ಬಲಿಷ್ಠ ಅರ್ಥಿಕ ಅಭಿವೃದ್ಧಿಗೆ ಅರ್ಥಿಕ ತಜ್ಞರ ಕೊಡುಗೆ ಅಪಾರ

| Published : Oct 06 2023, 01:08 AM IST / Updated: Oct 06 2023, 10:55 AM IST

ಬಲಿಷ್ಠ ಅರ್ಥಿಕ ಅಭಿವೃದ್ಧಿಗೆ ಅರ್ಥಿಕ ತಜ್ಞರ ಕೊಡುಗೆ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ಬಲಿಷ್ಟ ಅರ್ಥಿಕ ಅಭಿವೃದ್ಧಿಗೆ ಅರ್ಥಿಕ ತಜ್ಞರ ಕೊಡುಗೆ ಅಪಾರ

- -ಆರ್ಥಿಕ ತಜ್ಞ ಪ್ರೊ.ಕೆ.ಸಿ. ಬಸವರಾಜು ಫೋಟೋ- 5ಎಂವೈಎಸ್48 ಕನ್ನಡಪ್ರಭ ವಾರ್ತೆ ಮೈಸೂರು ದೇಶದ ಸದೃಢತೆಯ ಆರ್ಥಿಕ ಚಟುವಟಿಕೆಗಳು ಬಲಗೊಳ್ಳಬೇಕಾದರೆ ಆರ್ಥಿಕತೆಯ ದೂರದೃಷ್ಟಿ ಯೋಜನೆಗಳು ಬಹಳ ಮುಖ್ಯವಾಗಿ ಕಾರ್ಯ ನಿರ್ವಹಣೆ ಆಗಬೇಕು ಎಂದು ಆರ್ಥಿಕ ತಜ್ಞ ಪ್ರೊ.ಕೆ.ಸಿ. ಬಸವರಾಜು ಅಭಿಪ್ರಾಯಪಟ್ಟರು. ಜಿಲ್ಲೆಯ ಅರ್ಥಶಾಸ್ತ್ರದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ವೇದಿಕೆಯು ಏರ್ಪಡಿಸಿದ್ದ ಅಂತರಿಕ ಮೌಲ್ಯ ಮಾಪನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಆರ್ಥಿಕ ಯೋಜನೆಗಳನ್ನು ಯೋಜಿಸಿ ಯೋಚನಾತ್ಮಕವಾಗಿ ನಿರೂಪಿತವಾಗಿ ಮಾಡುವುದರ ಫಲವಾಗಿಯೇ ದೇಶದ ಅಭಿವೃದ್ಧಿಗೆ ಇದು ಪೂರಕವಾಗಿದೆ. ಜಾಗತೀಕರಣ , ಖಾಸಗೀಕರಣ, ಸಹಭಾಗಿತ್ವದ ಕಾರಣಗಳಿಂದ 1991ರ ನಂತರದ ಡಾ. ಮನ್ಮೋಹನ್ ಸಿಂಗ್, ಪಿ.ವಿ. ನರಸಿಂಹರಾವ್ ಅವರ ದೂರದೃಷ್ಟಿ ಹಾಗೂ ಇಂದಿನ ಆರ್ಥಿಕ ಸ್ಥಿತಿ ಬಲಗೊಳಿಸುವ ದೇಶ ನಡೆಸುವವರುಗಳಲ್ಲಿನ ಕಾರಣ ಎಂದು ಅವರು ತಿಳಿಸಿದರು. ಅರ್ಥಶಾಸ್ತ್ರದ ಉಪನ್ಯಾಸಕರು ಇಂದಿನ ಆರ್ಥಿಕ ಸ್ಥಿತಿ ಗತಿಗಳನ್ನು ಅದರ ರೂಪುರೇಷೆಗಳನ್ನು ಅರಿವು ಮಾಡಿಕೊಡಬೇಕು. ಇಂದು ಭಾರತವು ವಿಶ್ವ ಮಟ್ಟದಲ್ಲಿ 5ನೇ ಸ್ಥಾನವನ್ನು ಆಕ್ರಮಿಸಿಕೊಂಡು ಮುನ್ನಡೆಯುತ್ತಿದೆ. ಮುಂದಿನ ವರ್ಷಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರವು ಉತ್ತಮ ಸ್ಥಾನದಲ್ಲಿರುವುದು. ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ಗೆ ಮಾನ್ಯತೆ ಪಡೆದ ಕೈಗೊಂಡಿದೆ. ಆದ್ದರಿಂದ ಅರ್ಥಶಾಸ್ತ್ರದ ಉಪನ್ಯಾಸಕರು ವಿದ್ಯಾರ್ಥಿಗಳ ಮನಸ್ಸಿಗೆ ಇಂಥ ಆಗುಹೋಗನ್ನು ತಿಳಿಸಬಹುದು ಎಂದರು. ಭಾರತ ಆರ್ಥಿಕತೆಯ ವೇಗದ ಜೊತೆಯಲ್ಲಿ ಮುನ್ನುಗ್ಗುತ್ತಿರುವ ಹೊತ್ತಿನಲ್ಲಿ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತಹ ಆರ್ಥಿಕ ಪರಿಸ್ಥಿತಿಗಳ ಏರುಪೇರನ್ನು ಸಮರ್ಥವಾಗಿ ಎದುರಿಸಲು ಸಿದ್ಧಗೊಳ್ಳವುದು ನಿಮ್ಮೆಲ್ಲರ ಹೊಣೆಗಾರಿಕೆ ಆಗಿದೆ ಎಂದು ಅವರು ಕಿವಿಮಾತು ಹೇಳಿದರು. 

