ಧರ್ಮದ ಹೆಸರಿನಲ್ಲಿ ಕಲಹ ಸೃಷ್ಟಿಸುವ ಸಂಘಟನೆಗೆ ಕಡಿವಾಣಕ್ಕೆ ಮನವಿ

| Published : Nov 11 2025, 01:15 AM IST

ಧರ್ಮದ ಹೆಸರಿನಲ್ಲಿ ಕಲಹ ಸೃಷ್ಟಿಸುವ ಸಂಘಟನೆಗೆ ಕಡಿವಾಣಕ್ಕೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜಾತಿ ಧರ್ಮ ಹೆಸರಿನಲ್ಲಿ ಕಲಹ ಸೃಷ್ಟಿಸಿ ಬೆಂಕಿ ಹಚ್ಚುವ ಬ್ರಾಹ್ಮಣ್ಯ ಪಾರಮ್ಯದ ಆರ್‌ಎಸ್‌ಎಸ್ ಸಂಘಟನೆಗೆ ಸಂವಿಧಾನ ಬದ್ಧ ಕಡಿವಾಣ ಹಾಕಬೇಕು ಎಂದು ದಸಂಸ ಮುಖಂಡರು ತಹಸೀಲ್ದಾರ್ ಕೆ.ಎಸ್.ರೇಷ್ಮಾ ಮುಖಾಂತರ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿ ಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಾತಿ ಧರ್ಮ ಹೆಸರಿನಲ್ಲಿ ಕಲಹ ಸೃಷ್ಟಿಸಿ ಬೆಂಕಿ ಹಚ್ಚುವ ಬ್ರಾಹ್ಮಣ್ಯ ಪಾರಮ್ಯದ ಆರ್‌ಎಸ್‌ಎಸ್ ಸಂಘಟನೆಗೆ ಸಂವಿಧಾನ ಬದ್ಧ ಕಡಿವಾಣ ಹಾಕಬೇಕು ಎಂದು ದಸಂಸ ಮುಖಂಡರು ತಹಸೀಲ್ದಾರ್ ಕೆ.ಎಸ್.ರೇಷ್ಮಾ ಮುಖಾಂತರ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿ ಸಿದರು.ಈ ವೇಳೆ ಮಾತನಾಡಿದ ದಸಂಸ ತಾಲೂಕು ಪ್ರಧಾನ ಸಂಚಾಲಕ ಮಂಜುನಾಥ್ ನಂಬಿಯಾರ್ ಸಂವಿಧಾನ ಬದ್ಧವಾಗಿ ನೋಂದಣಿಯಾಗದ ಆರ್‌ಎಸ್‌ಎಸ್ ಸಂಘಟನೆ 18 ವರ್ಷ ಮೇಲ್ಪಟ್ಟ ವಯಸ್ಕರನ್ನು ಮಾತ್ರ ಸಂಘಟನೆ ಸದಸ್ಯರ ನ್ನಾಗಿಸಿಕೊಳ್ಳಬಹುದು. ಇದು ಅಪ್ರಾಪ್ತ ಮಕ್ಕಳ ಮೆದುಳಿನಲ್ಲಿ ಕೋಮುವಾದ, ಹಿಂದುತ್ವ ಜಾತಿ ಹೆಸರಿನಲ್ಲಿ ಕಲಹ ಸೃಷ್ಟಿಸುತ್ತಿದೆ ಎಂದರು.ಮುಖ್ಯವಾಗಿ ಆಯವ್ಯಯ ಲೆಕ್ಕಪತ್ರ ಆಡಿಟ್ ಮಾಡಿಸದೇ ಸರ್ಕಾರ ವಂಚಿಸುವ ಕಾರಣಕ್ಕೆ 1950 ರ ದಶಕದಲ್ಲಿಯೇ ಅಂಬೇಡ್ಕರ್ ಯಾವುದೇ ಕಾರಣಕ್ಕೂ ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾದಂತ ಪ್ರಗತಿ ವಿರೋಧಿ ಸಂಘಟನೆ ಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ತಮ್ಮ ರಾಜಕೀಯ ಪಕ್ಷ ಪ.ಜಾತಿ ಒಕ್ಕೂಟದ ಪ್ರಣಾಳಿಕೆಯಲ್ಲಿ ಎಚ್ಚರಿಸಿದ್ದರು ಎಂದು ಹೇಳಿದರು.