ಸಾರಾಂಶ
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವೀರಶೈವ ಮಠ ಮಾನ್ಯಗಳ ಕೊಡುಗೆ ಅಪಾರ.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವೀರಶೈವ ಮಠ ಮಾನ್ಯಗಳ ಕೊಡುಗೆ ಅಪಾರ ಎಂದು ಕುದ್ರಿಮೋತಿಯ ಸಂಸ್ಥಾನ ಮೈಸೂರಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಆವರಣದಲ್ಲಿ ಶುಕ್ರವಾರ ರಾತ್ರಿ ನಡೆದ ಶ್ರೀಧರ ಮುರುಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ೨೩ನೇ ವರ್ಷದ ಪೀಠಾರೋಹಣ ಮಹೋತ್ಸವದಲ್ಲಿ ಪಾವನ ಸಾನಿಧ್ಯ ವಹಿಸಿ ಮಾತನಾಡಿದರು. ಮಠಗಳು ಕೇವಲ ವೀರಶೈವರಿಗೆ ಮಾತ್ರ ಶಿಕ್ಷಣ ನೀಡದೆ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿವೆ ಎಂದರು.
ಶ್ರೀಮಠದ ಒಡೆಯರಾದ ಬಸವಲಿಂಗೇಶ್ವರ ಸ್ವಾಮೀಜಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ನಾಡಿನ ಹೆಸರಾಂತ ಮಠಾಧೀಶರು ಬಸವಣ್ಣವರ ಕಾಯಕ-ದಾಸೋಹಗಳಿಂದ ಜನಮನ ಸೆಳೆಯುವ ಮೂಲಕ ಗೋಶಾಲೆ ಸ್ಥಾಪನೆ, ಬಡಮಕ್ಕಳ ಶಿಕ್ಷಣ ಸೇರಿದಂತೆ ಯೋಗಾಸನ ಶ್ರಮಿಸಿದ ಕೀರ್ತಿ ಅವರಗಳದ್ದಾಗಿದೆ. ಮಠ-ಮಾನ್ಯಗಳು ನೀಡುತ್ತಿರುವ ಶೈಕ್ಷಣಿಕ ಕೊಡುಗೆಯನ್ನು ಎಂದೂ ಮೆರೆಯಲು ಸಾಧ್ಯವಿಲ್ಲ. ಇಂತಹ ಸಾಮಾಜಿಕ ಕಾಳಜಿಯಿಂದ ಕಾಯಕ ಮತ್ತು ದಾಸೋಹಗಳಿಂದ ನಾಡಿನ ಬಡವರಿಗೆ ವಿದ್ಯಾ ದಾನ ಮಾಡುತ್ತಿರುವ ಮಠ-ಮಂದಿರಗಳಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.ಕುಕನೂರು, ಮುಂಡರಗಿ ಅನ್ನದಾನೀಶ್ವರ ಶಾಖಾಮಠದ ಡಾ. ಮಹಾದೇವ ಸ್ವಾಮೀಜಿ ಹಾಗೂ ಜಿಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.
ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ತುಲಾಭಾರ ಸ್ವೀಕರಿಸಿದರು.ಅತಿಥಿಗಳಾಗಿ ರಾಯಚೂರ-ಕೊಪ್ಪಳ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಗೌರಾ, ಕರಿಬಸಯ್ಯ ಬಿನ್ನಾಳ, ಸಿದ್ದು ಉಳ್ಳಾಗಡ್ಡಿ, ಸಂಗಪ್ಪ ಕುಂಬಾರ ಸೇರಿದಂತೆ ಮತ್ತಿತರರು ಇದ್ದರು. ತುಲಾಭಾರ ಸೇವೆಯನ್ನು ಈಶಪ್ಪ ಮಡಿವಾಳ, ಅಯ್ಯಪ್ಪ ಹೊಸಳ್ಳಿ, ಕಳಕಪ್ಪ ಕುಂಬಾರ, ಲಚ್ಚಪ್ಪ ರಾಠೋಡ ಮತ್ತಿತರರು ನೆರವೇರಿಸಿದರು.