ಡಿಡಿಪಿಯು ಮರಿಸ್ವಾಮಿ ಮಾತನಾಡಿ, ಪಿಯುಸಿ ಪಠ್ಯದಲ್ಲಿ ಆಂತರಿಕ ಮೌಲ್ಯಮಾಪನ ಅಂಕಗಳು ನೀಡುವುದು ಈ ವರ್ಷದಿಂದ ಇದ್ದು ಇದನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಹಾಗೂ ಉತ್ತಮ ಫಲಿತಾಂಶ ಪಡೆಯುವಂತೆ ಉತ್ತಮ ಬೋಧನೆ ಮಾಡಿ ಎಂದು ಹೇಳಿದರು. ವೇದಿಕೆ ರಾಜ್ಯಾಧ್ಯಕ್ಷ ಕಾಡ್ನೂರು ಶಿವೇಗೌಡ, ಜಿಲ್ಲಾ ಅರ್ಥಶಾಸ್ತ್ರ ವೇದಿಕೆ ಅಧ್ಯಕ್ಷ ನಾಗೇಗೌಡ, ಪ್ರಾಂಶುಪಾಲರಾದ ಶಿವಕುಮಾರ್, ದಿನೇಶ್, ಟಿ.ಎಸ್. ಜಾನ, ಸೋಮಶೇಖರ್, ಮೈನಾವತಿ, ನಾಗರಾಜ್, ವೇದಿಕೆ ಖಜಾಂಚಿ ಜನಾರ್ಧನ್, ಸರ್ಕಾರಿ ನೌಕರ ಸಂಘದ ಉಮೇಶ್, ಪದಾಧಿಕಾರಿಗಳಾದ ಕೋಟೆ ವೆಂಕಟೇಶ್, ರಾಜೇಗೌಡ, ಗುಣಶೇಖರ್, ರೇವಣ್ಣ, ಮಹಾದೇವಸ್ವಾಮಿ, ಪ್ರಶಂತ, ತಮ್ಮಣ್ಣೇಗೌಡ, ಬಿ.ಆರ್. ಶ್ರೀನಿವಾಸ್, ಲಿಂಗಣಸ್ವಾಮಿ, ಮಂಜುನಾಥ, ಜಗದೀಶ್, ಬಿ.ಪಿ. ಕುಮಾರ್ ಮಹಾದೇವನಾಯಕ, ಜಮೀರ್ ಅಹಮದ್, ಎಸ್ ಎಸ್. ರಮೇಶ, ಜವರಯ್ಯ ಮೊದಲಾದವರು ಇದ್ದರು.