ಸಕಲ ಕಾಲಕ್ಕೂ ಸಲ್ಲುವಂಥ ವಚನಗಳ ರಚಿಸಿದ ಶರಣರು: ಬಿ.ಎಂ.ಕುಮಾರಪ್ಪ

| Published : Apr 29 2025, 12:49 AM IST

ಸಕಲ ಕಾಲಕ್ಕೂ ಸಲ್ಲುವಂಥ ವಚನಗಳ ರಚಿಸಿದ ಶರಣರು: ಬಿ.ಎಂ.ಕುಮಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದ ಶರಣರು ಸದಾ ಕಾಲಕ್ಕೂ ಸಲ್ಲುವಂಥ ವಚನ ಸಾಹಿತ್ಯ ರಚಿಸಿ ಮನುಷ್ಯರ ಮೌಲ್ಯಗಳನ್ನು ಎತ್ತಿಹಿಡಿದ ಮಹಾನ್ ವ್ಯಕ್ತಿಗಳಾಗಿದ್ದಾರೆ. ಅಂತಹ ಶರಣರು ಬರೆದ ವಚನಗಳ ಸಾರವನ್ನು ನಾವೆಲ್ಲರೂ ಅರಿತು, ಪಾಲಿಸುತ್ತ ನಡೆದಾಗ ಜೀವನ ಪಾವನವಾಗುವುದು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಮುಖ ಬಿ.ಎಂ.ಕುಮಾರಪ್ಪ ಹೇಳಿದ್ದಾರೆ.

- ಬಸವ ಜಯಂತಿ; ವಚನ-ಗೀತಗಾಯನ ತರಬೇತಿ ಶಿಬಿರ

- - -

ಚನ್ನಗಿರಿ: 12ನೇ ಶತಮಾನದ ಶರಣರು ಸದಾ ಕಾಲಕ್ಕೂ ಸಲ್ಲುವಂಥ ವಚನ ಸಾಹಿತ್ಯ ರಚಿಸಿ ಮನುಷ್ಯರ ಮೌಲ್ಯಗಳನ್ನು ಎತ್ತಿಹಿಡಿದ ಮಹಾನ್ ವ್ಯಕ್ತಿಗಳಾಗಿದ್ದಾರೆ. ಅಂತಹ ಶರಣರು ಬರೆದ ವಚನಗಳ ಸಾರವನ್ನು ನಾವೆಲ್ಲರೂ ಅರಿತು, ಪಾಲಿಸುತ್ತ ನಡೆದಾಗ ಜೀವನ ಪಾವನವಾಗುವುದು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಮುಖ ಬಿ.ಎಂ.ಕುಮಾರಪ್ಪ ಹೇಳಿದರು.

ಪಟ್ಟಣದ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಕದಳಿ ಮಹಿಳಾ ವೇದಿಕೆ, ಬಸವ ಬಳಗ ಗರಗ ಮತ್ತು ದಾವಣಗೆರೆಯ ಸುಶ್ರಾವ್ಯ ಸಂಗೀತ ವಿದ್ಯಾಲಯ ಆಶ್ರಯದಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ವಚನ ಹಾಗೂ ಗೀತ ಗಾಯನ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ಈ ಉಚಿತ ಗೀತಗಾಯನ ಶಿಬಿರ ಏ.29ರವರೆಗೆ ನಡೆಯಲಿದೆ. ಬೆಳಗ್ಗೆ 10.30ರಿಂದ ಸಂಜೆ 3.45 ಗಂಟೆವರೆಗೆ ಶಿಬಿರ ನಡೆಯಲಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸತ್ಯಸಾಯಿ ವಿದ್ಯಾಸಂಸ್ಥೆ ನಿವೃತ್ತ ಮುಖ್ಯ ಶಿಕ್ಷಕ ಜಿ.ಬಿ.ಪರಮೇಶ್ವರಪ್ಪ, ಕಿರುತೆರೆ ನಟ ಅಪರಂಜಿ ಶಿವರಾಜ್, ನಿವೃತ್ತ ಮುಖ್ಯ ಶಿಕ್ಷಕ ಓಂಕಾರಪ್ಪ, ಕಾರ್ಯಕ್ರಮದ ಸಂಯೋಜಕಿ ಆರ್.ರೇಖಾ, ಶಿಬಿರದ ಸಂಚಾಲಕ ಬಿ.ಎಂ.ಕುಮಾರಪ್ಪ, ಸಂಗೀತ ಶಿಕ್ಷಕ ಚೇತನ್ ಕುಮಾರ್ ಉಪಸ್ಥಿತರಿದ್ದರು.

- - -

-28ಕೆಸಿಎನ್‌ಜಿ2.ಜೆಪಿಜಿ:

ವಚನ-ಗೀತ ಗಾಯನ ತರಬೇತಿ ಶಿಬಿರವನ್ನು ಜಿಲ್ಲಾ ಶಸಾಪ ಪ್ರಮುಖ ಬಿ.ಎಂ.ಕುಮಾರಪ್ಪ ಉದ್ಘಾಟಿಸಿದರು.