ಇಂದು ಆರ್.ಮಲ್ಲೇಶಪ್ಪಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ

| Published : Nov 17 2024, 01:20 AM IST

ಸಾರಾಂಶ

Today, R. Malleshappa was awarded the Sahakara Ratna Award.

ಚಳ್ಳಕೆರೆ: ಸಹಕಾರ ಕ್ಷೇತ್ರದಲ್ಲಿ ೪೦ ವರ್ಷಗಳಿಂದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿ ಸಹಕಾರಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ದಕ್ಷತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಹಿರಿಯ ಸಹಕಾರಿ ಧುರೀಣ, ಚಿಕ್ಕಮಧುರೆ ಆರ್.ಮಲ್ಲೇಶಪ್ಪನವರಿಗೆ ಇಂದು ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರು ಆದೇಶ ನೀಡಿ, ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ನಿರಂತರ ಸೇವೆ ಮಾಡಿದ ಆರ್.ಮಲ್ಲೇಶಪ್ಪನವರಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ಭಾನುವಾರ ಬಾಗಿಲಕೋಟೆಯ ನವನಗರದ ಸಭಾಂಗಣದಲ್ಲಿ ನಡೆಯುವ ಸಹಕಾರ ಮಂಡಳದ ಸಹಕಾರಸಪ್ತಾಹದ ವಿಶೇಷ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಆರ್.ಮಲ್ಲೇಶಪ್ಪನವರಿಗೆ ನೀಡಿ ಗೌರವಿಸಲಾಗುವುದು.

ತಾಲೂಕಿನ ಸಹಕಾರಿ ಕ್ಷೇತ್ರದ ಹಿರಿಯ ದುರೀಣ ಆರ್.ಮಲ್ಲೇಶಪ್ಪ, ಪ್ರಾರಂಭದಲ್ಲಿ ಚಿಕ್ಕಮಧುರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ನಂತರ ಚಿತ್ರದುರ್ಗದ ಸಹಕಾರ ಮಂಡಳ, ಡಿಸಿಸಿ ಬ್ಯಾಂಕ್, ಚಳ್ಳಕೆರೆಯ ಟಿಎಪಿಸಿಎಂಸಿ, ಕರ್ನಾಟಕ ರಾಜ್ಯ ಉಣ್ಣೆಕೈಮಗ್ಗ ಮಹಾಮಂಡಳ, ರೇವಣಸಿದ್ದೇಶ್ವರಪತ್ತಿನ ಸಹಕಾರ ಸಂಘ, ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘ, ಎಪಿಎಂಸಿ ಹಾಗೂ ಜಿಲ್ಲಾ ಕೃಷಿ ಸಮಾಜದ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.

----ಪೋಟೋ೧೬ಸಿಎಲ್‌ಕೆ೩ ಆರ್.ಮಲ್ಲೇಶಪ್ಪ ಭಾವಚಿತ್ರ.