ಆರೋಗ್ಯಕ್ಕೆ ಸಂಬಂಧಿಸಿದ ಕೃತಿ, ನಿಯತಕಾಲಿಕೆ ಓದು ಹೆಚ್ಚಾಗಬೇಕು

| Published : Feb 02 2025, 11:46 PM IST

ಆರೋಗ್ಯಕ್ಕೆ ಸಂಬಂಧಿಸಿದ ಕೃತಿ, ನಿಯತಕಾಲಿಕೆ ಓದು ಹೆಚ್ಚಾಗಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಪುಸ್ತಕದ ಅಗತ್ಯ ಮತ್ತಷ್ಟು ಹೆಚ್ಚಿದೆ. 1.30 ಲಕ್ಷ ಪದವೀಧರ ವೈದ್ಯರಿದ್ದು, ಅವರಲ್ಲಿ ಬರೆಯುವವರು 150 ಮಂದಿಯಷ್ಟೇ.

ಕನ್ನಡಪ್ರಭ ವಾರ್ತೆ ಮೈಸೂರು

ಆರೋಗ್ಯಕ್ಕೆ ಸಂಬಂಧಿಸಿದ ಕೃತಿ, ನಿಯತಕಾಲಿಕೆ ಓದು ಹೆಚ್ಚಾಗಬೇಕಿದೆ ಎಂದು ವೈದ್ಯ ಸಾಹಿತಿ ಡಾ.ನಾ. ಸೋಮೇಶ್ವರ ತಿಳಿಸಿದರು.

ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆಯಲ್ಲಿ ಭಾನುವಾರ ತಾಯಮ್ಮ ಪ್ರಕಾಶನ ಹೊರ ತಂದಿರುವ ‘ಸುಯೋಗ ವಾಣಿ’ ಎಂಬ ಕೌಟುಂಬಿಕ ಆರೋಗ್ಯ ಮಾಸಪತ್ರಿಕೆ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ದೊರೆಯುವ ಆರೋಗ್ಯ ಕುರಿತ ಮಾಹಿತಿ ಶೇ.95 ರಷ್ಟು ಸುಳ್ಳಾಗಿರುತ್ತದೆ ಎಂದರು.

ಆರೋಗ್ಯ ಪುಸ್ತಕದ ಅಗತ್ಯ ಮತ್ತಷ್ಟು ಹೆಚ್ಚಿದೆ. 1.30 ಲಕ್ಷ ಪದವೀಧರ ವೈದ್ಯರಿದ್ದು, ಅವರಲ್ಲಿ ಬರೆಯುವವರು 150 ಮಂದಿಯಷ್ಟೇ. ಕರ್ತವ್ಯ ಧರ್ಮವೆಂದು ವೈದ್ಯಕೀಯ ಬರಹಗಳನ್ನು ಬರೆಯುತ್ತಿರುವವರ ಸಂಖ್ಯೆಯು 30 ಮೀರುವುದಿಲ್ಲ. ಪಾರಿಭಾಷಿಕ ಪದಗಳು ಸಿಗುವುದು ಕಷ್ಟವೆಂಬ ಕುಂಟು ನೆಪಗಳನ್ನು ವೈದ್ಯರು ನೀಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸುಯೋಗ ವಾಣಿ ಮಾಸ ಪತ್ರಿಕೆಯನ್ನು ಪತ್ರಕರ್ತ ರವೀಂದ್ರ ಭಟ್ ಬಿಡುಗಡೆಗೊಳಿಸಿದರು. ವಿಶ್ರಾಂತ ಕುಲಪತಿ ಪ್ರೊ.ಎನ್‌.ಎಸ್. ರಾಮೇಗೌಡ, ಪತ್ರಿಕೋದ್ಯಮಿ ವಿಕ್ರಂ ಮುತ್ತಣ್ಣ, ಸುಯೋಗ ವಾಣಿ ಮಾಸಪತ್ರಿಕೆ ಪ್ರಧಾನ ಸಂಪಾದಕ ಡಾ.ಎಸ್.ಪಿ. ಯೋಗಣ್ಣ, ಸಹ ಸಂಪಾದಕರಾದ ಡಾ. ಸೀಮಾ ಯೋಗಣ್ಣ, ಡಾ.ಆರ್. ರಾಜೇಂದ್ರಪ್ರಸಾದ್, ಡಾ. ಸುಯೋಗ್ ಯೋಗಣ್ಣ, ಡಾ. ಯಶಿತಾ ರಾಜ್ ಮೊದಲಾದವರು ಇದ್ದರು.