ತಾಲೂಕು ಮಟ್ಟದ ಪ್ರತಿಭಾ ಕಾರಂಜಿ: ಜಿಲ್ಲಾ ಮಟ್ಟಕ್ಕೆ ಆಯ್ಕೆ

| Published : Dec 04 2024, 12:35 AM IST

ಸಾರಾಂಶ

ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

5-7 ತರಗತಿ ವಿಭಾಗದಲ್ಲಿ ಕನ್ನಡ ಕಂಠಪಾಠ ವಿಭಾಗದಲ್ಲಿ ಪೆರಾಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರತೀಕ್, ಮಕ್ಕಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಕ್ಷಾ ಹಾಗೂ ಎಕ್ಸೆಲ್ ಶಾಲೆಯ ಲಕ್ಷನ್ ಎಂ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ಬೆಟ್ಟಗೇರಿಯ ಉದಯ ಆಂಗ್ಲ ಮಾಧ್ಯಮ ಶಾಲೆಯ ನಿಹಾರಿಕಾ ಬಿ. ಪ್ರಥಮ, ಪೆರಾಜೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸ್ನೇಹ ದ್ವಿತೀಯ, ಮಡಿಕೇರಿ ಸಂತ ಮೈಕಲ್ಸ್ ಶಾಲೆಯ ಅಶೋಕ್ ಜೋಶ್ವ ತೃತೀಯ ಸ್ಥಾನ ಗಳಿಸಿದ್ದಾರೆ.

ಹಿಂದಿ ಕಂಠಪಾಠದಲ್ಲಿ ಚೆರಂಬಾಣೆಯ ಅರುಣ ಆಂಗ್ಲ ಮಾಧ್ಯಮ ಶಾಲೆಯ ಸಾನ್ವಿ, ಭೇತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನವೀನ್ ಎಂ.ಆರ್, ಸಿದ್ದಾಪುರ ಸಂತ ಅನ್ನಮ್ಮ ಶಾಲೆಯ ಅಭಿನವ ಟಿ.ಆರ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.

ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಸಂಸ್ಕೃತದಲ್ಲಿ ಸಿದ್ದಾಪುರ ಬಿಜಿಎಸ್ ಪಬ್ಲಿಕ್ ಶಾಲೆಯ ಆದಿತ್ಯ ಭಟ್ , ಮೂರ್ನಾಡಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ನಿಹಾರಿಕಾ ಭಟ್, ಚೆಂಬು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಯಶಿಕಾ ಗೌಡ ಕ್ರಮವಾಗಿ ಪ್ರಥಮ, ದ್ವಿತೀಯ, ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಅರೇಬಿಕ್ ಧಾರ್ಮಿಕ ಪಠಣದಲ್ಲಿ ಕಕ್ಕಬೆ ಕೆಸಿಎಸ್ ಶಾಲೆಯ ಮಹಮ್ಮದ್ ಜಹೀರ್, ಕೊಟ್ಟಮುಡಿ ರಾಫೆಲ್ ಶಾಲೆಯ ಹಾಯಿಜ್ ಹಾಗೂ ಸಿದ್ದಾಪುರ ಸಂತ ಅನ್ನಮ್ಮ ಶಾಲೆಯ ಇಸ್ ಮೈಲ್ ಹಾಕಿಮ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ

ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಅಮೆಚೂರು ಪೆರಾಜೆ ಸರ್ಕಾರಿ ಪ್ರಾಥಮಿಕ ಶಾಲೆಯ ರಿಷಿಕಾ, ಚೇರಂಬಾಣೆ ರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ವರುಣಿಕಾ ಹಾಗೂ ಮಡಿಕೇರಿಯ ಸಂತ ಮೈಕೆಲರ ಶಾಲೆಯ ಸಮೃದ್ಧ ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ ಮಡಿಕೇರಿಯ ಸಂತ ಜೋಸೆಫರ ಪ್ರೌಢಶಾಲೆಯ ಸಮೃದ್ಧ ಕೆ.ಯು ಪ್ರಥಮ ಸ್ಥಾನ ಗಳಿಸಿದರೆ ಚೆಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರದ್ಧಾ ಟಿ.ಪಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಕಿಕ್ಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಹಮದ್ ನೂಹ್ ತೃತೀಯ ಸ್ಥಾನ ಗಳಿಸಿದರು. ಕಥೆ ಹೇಳುವ ಸ್ಪರ್ಧೆಯಲ್ಲಿ ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ನಿಹಾರಿಕ ಭಟ್ ಪ್ರಥಮ, ಹಳೆ ಚೆಂಬು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿನ್ಯಾಸ್ ಕೆ.ಕೆ. ದ್ವಿತೀಯ, ಕಗ್ಗೋಡ್ಲು ಸರ್ಕಾರಿ ಪ್ರಾಥಮಿಕ ಶಾಲೆಯ ವರುಣ್ ತೃತೀಯ ಸ್ಥಾನ ಗಳಿಸಿದ್ದಾರೆ.

ಚಿತ್ರಕಲಾ ಸ್ಪರ್ಧೆಯಲ್ಲಿ ಉದಯ ಆಂಗ್ಲ ಮಾಧ್ಯಮ ಶಾಲೆಯ ಮಾನ್ವಿ ಎ., ಜ್ಞಾನಜ್ಯೋತಿ ಶಾಲೆಯ ಗ್ರಂಥ ಹಾಗೂ ಸಂತ ಮೈಕಲ್ ಶಾಲೆಯ ಸಚಿನ್ ಪ್ರಥಮ ತೃತೀಯ ಸ್ಥಾನ ಗಳಿಸಿದ್ದಾರೆ . ಅಭಿನಯ ಗೀತೆ ಸ್ಪರ್ಧೆಯಲ್ಲಿ ಮಧ್ಯ ಪೆರಾಜೆಯ ನಿಶಾ, ಮೂರ್ನಾಡು ಜ್ಞಾನಜ್ಯೋತಿ ಶಾಲೆಯ ಗಣಿಕ್ ದರ್ಶಿ ಹಾಗೂ ಕೊಯನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೃಷಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ.

ಪ್ರೌಢಶಾಲಾ ವಿಭಾಗದ ಸ್ಪರ್ಧೆಗಳಲ್ಲಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಚೆಟ್ಟಳ್ಳಿ ಪ್ರೌಢಶಾಲೆಯ ಲಕ್ಷ್ಮಿ, ಕರಿಕೆ ಸರ್ಕಾರಿ ಪ್ರೌಢಶಾಲೆಯ ಪೂಜಾ, ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಶ್ರುತಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದರು.

ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ಮರ್ಕಜ್ ಪಬ್ಲಿಕ್ ಶಾಲೆಯ ಶಾಜಾ ಫಾತಿಮಾ, ಬೆಟಗೇರಿ ಉದಯ ಆಂಗ್ಲ ಮಾಧ್ಯಮ ಶಾಲೆಯ ಫಿದಾ ಫಾತಿಮಾ ಹಾಗೂ ಶ್ರೀರಾಮ ಟ್ರಸ್ಟ್ ಶಾಲೆಯ ಸಾನ್ವಿಕ ಕೆ.ಎಸ್. ಕ್ರಮವಾಗಿ ಪ್ರಥಮ, ದ್ವಿತೀಯ, ದ್ವಿತೀಯ ಸ್ಥಾನ ಗಳಿಸಿದರು.

ಹಿಂದಿ ಭಾಷಣ ಸ್ಪರ್ಧೆಯಲ್ಲಿ ಮಡಿಕೇರಿ ಸಂತ ಮೈಕಲ್ ಪ್ರೌಢಶಾಲೆಯ ಅವನಿಕ ,ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಹರ್ಷಿತ ಹಾಗೂ ಚೇರಂಬಾಣೆಯ ಚಕ್ಷಾ ಕ್ರಮವಾಗಿ ಪ್ರಥಮ ,ದ್ವಿತೀಯ, ದ್ವಿತೀಯ ಸ್ಥಾನ ಗಳಿಸಿದರು.

ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಜ್ಞಾನಜ್ಯೋತಿ ಪ್ರೌಢಶಾಲೆಯ ಭೂಮಿಕ, ಸಂತ ಜೋಸೆಫರ ಪ್ರೌಢಶಾಲೆಯ ವರ್ಷ, ಬಿಜಿಎಸ್ ಪ್ರೌಢಶಾಲೆಯ ದಿನೇಶ್ ಕ್ರಮವಾಗಿ ಪ್ರಥಮ, ದ್ವಿತೀಯ , ತೃತೀಯ ಸ್ಥಾನ ಗಳಿಸಿದರು.

ಅರೇಬಿಕ್ ಧಾರ್ಮಿಕ ಪಠಣ (ಅರೇಬಿಕ್ ) ನಲ್ಲಿ ಕೊಟ್ಟ ಮುಡಿ ಮರ್ಕಜ್ ಶಾಲೆಯ ರಾಯಿಜ, ಪಾರಾಣೆ ಪ್ರೌಢಶಾಲೆಯ ರಂಶೀದ್ ಹಾಗೂ ಹಾಗೂ ಮಡಿಕೇರಿ ಸಂತ ಜೋಸೆಫ್ ಪ್ರೌಢಶಾಲೆಯ ಶಹಮ ಕ್ರಮವಾಗಿ ಪ್ರಥಮ, ದ್ವಿತೀಯ ತೃತೀಯ ಸ್ಥಾನ ಗಳಿಸಿದರು.

ಜಾನಪದ ಗೀತೆ ಸ್ಪರ್ಧೆಯಲ್ಲಿ ಮಡಿಕೇರಿ ಸಂತ ಮೈಕೆಲರ ಪದವಿ ಪೂರ್ವ ಕಾಲೇಜಿನ ಸಂಧ್ಯಾ, ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಶರತ್, ಚೆಂಬು ಸರ್ಕಾರಿ ಪ್ರೌಢಶಾಲೆಯ ಚಿಂಚನ ಪ್ರಥಮ, ದ್ವಿತೀಯ ,ತೃತೀಯ ಸ್ಥಾನ ಗಳಿಸಿದರು.

ಭಾವಗೀತೆ ಸ್ಪರ್ಧೆಯಲ್ಲಿ ಮಡಿಕೇರಿ ಸಂತ ಜೋಸೆಫರ ಪ್ರೌಢಶಾಲೆಯ ಚಿನ್ನಮ್ಮ ಪ್ರಥಮ, ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಸುಮಿತ್ ದ್ವಿತೀಯ, ಎಕ್ಸೆಲ್ ಪ್ರೌಢಶಾಲೆಯ ಬಿಷನ್ ತೃತೀಯ ಸ್ಥಾನ ಗಳಿಸಿದರು.

ಭರತನಾಟ್ಯ ಸ್ಪರ್ಧೆಯಲ್ಲಿ ಸಂತ ಮೈಕಲ್ ಶಾಲೆಯ ಸಿಂಧು ಸಿದ್ದಾಪುರ ಬಿಜಿಎಸ್‌ನ ಪ್ರತಿಕ್ಷ ಹಾಗೂ ಪ್ರಬಂಧ ರಚನೆ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ ಹಾಕತ್ತೂರಿನ ಕಲ್ಪನಾ ಶರಣ ಹಾಗೂ ಬೆಟಗೇರಿ ಉದಯ ಪ್ರೌಢಶಾಲೆಯ ಭೂಮಿಕ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಗಳಿಸಿದರು.

ಚಿತ್ರಕಲಾ ಸ್ಪರ್ಧೆಯಲ್ಲಿ ಮೂರ್ನಾಡು ಸರ್ಕಾರಿ ಪ್ರೌಢಶಾಲೆಯ ತಸ್ಮಿಕ ಕಡಗದ ಶಾಲೆಯ ಲಕ್ಷಿಯ ಹಾಗೂ ರಾಜರಾಜೇಶ್ವರಿ ಚೇರಮ್ಮನೆ ಶಾಲೆಯ ಜಸ್ಮಿತ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಗಳಿಸಿದರು.

