ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಸನ ಹಾಗೂ ಟೆಕ್ಸಾಕ್, ಬೆಂಗಳೂರು ಅವರ ಸಂಯುಕ್ತಾಶ್ರಯದಲ್ಲಿ ಹಾಸನದ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಉದ್ದಿಮೆದಾರರಿಗೆ ತಾಂತ್ರಿಕ ಸಾಮರ್ಥ್ಯ ವೃದ್ಧಿಸುವುದು, ತಂತ್ರಜ್ಞಾನ ಅಳವಡಿಕೆ, ಮಾರುಕಟ್ಟೆ ಪ್ರವೇಶಿಸುವಲ್ಲಿ ಸಹಾಯ ಮತ್ತು ಆರ್ಥಿಕ ಸಾಕ್ಷರತೆಯಲ್ಲಿ ಮಾರ್ಗದರ್ಶನ ನೀಡುವಂತೆ ಹೆಚ್ಚಿನ ತಿಳಿವಳಿಕೆ ನೀಡಲು ಅರಿವು ಮೂಡಿಸುವಂತೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಹೊಸ ಬಗೆಯ ಉದ್ದಿಮೆಗಳ ಉತ್ತೇಜನಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಳ್ಳುವುದರ ಮೂಲಕ ಸದುಪಯೋಗ ಪಡೆದುಕೊಳ್ಳಿ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಉಮೇಶ ವಿ ಅವರು ತಿಳಿಸಿದ್ದಾರೆ.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಸನ ಹಾಗೂ ಟೆಕ್ಸಾಕ್, ಬೆಂಗಳೂರು ಅವರ ಸಂಯುಕ್ತಾಶ್ರಯದಲ್ಲಿ ಹಾಸನದ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಉದ್ದಿಮೆದಾರರಿಗೆ ತಾಂತ್ರಿಕ ಸಾಮರ್ಥ್ಯ ವೃದ್ಧಿಸುವುದು, ತಂತ್ರಜ್ಞಾನ ಅಳವಡಿಕೆ, ಮಾರುಕಟ್ಟೆ ಪ್ರವೇಶಿಸುವಲ್ಲಿ ಸಹಾಯ ಮತ್ತು ಆರ್ಥಿಕ ಸಾಕ್ಷರತೆಯಲ್ಲಿ ಮಾರ್ಗದರ್ಶನ ನೀಡುವಂತೆ ಹೆಚ್ಚಿನ ತಿಳಿವಳಿಕೆ ನೀಡಲು ಅರಿವು ಮೂಡಿಸುವಂತೆ ತಿಳಿಸಿದರು.

ಜಿಲ್ಲಾ ಲಘು ಉದ್ಯೋಗ ಭಾರತಿ, ನಿರ್ದೇಶಕರಾದ ಮದನ್‌ ಕುಮಾರ್‌ ಅವರು ಮಾತನಾಡಿ, ದೇಶದಲ್ಲಿ ಹೊಸ ಉದ್ದಿಮೆದಾರರಿಗೆ ಉದ್ದಿಮೆ ಮಾಡಲು ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಕೈಗಾರಿಕೆಗಳಿಗೆ ನೀಡುವ ಸಹಾಯ ಧನದ ಬಗ್ಗೆ ಮತ್ತು ಬ್ಯಾಂಕ್‌ನಿಂದ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಹಾಗೂ ಉದ್ದಿಮೆಯನ್ನು ಪ್ರಾರಂಭ ಮಾಡುವವರಿಗೆ ಶ್ರಮ, ಶ್ರದ್ಧೆ, ಸಂಯಮ ಇರಬೇಕೆಂದು ತಿಳಿಸಿದರು. ಹಾಸನ ಜಿಲ್ಲಾ ಕೆನರಾ ಲೀಡ್‌ ಬ್ಯಾಂಕ್ ವ್ಯವಸ್ಥಾಪಕರಾದ ಲತಾ ಸರಸ್ವತಿರವರು ಮಾತನಾಡಿ, ಒಂದು ದಿನದ ತರಬೇತಿಯ ಅಧಿವೇಶನವು ಹೊಸ ಉದ್ದಿಮೆದಾರರಿಗೆ ಅತ್ಯಮೂಲ್ಯ ಮಾಹಿತಿಯನ್ನು ಒದಗಿಸಿಕೊಡುವ ಕಾರ್ಯಾಗಾರವಾಗಿದೆ. ಬ್ಯಾಂಕ್ ಸಾಲ ಸೌಲಭ್ಯ ಕುರಿತು ಉದ್ದಿಮೆದಾರರ ದಾಖಲಾತಿಗಳು ಸರಿ ಇದ್ದಲ್ಲಿ, ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಸುಲಭವಾಗಿ ಪಡೆಯಬಹುದಾಗಿರುತ್ತದೆ ಎಂಬುದಾಗಿ ತಿಳಿಸಿದರು.

ಈ ಕಾರ್ಯಾಗಾರದಲ್ಲಿ ಹಾಸನ ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಶಿವರಾಮ್, ಜಿಲ್ಲಾ ಆರ್‌. ಸೆ.ಟಿ, ನಿರ್ದೇಶಕರಾದ ಸುಚಿತ್‌ ಕುಮಾರ್‌, ಜಿಲ್ಲಾ ಕೆ.ವಿ.ಐ.ಬಿ, ಜಿಲ್ಲಾಅಧಿಕಾರಿ ಉಮೇಶ್ ಶಂಕರರಾಜ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ಮೋಹನ್‌ ಕುಮಾರ್ ಬಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.