ಚನ್ನಪಟ್ಟಣ: ಅಯ್ಯನಗುಡಿ ದನಗಳ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ತಾಲೂಕಿನ ಪುರಾಣ ಪ್ರಸಿದ್ದ ಶ್ರೀ ಕೆಂಗಲ್ ಅಂಜನೇಯಸ್ವಾಮಿ ದನಗಳ ಜಾತ್ರೆ ಈ ವರ್ಷ ಕಳೆಕಟ್ಟಿದ್ದು, ಜಾತ್ರೆಯಲ್ಲಿ ರಾಸುಗಳ ಗಜ್ಜೆ ಸಪ್ಪಳ ಜೋರಾಗಿಯೇ ಕೇಳಿ ಬರುತ್ತಿದೆ.
ಚನ್ನಪಟ್ಟಣ: ಅಯ್ಯನಗುಡಿ ದನಗಳ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ತಾಲೂಕಿನ ಪುರಾಣ ಪ್ರಸಿದ್ದ ಶ್ರೀ ಕೆಂಗಲ್ ಅಂಜನೇಯಸ್ವಾಮಿ ದನಗಳ ಜಾತ್ರೆ ಈ ವರ್ಷ ಕಳೆಕಟ್ಟಿದ್ದು, ಜಾತ್ರೆಯಲ್ಲಿ ರಾಸುಗಳ ಗಜ್ಜೆ ಸಪ್ಪಳ ಜೋರಾಗಿಯೇ ಕೇಳಿ ಬರುತ್ತಿದೆ.
ಹಳ್ಳಿಕಾರ್ ಸೇರಿದಂತೆ ವಿವಿಧ ತಳಿಯ ನೂರಾರು ರಾಸುಗಳೊಂದಿಗೆ ರೈತರು ಆಗಮಿಸಿ ಮಾರಾಟಕ್ಕಿಟ್ಟಿದ್ದಾರೆ. ಇದರೊಂದಿಗೆ ರಾಸುಗಳನ್ನು ಖರೀದಿಸಲು ವರ್ತಕರೂ ಆಗಮಿಸಿದ್ದು, ರಾಸುಗಳ ಮಾರಾಟ-ಖರೀದಿ ವಹಿವಾಟು ಭರ್ಜರಿಯಾಗಿ ನಡೆದಿದೆ.ದೇವಸ್ಥಾನದ ಆವರಣ ಹಾಗೂ ಅಕ್ಕಪಕ್ಕದ ಜಮೀನುಗಳಲ್ಲಿ ರಾಸುಗಳನ್ನು ಕಟ್ಟಲಾಗಿದ್ದು, ದೇವಸ್ಥಾನಕ್ಕೆ ಆಗಮಿಸುವ ಭಕ್ತರು ವಿವಿಧ ತಳಿಯ ರಾಸುಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಹಿಂದೆ ನಗರದ ಕುಡಿನೀರು ಕಟ್ಟೆಯವರೆಗೂ ರಾಸುಗಳನ್ನು ಕಟ್ಟಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಜಾತ್ರೆ ಗತವೈಭವವನ್ನು ಕಳೆದುಕೊಂಡಿದ್ದರೂ ಆಸಕ್ತ ರೈತರು ರಾಸುಗಳೊಂದಿಗೆ ಆಗಮಿಸಿದ್ದಾರೆ.
ವಿವಿಧ ತಳಿಯ ರಾಸುಗಳು:ಸುಗ್ಗಿಹಬ್ಬ ಸಂಕ್ರಾಂತಿಯ ಆರಂಭಗೊಳ್ಳುವ ರಾಜ್ಯದ ಮೊದಲ ರಾಸುಗಳ ಜಾತ್ರೆ ಎಂಬ ಹಿರಿಮೆಗೆ ಪಾತ್ರವಾಗಿರುವ ಕೆಂಗಲ್ ದನಗಳ ಜಾತ್ರೆ ಪಾತ್ರವಾಗಿದೆ. ರೈತರು ಈ ಜಾತ್ರೆಗೆ ರಾಸುಗಳನ್ನು ಕೊಳ್ಳಲು ಮತ್ತು ಜಾನುವಾರುಗಳನ್ನು ಮಾರಾಟ ಮಾಡಲು ಆಗಮಿಸುತ್ತಾರೆ. ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ವಿವಿಧ ತಳಿಯ ರಾಸುಗಳನ್ನು ಕಾಣಬಹುದಾಗಿದೆ.
