ಕನ್ನಡಪ್ರಭ ವಾರ್ತೆ ಇಂಡಿ
ನೌಕರರು ಸಮರ್ಪಣಾ ಭಾವದಿಂದ ಕೆಲಸ ನಿರ್ವಹಿಸಿದರೇ ದೇಶಕ್ಕೆ ಒಳ್ಳೆಯದಾಗುತ್ತದೆ. ಎಸ್ಸಿ,ಎಸ್ಟಿ ನೌಕರರ ಬಡ್ತಿಯಲ್ಲಿ ಕಾಂಗ್ರೆಸ್ ಸರ್ಕಾರ ಹೆಚ್ಚು ಸಹಾಯ ಮಾಡಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ನಗರದ ಗುರುಭವನದಲ್ಲಿ ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಇಂಡಿ ತಾಲೂಕು ಶಾಖೆ ಹಮ್ಮಿಕೊಂಡ ತಾಲೂಕು ಮಟ್ಟದ ನೌಕರರ ಸಮಾವೇಶ ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನಾ ಮತ್ತು ನಿವೃತ್ತ ನೌಕರರಿಗೆ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕು. ನನ್ನ ಅಧಿಕಾರವದಲ್ಲಿ ಸರ್ವ ಸಮುದಾಯಕ್ಕೆ ಸಾಮಾಜಿಕ ನ್ಯಾಯದಡಿಯಲ್ಲಿ ಅವಕಾಶ ನೀಡಿದ್ದೇನೆ. ಮುಂದೆಯೂ ನೀಡುತ್ತೇನೆ. ಜಾತಿ ರಹಿತ ಸಮಾಜ ನಿರ್ಮಾಣ ಎಲ್ಲಿಯವರೆಗೆ ಆಗುವುದಿಲ್ಲವೋ ಅಲ್ಲಿಯವರೆಗೆ ಬದುಕು ವ್ಯರ್ಥ. ಸಮಾಜದಲ್ಲಿ ಯಾರಿಗೂ ನೋವು ಆಗದಂತೆ ಬದುಕು ಸಾಗಿಸುವುದು ಮುಖ್ಯ ಎಂದರು.ದೇಶ ಯಶಸ್ವಿಯಾಗಿ ಸಾಗಲು, ಪ್ರಜಾಪ್ರಭುತ್ವ ಯಶಸ್ವಿಯಾಗಲು ಅಂಬೇಡ್ಕರ್ ನೀಡಿದ ಸಂವಿಧಾನವೇ ಕಾರಣ. ದೇಶಕ್ಕೆ ಬಲಿಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಮಾರ್ಗದಲ್ಲಿ ನಡೆದು ಉತ್ತಮ ಸಮಾಜ ಕಟ್ಟಬೇಕು. ಡಾ.ಅಂಬೇಡ್ಕರ್ ಕೇವಲ ಶೋಷಿತ ಸಮುದಾಯಕ್ಕೆ ಮಾತ್ರ ಸಂವಿಧಾನ ನೀಡಿದ್ದಾರೆ ಎಂಬುವುದು ತಪ್ಪು. ಅವರು ದೇಶದ ಎಲ್ಲ ಸಮಾಜದ ನಾಗರಿಕರಿಗೂ ಅನುಕೂಲವಾಗುವ ರೀತಿಯಲ್ಲಿ ಸಂವಿಧಾನ ರಚನೆ ಮಾಡಿದಕ್ಕಾಗಿ ನಾವೆಲ್ಲ ಇಲ್ಲಿ ಅನ್ಯುನ್ಯತೆಯಿಂದ ಬದುಕುತ್ತಿದ್ದೇವೆ. ಪ್ರತಿಯೊಬ್ಬರೂ ಬುದ್ದ, ಬಸವ, ಅಂಬೇಡ್ಕರ್ ಚಿಂತನೆ ಇಟ್ಟುಕೊಂಡು ಬದುಕು ಸಾಗಿಸಬೇಕು ಎಂದು ಸಲಹೆ ನೀಡಿದರು.
ಸಮಿತಿ ತಾಲೂಕು ಅಧ್ಯಕ್ಷ ಬಿ.ಎಂ.ವಠಾರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಡಿ.ಶಿವಶಂಕರ, ಉಪಾಧ್ಯಕ್ಷ ಆರ್.ಮೋಹನ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ವಿಜಯಕುಮಾರ, ಕಾರ್ಯದರ್ಶಿ ಎಂ.ಬಿ.ಶಿವಕುಮಾರ, ಜಿಲ್ಲಾಧ್ಯಕ್ಷ ಬಿ.ಎಚ್.ನಾಡಗಿರಿ ಮಾತನಾಡಿದರು.ಪುರಸಭೆ ಮಾಜಿ ಅಧ್ಯಕ್ಷೆ ಬುದ್ದವ್ವ ಕಾಳೆ, ಪ್ರಶಾಂತ ಕಾಳೆ, ಎಸ್.ಆರ್.ನಡುಗಡ್ಡಿ, ಬಸವರಾಜ ರಾವೂರ, ಎಸ್.ವಿ.ಹರಳಯ್ಯ, ಎ.ಎಸ್.ಪಾಟೀಲ, ಡಿ.ಸಿ.ಹರಿಜನ ಇದ್ದರು. ಡಾ.ಕಾಂತು ಇಂಡಿ, ವಿ.ಜಿ.ಕಲ್ಮನಿ, ನಿಜಣ್ಣ ಕಾಳೆ, ಹುಚ್ಚಪ್ಪ ಶಿವಶರಣ, ಉಮೇಶ ಬಜಂತ್ರಿ, ವಿಜಯಕುಮಾರ ಪೊಳ, ಸದಾನಂದ ಈರನಕೇರಿ, ಸುಭಾಷ ಲಮಾಣಿ, ಪಿ.ಬಿ.ಪೂಜಾರಿ, ದತ್ತು ದೇವರಮನಿ, ಎಸ್.ಎನ್.ಕೋಳಿ, ದುಂಡಪ್ಪ ಹರಿಜನ, ಚಂದ್ರು ರಾಠೋಡ, ಮಂಜುನಾಥ ನಾಯ್ಕೋಡಿ, ಚಂದ್ರಕಲಾ ಕಾಳೆ, ಚೌಡಮ್ಮ ತೊರವಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಮೇಲು-ಕೀಳು ಎಂಬ ಭಾವನೆ ಬದಿಗಿಟ್ಟು, ಸೈದ್ಧಾಂತಿಕ, ವೈಚಾರಿಕೆ ಚಿಂತನೆ ಇಟ್ಟುಕೊಂಡು ಬದುಕು ಸಾಗಿಸಬೇಕು. ಬುದ್ಧ, ಬಸವ, ಅಂಬೇಡ್ಕರ್ ತಳಹದಿಯ ಮೇಲೆ ಆಡಳಿತ ನಡೆಸುವ ಸಿಎಂ ಸಿದ್ದರಾಮಯ್ಯನವರು ಶೋಷಿತ ಸಮುದಾಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಬಸವಣ್ಣನವರ ಆಶೆಯದಂತೆ ಸರ್ವರನ್ನು ಪ್ರೀತಿಸುವ ಗುಣ ಹೊಂದಿದ್ದಾರೆ.-ಯಶವಂತರಾಯಗೌಡ ಪಾಟೀಲ,
ಶಾಸಕರು.