ ಪ್ರವೀಣ್(32) ಕೊಲೆಗೀಡಾಗಿರುವ ಯುವಕ. ಗುರುವಾರ ರಾತ್ರಿ 11 ಗಂಟೆಯಲ್ಲಿ ಪಟ್ಟಣದ ನಿರ್ಮಲಾ ಟಾಕೀಸ್ ಮುಂದೆ ಪಾನಮತ್ತನಾಗಿದ್ದ ಪ್ರವೀಣ್ ಮೇಲೆ ಏಕಾಏಕಿ ಸ್ನೇಹಿತರು ಬಂದು ಗಲಾಟೆ ಮಾಡಿ ಕಲ್ಲು ಹಾಕಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ತರಕಾರಿ ಮಾರಾಟದ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದ ಪ್ರವೀಣ್ ಹಾಗೂ ಸ್ನೇಹಿತರು ಗುರುವಾರ ರಾತ್ರಿ ಕುಡಿದ ಮತ್ತಿನಲ್ಲಿದ್ದ ವೇಳೆ ಪ್ರವೀಣನನ್ನು ಕೊಲೆ ಮಾಡಿದ್ದಾರೆನ್ನಲಾಗಿದೆ. ಎಫ್ ಎಸ್ ಎಲ್ ತಂಡ ಹಾಗೂ ಬೆರಳಚ್ಚು ತಂಡ ಸ್ಥಳಕ್ಕಾಗಮಿಸಿ ಪರೀಶೀಲಿಸಿದರು. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮೃತರಿಗೆ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದು ಕಳೆದ 15 ದಿನದ ಹಿಂದೆ ಅಷ್ಟೇ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡಿದ್ದರು.