ರಾಸುಗಳನ್ನು ಮಾರಾಟ ಮಾಡಲು ಹಾಗೂ ಖರೀದಿಸಲು ಜಿಲ್ಲೆಯ ರೈತರು ಮಾತ್ರವಲ್ಲದೆ ಮದ್ದೂರು, ಕುಣಿಗಲ್, ತುಮಕೂರು, ಮಾಗಡಿ, ಆನೇಕಲ್, ದೊಡ್ಡಬಳ್ಳಾಪುರ, ನೆಲಮಂಗಲ, ಕೋಲಾರ, ತುರುವೇಕೆರೆ, ತಿಪಟೂರು ಸೇರಿ ನೆರೆಯ ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಿಂದಲೂ ರೈತರು ಆಗಮಿಸಿದ್ದಾರೆ. ಕೆಲ ರೈತರು ಜೋಡಿ ಎತ್ತುಗಳನ್ನು ಮೆರವಣಿಗೆ ಮೂಲಕ ಜಾತ್ರೆಗೆ ಕರೆತಂದಿದ್ದರು. ರೈತರು ತಮಟೆ ವಾದ್ಯ, ಪೂಜಾ ಕುಣಿತ, ಡೊಳ್ಳು ಕುಣಿತ ಸೇರಿ ಕೆಲ ಜಾನಪದ ಕಲಾತಂಡಗಳೊಂದಿಗೆ ತಮ್ಮ ರಾಸುಗಳನ್ನು ಮೆರವಣಿಗೆ ಮಾಡಿ ಜಾತ್ರೆಗೆ ಕರೆತರುತ್ತಿದ್ದದ್ದು ವಿಶೇಷವೆನಿಸಿತು.ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ:
ಕೆಂಗಲ್ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಾತ್ರೆಗೆ ಬರುವ ರಾಸುಗಳು ಹಾಗೂ ರೈತರು ಹಾಗೂ ವರ್ತಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ರಾಸುಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಸೇರಿ ಅಗತ್ಯ ಮೂಲಭೂತ ಸವಲತ್ತುಗಳನ್ನು ಒದಗಿಸಲಾಗಿದೆ.ಹಳ್ಳಕಾರ್ ಹಸುಗಳ ಆಕರ್ಷಣೆ:
ಇನ್ನು ಜಾತ್ರೆಗೆ ವಿವಿಧ ತಳಿಯ ರಾಸುಗಳು ಆಗಮಿಸಿವೆಯಾದರೂ, ಹಳ್ಳಿಕಾರ್ ಎತ್ತು ಹಾಗೂ ಹಸುಗಳಿಗೆ ಬೇಡಿಕೆ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಹಳ್ಳಿಕಾರ್ ಹಸುಗಳನ್ನು ಸಾಕುವುದು ಸಹ ಒಂದು ಟ್ರೆಂಡ್ ಆಗಿರುವ ಕಾರಣ ಅವುಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.ಲಕ್ಷಗಟ್ಟಲೇ ಮೌಲ್ಯದ ರಾಸುಗಳು:
ರಾತ್ರಿಯಲ್ಲಿ ಒಂಟಿ ರಾಸು, ಕರು, ಜೋಡಿ ಎತ್ತು ಹೀಗೆ ಎಲ್ಲ ರೀತಿಯ ರಾಸುಗಳನ್ನು ಕಾಣಬಹುದಾಗಿದೆ. ಜಾತ್ರೆಯಲ್ಲಿ ೫೦ ಸಾವಿರದಿಂದ ಹಿಡಿದು ೧೦ ಲಕ್ಷ ರು.ವರೆಗಿನ ರಾಸುಗಳನ್ನು ನೋಡಬಹುದಾಗಿದೆ. ಜನ ರಾಸುಗಳೊಂದಿಗೆ ಪೋಟೋ, ಸೆಲ್ಫಿ ತೆಗೆಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಬಾಕ್ಸ್....................
ರಾಜ್ಯಮಟ್ಟದ ರಾಸುಗಳ ಸ್ಪರ್ಧೆಅಯ್ಯನಗುಡಿ ಜಾತ್ರೆಯಲ್ಲಿ ರಾಸುಗಳ ಪ್ರದರ್ಶನ, ಮಾರಾಟ ಹಾಗೂ ಖರೀದಿಯ ಜತೆಗೆ ಉತ್ತಮ ರಾಸುಗಳ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ. ರೈತರು ತಾವು ಸಾಕಿರುವ ಉತ್ತಮ ರಾಸುಗಳೊಂದಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬೇರೆ ಬೇರೆ ಜಿಲ್ಲೆಗಳಿಂದಲೂ ಆಗಮಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವರ್ಗದ ಮೂರು ಅತ್ಯುತ್ತಮ ರಾಸುಗಳಿಗೆ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ನೀಡುವ ಜತೆಗೆ ರಾಸುಗಳ ಮಾಲೀಕರನ್ನು ಸನ್ಮಾನಿಸಲಾಗುವುದು.
(ಕೋಟ್ ಪ್ಯಾನಲ್‌ನಲ್ಲಿ ಬಳಸಿ)ಕೋಟ್.................
ಸಂಕ್ರಾಂತಿಗೆ ನಡೆಯುವ ಕೆಂಗಲ್ ದನಗಳ ಜಾತ್ರೆ ಬಹಳ ವಿಶಿಷ್ಟವಾದದ್ದು. ಕೋವಿಡ್‌ನಿಂದ ಕಳೆದ ಕೆಲ ವರ್ಷಗಳಿಂದ ಜಾತ್ರೆ ಕಳೆಗುಂದಿತ್ತು. ಇದೀಗ ಈ ಬಾರಿ ಜಾತ್ರೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿವಿಧ ತಳಿಯ ರಾಸುಗಳೊಂದಿಗೆ ರೈತರು ಆಗಮಿಸಿರುವುದು ಸಂತಸ ತರಿಸಿದೆ.-ವಿ.ಬಿ.ಚಂದ್ರು, ಮಾಜಿ ಅಧ್ಯಕ್ಷರು, ಕೆಂಗಲ್ ಆಂಜನೇಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ
ಪೋಟೊ೧೬ಸಿಪಿಟಿ೧:ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಜಾತ್ರೆಗೆ ಆಗಮಿಸಿರುವ ರಾಸುಗಳು ಹಾಗೂ ರೈತರು.
ಪೊಟೋ೧೬ಸಿಪಿಟಿ೨:ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕಟ್ಟಿರುವ ರಾಸುಗಳು.
ಪೋಟೊ೧೬ಸಿಪಿಟಿ೩:ಡೊಳ್ಳುಕುಣಿತ, ಜಾನಪದ ಕಲಾಮೇಳದ ಜೊತೆ ಜಾತ್ರೆಗೆ ಆಗಮಿಸಿದ ಎತ್ತಿನ ಜೋಡಿ.