ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ: ಶೇಖರಗೌಡ ಮಾಲಿಪಾಟೀಲ

| Published : Nov 17 2024, 01:20 AM IST

ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ: ಶೇಖರಗೌಡ ಮಾಲಿಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ದೇಶ, ರಾಜ್ಯದ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರಗಳ ಕೊಡುಗೆ ಅಪಾರವಾಗಿದೆ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ದೇಶ, ರಾಜ್ಯದ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರಗಳ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ ಹೇಳಿದರು.

ಪಟ್ಟಣದ ತಾಲೂಕಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ, ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಆರ್.ಕೆ.ಡಿ.ಸಿ.ಸಿ ಬ್ಯಾಂಕ್ ರಾಯಚೂರ, ಇಪ್ಕೋ ಸಂಸ್ಥೆ ಕೊಪ್ಪಳ, ಸಹಕಾರ ಇಲಾಖೆ ಕೊಪ್ಪಳ ಸಹಯೋಗದಲ್ಲಿ ಶನಿವಾರ ನಡೆದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದ ಪ್ರತಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಹಿರಿಯದಾಗಿದೆ. ತಾನು, ತನಗಾಗಿ ಎಲ್ಲರೂ ಎಂಬುದೇ ಸಹಕಾರಿ ಸಂಘದ ತತ್ವ. ರೈತರ ಮತ್ತು ವ್ಯಾಪಾರಸ್ಥರ ಹಿತ ಕಾಪಾಡುವುದೇ ಸಹಕಾರಿ ಸಂಘದ ಉದ್ದೇಶ. ಆರ್ಥಿಕ, ಸಾಮಾಜಿಕ, ರಾಜಕೀಯ ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಸಹಕಾರ ಅತ್ಯಗತ್ಯ. ಸಹಕಾರಿ ಸಂಘಗಳಲ್ಲಿ ರೈತರು ಸಾಲಸೌಲಭ್ಯ ಪಡೆದು ಆರ್ಥಿಕ ವ್ಯವಹಾರ, ಹೈನುಗಾರಿಕೆ, ವ್ಯಾಪಾರ, ಗೃಹ ಉದ್ಯೋಗ ಮುಂತಾದ ಕೌಶಲ್ಯ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಮೂಲಕ ಆರ್ಥಿಕ ಜೀವನ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಎಲ್ಲರೂ ಸಹಕಾರ ಮನೋಭಾವ ಹೊಂದಬೇಕು ಎಂದರು.

ಸ್ಥಳೀಯ ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಹಕಾರಿ ಸಂಘಗಳನ್ನು ಇನ್ನುಷ್ಟು ಸದೃಢಗೊಳಿಸಿಸುವ ದಿಸೆಯಲ್ಲಿ ತಾಂತ್ರಿಕತೆ, ಪಾರದರ್ಶಕತೆ ವ್ಯವಸ್ಥೆಗೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಆರ್.ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ ಮಾತನಾಡಿ, ಯಾವುದೇ ಸಹಕಾರಿ ಸಂಘಗಳು ಸಮಗ್ರ ಅಭಿವೃದ್ಧಿ ಹೊಂದಬೇಕಾದರೆ ಸಹಕಾರಿ ಸಂಘದ ಆಡಳಿತ ಮಂಡಳಿ ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸಿದಾಗ ಬೆಳವಣಿಗೆ ಹೊಂದಲು ಸಾಧ್ಯವಿದೆ ಎಂದರು.

ಅತಿಥಿಗಳಾಗಿ ಸರ್ಕಾರಿ ಪ್ರಾಥಮಿಕ ಶಾಲಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂಗಪ್ಪ ರಾಜೂರು, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಹಾಲಯ್ಯ ಹುಡೆಜಾಲಿ, ನಾನಾ ಸಹಕಾರಿ ಸಂಘಗಳ ಪದಾಧಿಕಾರಿಗಳಾದ ಭೀಮರಡ್ಡಿ ಶ್ಯಾಡ್ಲಗೇರಿ, ಶಿವಪ್ಪ ವಾದಿ, ಷಣ್ಮುಖಪ್ಪ ರಾಂಪೂರ, ಎಸ್.ವ್ಹಿ. ಧರಣಾ, ರಮೇಶ ಕಾರಬಾರಿ, ಉಪನಿಬಂಧಕರಾದ ದಸ್ತಗೀರ ಅಲಿ, ಪ್ರಕಾಶ ಸಜ್ಜನ್, ಸ.ಅ.ಅಧಿಕಾರಿ ಚಂದ್ರಶೇಖರ, ಇಪ್ಕೋ ಸಂಸ್ಥೆ ಕ್ಷೇತ್ರಾಧಿಕಾರಿ ಎನ್. ರಾಘವೇಂದ್ರ, ಕ್ಷೇತ್ರಾಧಿಕಾರಿ ಎಚ್.ಎಸ್. ಪಾಟೀಲ, ಮಂಜುನಾಥ ಮತ್ತಿತರರಿದ್ದರು.