ಸ್ವಾತಂತ್ರ್ಯ ಪೂರ್ವದ ನಂತರ ಇದೇ ಸಂಘಟನೆ ಪತ್ರಿಕೆ ಆರ್ಗನೈಸರ್‌ನಲ್ಲಿ ಭಾರತದ ಸಂವಿಧಾನದಲ್ಲಿ ಭಾರತೀಯ ವಾದದ್ದೂ ಏನಿಲ್ಲ, ವಾಸ್ತವವಾಗಿ ಮನುಸ್ಮೃತಿ ಅತ್ಯಂತ ಪ್ರಾಚೀನವಾಗಿದ್ದು ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರ ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನಿಲ್ಲ ಎಂದು ಟೀಕಿಸಲಾಗಿತ್ತು ಎಂದು ತಿಳಿಸಿದರು.ಆರ್‌ಎಸ್‌ಎಸ್ ಮತ್ತು ಬಿಜೆಪಿ ಮತದಾರ ರಾಜಕೀಯ ಕೂಸು, ಇವರೆಡೂ ಸಹ ಬ್ರಾಹ್ಮಣ್ಯ ಶ್ರೇಷ್ಟತೆ ಒಪ್ಪುವ ಮೇಲ್ಜಾತಿ, ಮೇಲ್ವರ್ಗದ ಕೈಯಲಿ ಸದಾಕಾಲ ಅಧಿಕಾರ ಉಳಿಸಿಕೊಳ್ಳಲು ದಲಿತರು, ಆದಿವಾ ಸಿಗಳು ಮತ್ತು ಹಿಂದುಳಿದ ಜಾತಿಗಳ ಬಡಮಕ್ಕಳಲ್ಲಿ ಮುಸ್ಲೀಂ ವೇಷದ ಅಮಲು ಏರಿಸಿ ತಮ್ಮ ಕಾಲಾಳು ಗಳನ್ನಾಗಿ ಮಾಡಿಕೊಂಡಿವೆ ಎಂದು ದೂರಿದರು.ಎಸ್ಸಿ, ಎಸ್ಟಿ ಮತ್ತು ಓಬಿಸಿ ಜನಾಂಗದ ಬಡಮಕ್ಕಳಿಗೆ ಗಣವೇಷ ತೊಡಿಸಿ, ಕೈಯಲ್ಲಿ ದೊಣ್ಣೆ, ಗೋಮಾ ತಾಕೀ ಜೈಕಾರ ಎಂದು ಬೀದಿಗಿಳಿಸುವ ಸಂಘಟನೆ, ತಮ್ಮ ಸ್ವಂತ ಮಕ್ಕಳನ್ನು ಮಾತ್ರ ಕಾನ್ವೆಂಟ್, ವಿದೇಶಿ ವಿಧಿ ಗಳಲ್ಲಿ ಹಾಗೂ ಪ್ರತಿಷ್ಟಿತ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ, ಉನ್ನತ ಹುದ್ದೆ, ಶಾಸಕ, ಸಂಸದರನ್ನಾಗಿಸುತ್ತಾರೆ. ಆದರೆ ಬಡಮಕ್ಕಳನ್ನು ಮುಸ್ಲಿಮರ, ದಲಿತರ ವಿರುದ್ಧ ಜಗಳಕ್ಕಿಳಿಸಿ ಜೈಲುವಾಸಕ್ಕೆ ಸೇರುವಂತೆ ಮಾಡಿದೆ.ಆದ್ದರಿಂದ ರಾಜ್ಯಸರ್ಕಾರ ಸಂವಿಧಾನ ಪ್ರಜಾಪ್ರಭುತ್ವ ಜಾತ್ಯಾತೀತತೆ, ಕೋಮು, ಸಾಮರಸ್ಯ, ಶಾಂತಿ ಸೌಹಾರ್ದತೆ, ಸಹಬಾಳ್ವೆ ವಿರೋಧಿ ಜಾತಿ ಧರ್ಮ ಹೆಸರಿನಲ್ಲಿ ಕಲಹ ಸೃಷ್ಟಿಸುವ ಸಂಘಟನೆಗೆ ಸಂವಿಧಾನ ಬದ್ಧ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ದಸಂಸ ಸಂಘಟನಾ ಸಂಚಾಲಕರಾದ ನವೀನ್, ಪೂರ್ಣೇಶ್, ಸಂದೀಪ್, ಮಂಜುನಾಥ್, ಅಜಯ್, ಮಹೇಶ್, ಸಂದೀಪ್ ಕುಮಾರ್, ವಿಜಯ್, ದಿಲೀಪ್, ಸುಂದ್ರೇಶ್, ಜಿಲ್ಲಾ ಸಮಿತಿ ಸದಸ್ಯರಾದ ಮಂಜಯ್ಯ, ಶೇಖರ್, ಚಂದ್ರು ಹಾಜರಿದ್ದರು.