ರಾಜ್ಯದಲ್ಲಿ ತಾಲೀಬಾನ್ ರೀತಿ ಆಡಳಿತ: ಆರೋಪ

| Published : Sep 15 2025, 01:00 AM IST

ಸಾರಾಂಶ

ತರೀಕೆರೆ, ರಾಜ್ಯದಲ್ಲಿ ತಾಲೀಬಾನ್ ರೀತಿ, ಹಿಂದುತ್ವದ ವಿರೋಧಿ ಆಡಳಿತ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ, ತರೀಕೆರೆರಾಜ್ಯದಲ್ಲಿ ತಾಲೀಬಾನ್ ರೀತಿ, ಹಿಂದುತ್ವದ ವಿರೋಧಿ ಆಡಳಿತ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಆರೋಪಿಸಿದರು.ಭಾರತೀಯ ಜನತಾ ಪಾರ್ಟಿ ತರೀಕೆರೆ ಮಂಡಲದಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಕೋಡಿಕ್ಯಾಂಪ್‌ ನಲ್ಲಿ ಇತ್ತೀಚೆಗೆ ಈದ್ ಮಿಲಾದ್ ಪ್ರಯುಕ್ತ ನಡೆದ ಸಂಭ್ರಮಾಚರಣೆಯಲ್ಲಿ ಕೆಲವು ಕಿಡಿಗೇಡಿಗಳು ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.ಮುಸ್ಲಿಂ ಸಮುದಾಯದ ಕೆಲವು ಕಿಡಿಗೇಡಿಗಳು ದೇಶದ್ರೋಹದ ಹೇಳಿಕೆ ನೀಡುತ್ತಿರುವುದು ಖಂಡನೀಯ. ವಿಧಾನಸೌಧದಲ್ಲಿ ಪಾಕಿಸ್ತಾನಿ ಜಿಂದಾಬಾದ್ ಎಂದವರ ವಿರುದ್ಧ ಉಗ್ರ ಶಿಕ್ಷೆ ನೀಡದಿರುವುದು ಅವರಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗಿದೆ. ರಾಜ್ಯದ ಮದ್ದೂರು, ಭದ್ರಾವತಿ ಮತ್ತಿತರೆ ಕಡೆಗಳಲ್ಲಿ ಇಂತಹ ಘಟನೆ ನಡೆದಿದ್ದರೂ ಕಠಿಣ ಶಿಕ್ಷೆಯಾಗಿಲ್ಲ ಎಂದು ದೂರಿದರು.ಶಾಂತಿಯಿಂದ ಇರುವ ತರೀಕೆರೆಯಲ್ಲಿ ಅಶಾಂತಿ ಸೃಷ್ಠಿಸುವುದು ಸರಿಯಲ್ಲ. ಇಂತಹ ಘಟನೆಗಳಿಗೆ ಪೊಲೀಸ್ ಇಲಾಖೆ ಕಡಿ ವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.ತರೀಕೆರೆ ಪಟ್ಟಣದ ಎನ್.ಎಚ್.೨೦೬ ರಸ್ತೆ ಕಾಮಗಾರಿ ಅವೈಜ್ಞಾನಿಕ. ಮಳೆ ಇಲ್ಲದಿದ್ದರೂ ಕಾಮಗಾರಿ ನಡೆಯುತ್ತಿಲ್ಲ. ಪರ್ಸಂಟೇಜ್ ತಲುಪಿಲ್ಲ ಎಂಬ ಕಾರಣದಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂಬ ಗುಮಾನಿಯಿದೆ ಎಂದು ತಿಳಿಸಿದರು.ವಿದ್ಯುತ್ ಕಂಬಗಳ ಶಿಫ್ಟಿಂಗ್‌ ಗಾಗಿ ೨೧ ದಿನ ವಿದ್ಯುತ್ ನಿಲುಗಡೆಗೊಳಿಸಿದ್ದರೂ ಯಾವುದೇ ಕೆಲಸ ಆಗಿಲ್ಲ. ಈ ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರದ ಅನುದಾನ ಒದಗಿಸಲಾಗಿದೆ. ರಸ್ತೆ ಅವಘಡದಿಂದ ೫ ಜನರು ಮೃತಪಟ್ಟಿದ್ದಾರೆ. ಈ ಕುರಿತು ಸೆ. ೨೨ರಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗರಗದಹಳ್ಳಿಪ್ರತಾಪ್, ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್, ಅಜ್ಜಂಪುರ ಪಟ್ಟಣ ಪಂಚಾಯಿತಿ ಸದಸ್ಯರಾದ ಬಿ.ರಂಗಸ್ವಾಮಿ, ಅತ್ತತ್ತಿ ಮಧುಸೂಧನ್, ಮುಖಂಡರಾದ ಟಿ.ಎಲ್.ರಮೇಶ್, ವಸಂತಕುಮಾರ್, ಕೆ.ಆರ್.ಧೃವಕುಮಾರ್, ರೇಣುಕಪ್ಪ, ಶಿವಮೂರ್ತಿ, ವಿಜಯನಾಯ್ಕ ಹಾಗೂ ಇತರರು ಹಾಜರಿದ್ದರು.

೧೩ತರೀಕೆರೆ೧ :ಪೋಟೋ : ಇದೆ.