ಸಾರಾಂಶ
ಹಗರಿಬೊಮ್ಮನಹಳ್ಳಿ: ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ಪಡೆದ ರೈತ ಮೃತಪಟ್ಟರೆ ಅವರ ಅಂತ್ಯಕ್ರಿಯೆಗೆ ಸಂಘದಿಂದ ₹೫ ಸಾವಿರ ನೀಡಲಾಗುವುದು ಎಂದು ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಬಸವರಾಜ ಹೇಳಿದರು.ತಾಲೂಕಿನ ತಂಬ್ರಹಳ್ಳಿ ಕೃಷಿಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಜನ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ವರ್ಷದಲ್ಲಿ ಸಂಘದಿಂದ ಬೆಳೆಸಾಲವನ್ನು ₹೧೨.೧೫ ಕೋಟಿ ನೀಡಲಾಗಿದೆ. ಪೈಪ್‌ಲೈನ್ ಸಾಲವಾಗಿ ₹೩.೬ ಕೋಟಿ ನೀಡಲಾಗಿದೆ. ರೈತರ ಅಭಿವೃದ್ಧಿಗೆ ಸ್ಪಂದಿಸಲಾಗಿದೆ. ಸಂಘವು ₹೨ಕೋಟಿಗೂ ಹೆಚ್ಚು ಠೇವಣಿ ಮೊತ್ತ ಹೊಂದಿದೆ. ಈ ವರ್ಷದಲ್ಲಿ ₹೫೦ ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದೆ. ಟ್ರ್ಯಾಕ್ಟರ್ ಖರೀದಿಗೆ ರೈತರಿಗೆ ಸಾಲ ನೀಡಲಾಗುತ್ತಿದೆ. ಸಂಘವು ಉತ್ತಮ ವ್ಯವಹಾರವನ್ನು ಹೊಂದಿದು,್ದ ಈ ಭಾಗದ ರೈತರು ಸದ್ಬಳಕೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಅಫೆಕ್ಸ್ ಬ್ಯಾಂಕ್‌ನವರು ತಂಬ್ರಹಳ್ಳಿ ಸಹಕಾರಿ ಸಂಘಕ್ಕೆ ತಾಲೂಕಿನಲ್ಲಿಯೇ ಪ್ರಥಮ ಸ್ಥಾನ ನೀಡಿ ಗೌರವಿಸಿದ್ದಾರೆ ಎಂದು ತಿಳಿಸಿದರು.
ಸಂಘದ ನಿರ್ದೇಶಕ ಮೈನಳ್ಳಿ ಕೊಟ್ರೇಶ ಮಾತನಾಡಿ, ಸಹಕಾರಿ ಸಂಘಗಳು ರೈತರ ಆರ್ಥಿಕ ಸಂಕಷ್ಟಕ್ಕೆ ನೆರವು ನೀಡುತ್ತದೆ. ಮುಂದಿನ ಸಾಲಿನಲ್ಲಿ ಸಂಘದಿಂದ ರೈತ ವಿದ್ಯಾನಿಧಿಯಾಗಿ ಪ್ರತಿವರ್ಷ ಸಂಘದ ವ್ಯಾಪ್ತಿಯ ಮೂರು ರೈತ ಕುಟುಂಬದ ವಿದ್ಯಾರ್ಥಿಗಳಿಗೆ ತಲಾ ೧೦ಸಾವಿರ ರೂಗಳನ್ನು ನೀಡಲು ಸಂಘದ ಸಭೆಯಲ್ಲಿ ಚಿರ್ಚಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.ತಂಬ್ರಹಳ್ಳಿಯಲ್ಲಿ ನೂತನ ಬಿಡಿಸಿಸಿ ಬ್ಯಾಂಕ್ ಆರಂಭಿಸುವಂತೆ ನಿವೃತ್ತ ಇಒ ಟಿ.ವೆಂಕೋಬಪ್ಪ ಒತ್ತಾಯಿಸಿದರು.
ಸಂಘದ ಟ್ರಾಕ್ಟರ್‌ನ್ನು ರೈತರ ಬಳಕೆಗೆ ನೀಡಿ ಎಂದು ರೈತಮುಖಂಡ ಗಂಗಾಧರಗೌಡ ಸಭೆಯಲ್ಲಿ ತಿಳಿಸಿದರು.ಸಂಘದ ಅಧ್ಯಕ್ಷ ವಿ.ರಾಮಾಂಜನಿ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಟಿ.ಸಾವಿತ್ರಮ್ಮ, ನಿರ್ದೇಶಕರಾದ ಕಿನ್ನಾಳ್ ಮಂಜುನಾಥ, ಎನ್.ಪದ್ದಮ್ಮ, ರೆಡ್ಡಿ ಮಂಜುನಾಥ ಪಾಟೀಲ್, ಸಿ.ದಾನಪ್ಪ, ಕೆ.ನಂದಾರೆಡ್ಡಿ, ಟಿ.ನಾಗರತ್ನಮ್ಮ, ಕುರಿ ಲಕ್ಷ್ಮವ್ವ, ಬಾಲಸುಬ್ರಮಣ್ಯ, ರೈತ ಮುಖಂಡರಾದ ಬಣಕಾರ ಒಪ್ಪತ್ತೇಶ್ವರ, ಚಂದ್ರಪ್ಪ, ಉಪ್ಪಾರ ಭೀಮಣ್ಣ ಇತರರಿದ್ದರು.ಕಾರ್ಯಕ್ರಮವನ್ನು ಸಂಘದ ಸಿಬ್ಬಂದಿ ಸುಣಗಾರ ಅಶೋಕ, ಕೆ.ಅನುಷಾ, ಟಿ.ರಂಗನಾಥ, ಡಿ.ಎಂ.ಪ್ರವೀಣ್, ಜಿ.ವಸಂತ ನಿರ್ವಹಿಸಿದರು.