ಡಾ.ರಾಜ್ ನಟಿಸಿದ ಪಾತ್ರಗಳು ಇಂದಿಗೂ ಜೀವಂತ

| Published : Apr 25 2024, 01:04 AM IST

ಸಾರಾಂಶ

ನಾಡು ನುಡಿ ಬಗ್ಗೆ ಅತ್ಯಂತ ಹೆಚ್ಚು ಅಭಿಮಾನ ಹೊಂದಿದ್ದ ರಾಜ್ ಕುಮಾರ್ ಅವರು ಗೋಕಾಕ್ ಚಳವಳಿ ನಡೆದ ಸಂದರ್ಭದಲ್ಲಿ ಚಳವಳಿಯ ನೇತೃತ್ವವನ್ನು ವಹಿಸಿದ್ದರು. ಕನ್ನಡ ಭಾಷೆ ಹಾಗೂ ಚಿತ್ರರಂಗಕ್ಕೆ ಇವರ ಸೇವೆ ಅಪಾರ

ಕನ್ನಡ ಪ್ರಭವಾರ್ತೆ,ಮಾಲೂರು

ಕನ್ನಡ ಚಲನಚಿತ್ರರಂಗದ ಮೇರು ನಟ ಡಾ ರಾಜಕುಮಾರ್ ಅವರು ನಮ್ಮೊಂದಿಗೆ ಬೌದ್ಧಿಕವಾಗಿ ಇಲ್ಲದಿದ್ದರೂ ಸಹ ಅವರು ನಟಿಸಿರುವ ಚಿತ್ರಗಳ ಪಾತ್ರಗಳು ನಮ್ಮೊಂದಿಗೆ ಶಾಶ್ವತವಾಗಿ ಉಳಿದುಕೊಂಡಿವೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಂ.ವಿ. ಹನುಮಂತಯ್ಯ ಹೇಳಿದರು ಡಾ. ರಾಜಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪದ ಸಂಘಟನೆಗಳ ವತಿಯಿಂದ ಪಟ್ಟಣದ ಪುರಸಭಾ ಆವರಣದಲ್ಲಿರುವ ಡಾ ರಾಜಕುಮಾರ್ ಅವರ ಪ್ರತಿಮೆಗೆ ಪುಷ್ಪ ನಮನ ಅರ್ಪಿಸಿ ಮಾತನಾಡಿದರು.

ನಾಡು, ನುಡಿ ಬಗ್ಗೆ ಅಭಿಮಾನ

ನಾಡು ನುಡಿ ಬಗ್ಗೆ ಅತ್ಯಂತ ಹೆಚ್ಚು ಅಭಿಮಾನ ಹೊಂದಿದ್ದ ರಾಜ್ ಕುಮಾರ್ ಅವರು ಗೋಕಾಕ್ ಚಳವಳಿ ನಡೆದ ಸಂದರ್ಭದಲ್ಲಿ ಚಳವಳಿಯ ನೇತೃತ್ವವನ್ನು ವಹಿಸಿದ್ದರು. ಕನ್ನಡ ಭಾಷೆ ಹಾಗೂ ಚಿತ್ರರಂಗಕ್ಕೆ ಇವರ ಸೇವೆ ಅಪಾರವಾದದ್ದು ಇಂದಿನ ಪ್ರತಿಯೊಬ್ಬ ಕನ್ನಡಿಗರು ಡಾಕ್ಟರ್ ರಾಜ್ ಅವರು ನಟಿಸಿರುವ ಚಲನಚಿತ್ರಗಳನ್ನು ವೀಕ್ಷಿಸುವ ಮೂಲಕ ಉತ್ತಮ ಆದರ್ಶಗಳನ್ನು ಅಳವಡಿಸಿಕೊಂಡು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಗೌರವ ಹೊಂದಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ಹೇಳಿದರು

ಚಿತ್ರಗಳ ಮೂಲಕ ಸಂದೇಶ

ಪುರಸಭಾ ಮುಖ್ಯ ಅಧಿಕಾರಿ ಎಪಿ ಪ್ರದೀಪ್ ಕುಮಾರ್ ಮಾತನಾಡಿ, ಡಾ. ರಾಜಕುಮಾರ್ ಅವರಿಗೆ ಕನ್ನಡದ ಬಗ್ಗೆ ಇದ್ದ ಅಭಿಮಾನ ಪ್ರತಿಯೊಬ್ಬ ಯುವಕರಿಗೆ ಮಾರ್ಗದರ್ಶಕವಾಗಿದೆ. ಅವರು ನಟಿಸಿರುವ ಚಲನಚಿತ್ರಗಳ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದು, ಅವರು ನಟಿಸಿದ ಚಿತ್ರಗಳು ಇಂದಿಗೂ ಅಮರವಾಗಿವೆ ಎಂದರುನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಎಸ್‌ಎಂ ರಾಜು, ಕರವೇ ತಾಲೂಕ ಪ್ರಧಾನ ಕಾರ್ಯದರ್ಶಿ ಎಸ್ ನಾರಾಯಣ ಸ್ವಾಮಿ, ದಯಾನಂದ್, ದೇವರಾಜ ರೆಡ್ಡಿ, ಕಲಾವಿದ ಸ್ವಾಮಿ ಶ್ರೀನಿವಾಸ್, ಸತೀಶ್ ಜಗದೀಶ್, ಶ್ರೀಧರ್ ಉಪಾಧ್ಯಾಯ ಇನ್ನಿತರರು ಹಾಜರಿದ್ದರು.

ಶಿರ್ಷಿಕೆ-೨೪ಕೆ.ಎಂ.ಎಲ್.ಅರ್.೩- ಮಾಲೂರು ಪಟ್ಟಣದಲ್ಲಿ ಡಾ. ರಾಜ್‌ ಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಕಸಾಪ ಹಾಗೂ ಕನ್ನಡ ಪದ ಸಂಘಟನೆಗಳು ಡಾ. ರಾಜ್‌ ಪ್ರತಿಮೆಗೆ ಪುಷ್ಪ ನಮನ ಅರ್ಪಿಸಿದವು.