ಮಕ್ಕಳಲ್ಲಿ ಕಲಿಕಾಸಕ್ತಿ ಬೆಳೆಸುವ ಕಾಯದದ ಒತ್ತಡದಲ್ಲೇ ಸದಾ ಮಗ್ನರಾಗಿರುವ ಶಿಕ್ಷಕರ ಪ್ರತಿಭಾ ಪ್ರದರ್ಶನಕ್ಕೆ ಸಹಪಠ್ಯ ಚಟುವಟಿಕೆ ಉತ್ತಮ ವೇದಿಕೆಯಾಗಿದೆ, ಇಲ್ಲಿ ಹೊರ ಬರುವ ಪ್ರತಿಭೆಗೆ ಪುರಸ್ಕಾರ ಸಿಗುತ್ತದೆ ಆದರೆ ಅದೇ ಪ್ರತಿಭೆ ಮಕ್ಕಳಿಗೆ ನೀವು ಧಾರೆಯೆರೆದಾಗ ಸಿಗುವ ಸಂತೃಪ್ತಿ ಹೆಚ್ಚಿನದು. ಶಿಕ್ಷಕರು ತಮ್ಮ ಪ್ರತಿಭೆಯನ್ನು ವಿದ್ಯಾರ್ಥಿಗಳಿಗೆ ಕಲಿಸಲಿ.
ಕನ್ನಡಪ್ರಭ ವಾರ್ತೆ ಕೋಲಾರ
ಶಿಕ್ಷಕರು ತಮ್ಮಲ್ಲಿನ ಪ್ರತಿಭೆ ಬದ್ದತೆ, ಪ್ರಾಮಾಣಿಕತೆಯಿಂದ ಮಕ್ಕಳಿಗೆ ಧಾರೆಯೆರೆಯುವ ಕಾಯಕದಲ್ಲಿ ಸದಾ ಮಗ್ನರಾದಾಗ ಮಾತ್ರ ಸಾಧಕ ವಿದ್ಯಾರ್ಥಿಗಳನ್ನು ತಯಾರಿಸಲು ಸಾಧ್ಯವಾಗುತ್ತದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಮಗ್ರ ಶಿಕ್ಷಣ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ರಾಜೇಶ್ವರಿ ಅಭಿಪ್ರಾಯಪಟ್ಟರು.ನಗರದ ಮೆಥೋಡಿಸ್ಟ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಜಿಲ್ಲಾಮಟ್ಟದ ಸ್ಪರ್ಧೆಗಳಿಗೆ ಚಾಲನೆ ನೀಡಿದ ನಂತರ ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಮಕ್ಕಳಿಗೆ ಪ್ರತಿಭೆ ಧಾರೆ ಎರೆಯಿರಿಮಕ್ಕಳಲ್ಲಿ ಕಲಿಕಾಸಕ್ತಿ ಬೆಳೆಸುವ ಕಾಯದದ ಒತ್ತಡದಲ್ಲೇ ಸದಾ ಮಗ್ನರಾಗಿರುವ ಶಿಕ್ಷಕರ ಪ್ರತಿಭಾ ಪ್ರದರ್ಶನಕ್ಕೆ ಸಹಪಠ್ಯ ಚಟುವಟಿಕೆ ಉತ್ತಮ ವೇದಿಕೆಯಾಗಿದೆ, ಇಲ್ಲಿ ಹೊರ ಬರುವ ಪ್ರತಿಭೆಗೆ ಪುರಸ್ಕಾರ ಸಿಗುತ್ತದೆ ಆದರೆ ಅದೇ ಪ್ರತಿಭೆ ಮಕ್ಕಳಿಗೆ ನೀವು ಧಾರೆಯೆರೆದಾಗ ಸಿಗುವ ಸಂತೃಪ್ತಿ ಹೆಚ್ಚಿನದು ಎಂದರು. ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಶಂಕರೇಗೌಡ ಮಾತನಾಡಿ, ಮಕ್ಕಳಿಗಾಗಿ ಪ್ರತಿಭಾ ಕಾರಂಜಿ ಸಾಮಾನ್ಯ ಅದರೆ ಈಗ ನಡೆಯುತ್ತಿರುವುದು ಶಿಕ್ಷಕರ ಪ್ರತಿಭಾ ಕಾರಂಜಿ, ಇಲ್ಲಿ ನಿಮ್ಮಲ್ಲಿ ಅಡಗಿರುವ ಪ್ರತಿಭೆ ಕಾರಂಜಿಯಾಗಿ ಹೊರ ಬರಬೇಕು, ಅದಕ್ಕೆ ಪುರಸ್ಕಾರ ಸಿಗಲಿದೆ, ಜತೆಗೆ ಇದೇ ಪ್ರತಿಭೆಯನ್ನು ಶಾಲೆಯಲ್ಲಿ ನಿಮ್ಮನ್ನು ನಂಬಿರುವ ಮಕ್ಕಳಿಗೆ ಹರಿಸಬೇಕು ಎಂದರು.ಸ್ಪರ್ಧೆಗಳ ನೋಡಲ್ ಅಧಿಕಾರಿ ಸಮೀವುಲ್ಲಾ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಷಯ ಪರಿವೀಕ್ಷಕಿ ಬಬಿತಾ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ರಾಧಾ, ನಂಜುಂಡಗೌಡ, ನಾಗರಾಜ್, ತಾಲ್ಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಕಾರ್ಯದರ್ಶಿ ಗಂಗಾಧರಮೂರ್ತಿ, ಮುಖ್ಯಶಿಕ್ಷಕ ಸಿದ್ದೇಶ್, ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಮುನಿರಾಜು, ಪ್ರವೀಣ್ ಇದ್ದರು.