ಅನುದಾನ ಸೋರಿಕೆ ಟೆಂಡರ್‌ ರದ್ದು, ಪ್ರತಿ ವಾರ್ಡ್‌ಗೆ 15 ಲಕ್ಷ ರು. ಅನುದಾನ

| Published : Sep 29 2025, 03:02 AM IST

ಅನುದಾನ ಸೋರಿಕೆ ಟೆಂಡರ್‌ ರದ್ದು, ಪ್ರತಿ ವಾರ್ಡ್‌ಗೆ 15 ಲಕ್ಷ ರು. ಅನುದಾನ
Share this Article
  • FB
  • TW
  • Linkdin
  • Email

ಸಾರಾಂಶ

ಅನುದಾನ ಸೋರಿಕೆಯಾಗುವ ಟೆಂಡರ್ ಗಳನ್ನು ರದ್ದು ಪಡಿಸಿ ಪ್ರತೀ ವಾರ್ಡಿನ ಅಭಿವೃದ್ಧಿಗೆ ತಲಾ 15 ಲಕ್ಷ ರು. ಅನುದಾನ ವನ್ನು ನೀಡುವ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಅಧ್ಯಕ್ಷೆ ದಿವ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಪ.ಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಬಳಿಕ ಎಲ್ಲ ಸದಸ್ಯರ ಒಪ್ಪಿಗೆ ಮೇರೆಗೆ ಟೆಂಡರ್ ರದ್ದು ಪಡಿಸುವ ನಿರ್ಣಯ ಕೈಗೊಳ್ಳಲಾಗಿದೆ.

ಕೋಟೆಕಾರು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯಕನ್ನಡಪ್ರಭ ವಾರ್ತೆ ಉಳ್ಳಾಲಅನುದಾನ ಸೋರಿಕೆಯಾಗುವ ಟೆಂಡರ್ ಗಳನ್ನು ರದ್ದು ಪಡಿಸಿ ಪ್ರತೀ ವಾರ್ಡಿನ ಅಭಿವೃದ್ಧಿಗೆ ತಲಾ 15 ಲಕ್ಷ ರು. ಅನುದಾನ ವನ್ನು ನೀಡುವ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಅಧ್ಯಕ್ಷೆ ದಿವ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಪ.ಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಬಳಿಕ ಎಲ್ಲ ಸದಸ್ಯರ ಒಪ್ಪಿಗೆ ಮೇರೆಗೆ ಟೆಂಡರ್ ರದ್ದು ಪಡಿಸುವ ನಿರ್ಣಯ ಕೈಗೊಳ್ಳಲಾಗಿದೆ.ಸಭೆಯ ಕಾರ್ಯಸೂಚಿಯಲ್ಲಿ ಮಂಡಿಸಲಾಗಿದ್ದ ಟೆಂಡರ್ ಗಳ ಬಗ್ಗೆ ಪಂಚಾಯಿತಿ ಸದಸ್ಯರ ವಿರೋಧ ಹಾಗೂ ಅಸಮಾಧಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.2025-26 ನೇ ಸಾಲಿಗೆ ಪ.ಪಂ ವ್ಯಾಪ್ತಿಯ ತೆರೆದ ಬಾವಿ,ಕೊಳವೆ ಬಾವಿಗಳಿಗೆ ಅಳವಡಿಸಿರುವ ಮೋಟಾರ್ ಪಂಪು,ಸ್ಟಾಟರ್ ದುರಸ್ತಿ ಮಾಡಲು ಅಂದಾಜು 14,537 ರೂಪಾಯಿಗಳನ್ನು ಮೀಸಲಿಟ್ಟು ಟೆಂಡರು ಕರೆಯುವ ಪ್ರಕ್ರಿಯೆ ಮತ್ತು 2025-26 ನೇ ಸಾಲಿಗೆ ಪ.ಪಂ ವ್ಯಾಪ್ತಿಗೆ ಹೊಸ ಎಲ್ಇಡಿ ದಾರಿದೀಪಗಳನ್ನ ಸರಬರಾಜು ಮಾಡಲು ಸುಮಾರು 15 ಲಕ್ಷ ರು. ಮೀಸಲಿಟ್ಟು ಟೆಂಡರು ಕರೆಯುವ ಪ್ರಕ್ರಿಯೆಗೆ ಪ.ಪಂ‌‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ಸದಸ್ಯ ಧೀರಜ್ ಕುಸಾಲ್ ನಗರ ಮಾತನಾಡಿ ಆದಷ್ಟು ಶೀಘ್ರನೆ ತುಂಬೆಯಿಂದ ನೇರವಾಗಿ ನಮಗೆ ನೀರು ಸರಬರಾಜು ಆಗಲಿದೆ .ಹಾಗಾಗಿ ಬೋರು ರಿಪೇರಿಗೆ 15 ಲಕ್ಷ ರು. ವ್ಯಯಿಸುವುದು ವ್ಯರ್ಥವಾಗಲಿದೆ.ಈ ರೀತಿ ಅನುದಾನಗಳ ವ್ಯರ್ಥ ಸೋರಿಕೆ ತಡೆದಲ್ಲಿ ಪ್ರತೀ ವಾರ್ಡಿನ ಅಭಿವೃದ್ಧಿಗೆ ತಲಾ 15 ಲಕ್ಷ ರು. ಅನುದಾನ ನೀಡಬಹುದೆಂದು ಅಧ್ಯಕ್ಷರಿಗೆ ಸಲಹೆ ನೀಡಿದರು.ಸದಸ್ಯ ಸುಜಿತ್ ಮಾಡೂರು ಮಾತನಾಡಿ ಕಳೆದ ವರ್ಷ 250 ದಾರಿ ದೀಪಗಳ ಖರೀದಿಗೆ 11,75,000 ಬಿಲ್ ಮಾಡಲಾಗಿದೆ.ಈ ಬಾರಿ 15 ಲಕ್ಷ ರು. ಮೀಸಲಿಟ್ಟಿದ್ದು ಅದರಲ್ಲಿ 650 ಎಲ್ ಇಡಿ ದೀಪ ಖರೀದಿಸಬಹುದಾಗಿದೆ.ಇಷ್ಟೊಂದು ದಾರಿದೀಪಗಳ ಅಗತ್ಯತೆ ಪಟ್ಟಣ ಪಂಚಾಯತಿಗೆ ಇಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು.ಸದಸ್ಯರ ವಿರೋಧದ ಹಿನ್ನಲೆಯಲ್ಲಿ ಅಧ್ಯಕ್ಷರಾದ ದಿವ್ಯ ಸತೀಶ್ ಆಕ್ಷೇಪಾರ್ಹ ಟೆಂಡರ್ ರದ್ದು ಪಡಿಸಲು ನಿರ್ಣಯ ಕೈಗೊಳ್ಳುವುದಾಗಿ ಹೇಳಿದರು.

ಉಪಾಧ್ಯಕ್ಷ ಪ್ರವೀಣ್ ಐ.ಬಗಂಬಿಲ,ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಸುಳ್ಳೆಂಜೀರು, ಮುಖ್ಯಾಧಿಕಾರಿ ಮಾಲಿನಿ ಇದ್ದರು.