ಜನತೆಯಲ್ಲಿ ಸಾಹಿತ್ಯಾಭಿರುಚಿ ಹೆಚ್ಚಾಗಬೇಕು

| Published : Nov 01 2025, 01:15 AM IST

ಸಾರಾಂಶ

ಯುವಜನರಲ್ಲಿ ಸಾಹಿತ್ಯದ ಆಸಕ್ತಿ ಕಡಿಮೆ ಇದೆ. ಇದು ವೃದ್ಧಿಯಾಗಬೇಕಾದರೆ ಸಾಹಿತ್ಯಾತ್ಮಕ ವಾತಾವರಣ ನಿರ್ಮಾಣವಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು ಸಾಹಿತ್ಯದ ಚಟುವಟಿಕೆಗಳು ವ್ಯಾಪಕ ಮತ್ತು ವಿಸ್ತಾರವಾಗಿ ನಡೆಯುವುದರಿಂದ ಜನತೆಯಲ್ಲಿ ಸಾಹಿತ್ಯದ ಕಡೆಗೆ ಅಭಿರುಚಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಹಾಗೂ ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ಅಭಿಪ್ರಾಯಪಟ್ಟರು.ದಶಮಾನೋತ್ಸವ ಸಂಭ್ರಮದಲ್ಲಿರುವ ಮಾಣಿಕ್ಯ ಪ್ರಕಾಶನದ ವತಿಯಿಂದ ನ. 2ರಂದು ನಡೆಯಲಿರುವ ರಾಜ್ಯ ಮಟ್ಟದ ಹತ್ತನೆಯ ''''''''ಕವಿಕಾವ್ಯ ಸಂಭ್ರಮ, ಪುಸ್ತಕಗಳ ಲೋಕಾರ್ಪಣೆ, ದತ್ತಿ ಪ್ರಶಸ್ತಿಗಳ ಪ್ರದಾನ ಹಾಗೂ ಅಂತರ ರಾಜ್ಯ ಕವಿಗೋಷ್ಠಿ''''''''ಯ ಆಹ್ವಾನ ಪತ್ರಿಕೆಯನ್ನು ಕುವೆಂಪು ನಗರದ ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.ಯುವಜನರಲ್ಲಿ ಸಾಹಿತ್ಯದ ಆಸಕ್ತಿ ಕಡಿಮೆ ಇದೆ. ಇದು ವೃದ್ಧಿಯಾಗಬೇಕಾದರೆ ಸಾಹಿತ್ಯಾತ್ಮಕ ವಾತಾವರಣ ನಿರ್ಮಾಣವಾಗಬೇಕು. ಇಂತಹ ಸೃಜನಶೀಲ ವಾತಾವರಣದಿಂದ ಯುವಜನರಲ್ಲಿ ಕತೆ, ಕಾವ್ಯ, ಕಾದಂಬರಿ ಬರೆಯುವ ಹವ್ಯಾಸ ಮೈಗೂಡುತ್ತದೆ ಎಂದರು.ಮಾಣಿಕ್ಯ ಪ್ರಕಾಶನವು ಕಳೆದೊಂದು ದಶಕದಿಂದ ಕವಿಕಾವ್ಯ ಸಂಭ್ರಮವನ್ನು ತುಂಬಾ ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. ಮಾಣಿಕ್ಯ ಪ್ರಕಾಶನದ ಸಂಸ್ಥಾಪಕ ಕೊಟ್ರೇಶ್ ಎಸ್. ಉಪ್ಪಾರ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ, ಹಿರಿಯ ಸಾಹಿತಿ ಎಚ್.ಎಲ್. ಶಿವಬಸಪ್ಪ ಹೊರೆಯಾಲ, ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ಇದ್ದರು.