ಮಿಮಿಕ್ರಿ ಸ್ಪರ್ಧೆಯಲ್ಲಿ ಕಡಗದಾಳು ಸರ್ಕಾರಿ ಪ್ರೌಢಶಾಲೆಯ ನಿಶಾನ್ ಸಂಪಾಜೆ ಪ್ರೌಢಶಾಲೆಯ ಯಜ್ಞೇಶ್, ಮೂರ್ನಾಡು ಜ್ಞಾನಜೋತಿ ಪ್ರೌಢಶಾಲೆಯ ಕೃತಿಕ ಪ್ರಥಮ, ದ್ವಿತೀಯ, ದ್ವಿತೀಯ ಸ್ಥಾನ ಗಳಿಸಿದರು.

ಚರ್ಚಾ ಸ್ಪರ್ಧೆಯಲ್ಲಿ ಪ್ರೌಢಶಾಲೆಯ ಕೃತಿಕಾ ಸಂತ ಮೈಕಾರರ ಪದವಿ ಪೂರ್ವ ಕಾಲೇಜಿನ ನಿಖಿಲ್ ಕಡಗದಳು ಸರ್ಕಾರಿ ಪ್ರೌಢಶಾಲೆಯ ಮಹಮದ್ ರಿಯಾಜ್ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದರು.

ರಂಗೋಲಿ ಸ್ಪರ್ಧೆಯಲ್ಲಿ ಅಂಬೇಡ್ಕರ್ ವಸತಿ ಶಾಲೆಯ ವಿಲನ ಸರ್ಕಾರಿ ಪ್ರೌಢಶಾಲೆ ಚಂಬುವಿನ ವನಶ್ರೀ ಸಿದ್ದಾಪುರ ಪ್ರೌಢಶಾಲೆಯ ಭುವನೇಶ್ವರಿ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಗಳಿಸಿದರು. ಮಡಿಕೇರಿಯ ಆಶೀಫ್ ಬಶೀರ್ ಖಡಗದಲ್ಲೂ ಸರ್ಕಾರಿ ಪ್ರೌಢಶಾಲೆಯ ಹರ್ಷಿತ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಗಳಿಸಿದರು.

ಆಶುಭಾಷಣ ಸ್ಪರ್ಧೆಯಲ್ಲಿ ಸಂತ ಮೈಕಲ್ ಪ್ರೌಢಶಾಲೆಯ ಹೃತ್ಪೂರ್ವಕ ಸಂಪಾದ ಪ್ರೌಢಶಾಲೆಯ ಧನ್ಯಶ್ರೀ ಹಾಗು ಜಯರಾಮಯ್ಯ ರಾಜರಾಜೇಶ್ವರಿ ಪ್ರೌಢಶಾಲೆಯ ಕ್ರಮವಾಗಿ ಪ್ರಥಮ, ದ್ವಿತೀಯ, ಸ್ಥಾನ ಗಳಿಸಿದರು.

ಜಾನಪದ ನೃತ್ಯ ಸ್ಪರ್ಧೆಯಲ್ಲಿ ಸಂತಮಿಕಲ ಪ್ರೌಢಶಾಲೆಯ ತಂಡ ಪ್ರಥಮ ಸ್ಥಾನ ಗಳಿಸಿದರೆ ಜ್ಯೋತಿ ಪ್ರೌಢಶಾಲೆಯ ತಂಡ ದ್ವಿತೀಯ ಸ್ಥಾನ ಗಳಿಸಿತು. ಸಿದ್ದಾಪುರ ಪ್ರೌಢಶಾಲೆಯ ತಂಡ ತೃತೀಯ ಸ್ಥಾನ ಗಳಿಸಿತು.

ರಸಪ್ರಶ್ನೆ ಸ್ಪರ್ಧೆಯಲ್ಲಿ ನಾಪೋಕ್ಲು ವಿನ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಪ್ರಥಮ ಸ್ಥಾನವನ್ನು ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು. ಶಾಲೆಯ ಸಿದ್ದಾಪುರ ಇಕ್ರ ಪಬ್ಲಿಕ ಶಾಲೆಯ ಸಲ್ಮಾನ್ ಫಾರಿಸ್,ಪಾರಾಣೆ ಪ್ರೌಢಶಾಲೆಯ ಸಿಯಾದ್ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಗಳಿಸಿದರು.

ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.