ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ

| Published : Nov 11 2025, 01:15 AM IST

ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಮಕ್ಕಳಿಗೆ ವೇದಿಕೆಯಾಗಿದೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಭೆ ಇದ್ದು, ಮುಕ್ತವಾಗಿ ಪ್ರದರ್ಶಿಸುವ ಮೂಲಕ ಯಶಸ್ಸು ಸಾಧಿಸಬೇಕು ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಅವರು ಶಿರಾ ತಾಲೂಕಿನ ಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಸೋಮವಾರ ನಡೆದ ಯರವರ ಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಭಾ ಕಾರಂಜಿ ಮಕ್ಕಳ ಮನೋ ಉಲ್ಲಾಸದ ಜೊತೆಗೆ , ಜ್ಞಾನವಿಕಾಸನಕ್ಕೆ ಸಹಕಾರಿಯಾಗುತ್ತದೆ ಎಂದರು.

ಬಿ.ಆರ್.ಪಿ ಸಿದ್ದಣ್ಣ ಮಾತನಾಡಿ ಪ್ರತಿಭೆ ನಿಮ್ಮದು, ಪುರಸ್ಕಾರ ನಮ್ಮದು ಎಂಬ ಧ್ಯೇಯದೊಂದಿಗೆ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿಯನ್ನು ಆಯೋಜನೆ ಮಾಡುವ ಮೂಲಕ ಮಕ್ಕಳ ಕೌಶಲ್ಯ ಗುರುತಿಸಿ ಗೌರವಿಸುವುದರ ಜೊತೆಗೆ, ಮಕ್ಕಳ ಸಾಧನೆಗೆ ವೇದಿಕೆ ಕಲ್ಪಿಸುತ್ತಿದೆ. ಶಿಕ್ಷಕರು ಯಾವುದೇ ತಾರತಮ್ಯ ಮಾಡದೆ ಮಕ್ಕಳ ಪ್ರತಿಭೆಯನ್ನು ಮಾತ್ರ ಪ್ರೋತ್ಸಾಹಿಸಬೇಕು ಎಂದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ದೇವರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣ ಇಲಾಖೆಯ ಇಸಿಓ ಯೋಗೇಂದ್ರ ನಾಯ್ಕ, ಗೋವಿಂದಪ್ಪ, ಕರಿಯಣ್ಣ, ಯಾರವರಹಳ್ಳಿ ಕ್ಲಸ್ಟರ್ ಸಿ ಆರ್ ಪಿ ಸುರೇಶ್ ಬಾಬು, ಎಚ್. ಸಿ. ಮಂಜುನಾಥ್, ಹೊಸೂರು ಗ್ರಾಮ ಪಂಚಾಯತಿ ಸದಸ್ಯ ಜುಂಜಯ್ಯ ನಾಯಕ, ಶಿಕ್ಷಕರಾದ ಭೂಕಾಂತಯ್ಯ, ರವೀಂದ್ರ ,ನವೀನ್ ಕುಮಾರ್ ಸೇರಿದಂತೆ ಹಲವಾರು ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.