ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳನ್ನು ತಲುಪುತ್ತಿದೆಯಾ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು, ಅದು ನಿಮ್ಮ ಕರ್ತವ್ಯವಾಗಿದೆ ಎಂದು ಆಶ್ರಯ ಸಮಿತಿ, ಗ್ಯಾರೆಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿದರು.ತಾಲೂಕಿನ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಯೋಜನ ಅನುಷ್ಠಾನ ಸಮಿತಿ ಸಭೆಯಲ್ಲಿ ಯೋಜನಾ ಸಮಿತಿಯ ಸದಸ್ಯರು ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.ಸರ್ಕಾರವು ಬಡವರ ಉದ್ಧಾರಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಸಮರ್ಪಕವಾಗಿ ಜನರಿಗೆ ತಲಪುತ್ತಿದೆಯೋ ಇಲ್ಲವೋ ಎಂಬುದನ್ನು ಮೇಲ್ವಿಚಾರಣೆ ಮಾಡಿ ತಿಳಿದುಕೊಳ್ಳಬೇಕಾದದ್ದು ಅಧಿಕಾರಿಗಳ ಕರ್ತವ್ಯವಾಗಿದೆ, ಪ್ರತಿ ದಿನವೂ ಹಲವಾರು ಮಂದಿ ಗ್ಯಾರಂಟಿ ಯೋಜನೆಗಳು ನಮಗೆ ತಲುಪುತ್ತಿಲ್ಲ ಎಂದು ಕಚೇರಿಗಳಿಗೆ ಅಲೆಯುತ್ತಿದ್ದು, ಇದು ಅಧಿಕಾರಿಗಳ ಕರ್ತವ್ಯ ಲೋಪವೂ ಅಥವಾ ಸರ್ಕಾರದ ತಾಂತ್ರಿಕ ದೋಷವು ಪತ್ತೆ ಹಚ್ಚಿ ಬೇಗ ಅದಕ್ಕೆ ಒಂದು ಪರಿಹಾರ ಕಂಡುಕೊಳ್ಳಿ, ಯಾರೇ ಸಾರ್ವಜನಿಕರು ಸರ್ಕಾರಕ್ಕೆ ಶಾಪ ಹಾಕೋದನ್ನು ನಾನು ಸಹಿಸುವುದಿಲ್ಲ ಅಧಿಕಾರಿಗಳು ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತೀರಾ ಗೊತ್ತಿಲ್ಲ ಆದರೆ ತಾಲೂಕಿನಲ್ಲಿ ಯಾರೊಬ್ಬರೂ ಕೂಡ ನನಗೆ ಗ್ಯಾರಂಟಿ ಸ್ಕಿಮಿನ ಹಣ ಬಂದಿಲ್ಲ ಎಂದು ನನಗೆ ದೂರು ನೀಡಬಾರದು ಎಂದು ಹೇಳಿದರು.ಆಹಾರ ಶಿರಸ್ತೇದಾರ್ ಸಣ್ಣಸ್ವಾಮಿ, ತಾಪಂ ಇಒ ಸುನಿಲ್ ಕುಮಾರ್, ಸಿಡಿಪಿಓ ಮಮತಾ, ಬಿಇಓ ರವಿಪ್ರಸನ್ನ, ಜಿಲ್ಲಾ ಗ್ಯಾರಂಟಿ ಯೋಜನ ಸಮಿತಿ ಸದಸ್ಯ ಜೈಚಂದ್ರ, ಯಾದವ್, ಅಸ್ಲಾಂ, ಧನರಾಜ್, ವಿಜಿ ಕುಮಾರ್ ಇದ್ದರು.