ಸಾರಾಂಶ
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ವೇದಿಕೆ ಮೂಲಕ ತಮ್ಮ ಪ್ರತಿಭೆ ಹೊರ ಹಾಕಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಬೇಕು
ಗ್ರಾಪಂ ಅಧ್ಯಕ್ಷ ಹರೀಶ್ ಕುಮಾರ್ ಅಭಿಮತಕನ್ನಡಪ್ರಭ ವಾರ್ತೆ ಮಲ್ಕುಂಡಿ
ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಸಲುವಾಗಿ ಇಂತಹ ವೇದಿಕೆ ಮುಖ್ಯವಾಗಿದ್ದು, ಇದಕ್ಕೆ ಪೋಷಕರ ಸಹಕಾರ ನೀಡಬೇಕೆಂದು ಗ್ರಾಪಂ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು. ಸಮೀಪದ ಅರಿಯೂರು ಗ್ರಾಮದಲ್ಲಿ ಅಯೋಜಿಸಿದ್ದ ಹಾಡ್ಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ವೇದಿಕೆ ಮೂಲಕ ತಮ್ಮ ಪ್ರತಿಭೆ ಹೊರ ಹಾಕಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಬೇಕು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯಿಂದ ಮಾತ್ರ ಮುಂದೆ ಬರಲು ಸಾಧ್ಯ ಎಂದು ತಿಳಿಸಿದರು. ಗ್ರಾಪಂ ಸದಸ್ಯ ಕೃಷ್ಣಮೂರ್ತಿ, ವಿಜಯಕುಮಾರ್, ಎಸ್.ಡಿಎಂಸಿ ಅದ್ಯಕ್ಷೆ ಗೀತಾ, ಮುಖ್ಯ ಶಿಕ್ಷಕ ಕೃಷ್ಣನಾಯಕ, ಶಿಕ್ಷಕ ವೃಂದ ಇದ್ದರು.