ಶಿಗ್ಗಾಂವಿ: ವಿಶ್ವವಿದ್ಯಾಲಯದ ಶ್ರೇಯೋಭಿವೃದ್ಧಿ, ಸಮಸ್ಯೆ ಮತ್ತು ಸವಾಲುಗಳಿಗೆ ಧ್ವನಿಯಾಗಿ ನಿಲ್ಲಲು ಎಲ್ಲ ವಿಶ್ವವಿದ್ಯಾಲಯಗಳಲ್ಲೂ ನೌಕರರ ಸಂಘ ಸ್ಥಾಪನೆ ಸಾಮಾನ್ಯ. ಅದರಂತೆ ನಮಲ್ಲಿ ರಚನಾತ್ಮಕವಾಗಿ ಸಂಘವು ಆರಂಭ ಆಗಿರುವುದು ಉತ್ತಮ ಬೆಳವಣಿಗೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಅವರು ಹೇಳಿದರು.
ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಶನಿವಾರ ನೌಕರರ ಸಂಘ ಹಾಗೂ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಲ್ಲಿಗೆದಂಡೆ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮಳೆಗಾಲ, ಬೇಸಿಗೆ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಲ್ಲಿ ನಡೆದಾಡುವ ಸಾರ್ವಜನಿಕರಿಗೆ ಅನಕೂಲ ಆಗುವ ರೀತಿಯಲ್ಲಿ ನೌಕರರ ಸಂಘದಿಂದಲೇ ಖರ್ಚು ವೆಚ್ಚ ನಿರ್ವಹಿಸಿ, ಬಸ್ ನಿಲ್ದಾಣ ನಿರ್ಮಿಸಿರುವುದು ವಿಶ್ವವಿದ್ಯಾಲಯಕ್ಕೆ ಆರ್ಥಿಕವಾಗಿ ಹೊಣೆಯಾಗದ ರೀತಿಯಲ್ಲಿ ನಿರ್ಮಾಣವಾದ ಈ ಕಟ್ಟಡವು ಎಲ್ಲರಿಗೂ ಅನಕೂಲ ಆಗಲಿದೆ. ಸಂಘವು ಇತರರಿಗೂ ಮಾದರಿ ಆಗಲಿ ಎಂದರು.
ನೌಕರರ ಸಂಘದ ಅಧ್ಯಕ್ಷರಾದ ಡಾ. ವೆಂಕನಗೌಡ ಪಾಟೀಲ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ ದೂರದೃಷ್ಟಿಯ ದಾರಿಯಲ್ಲಿ ಸಾಗಬೇಕಾದಾಗ ಅಡತಡೆ ಸವಾಲುಗಳು ಸಾಮಾನ್ಯ, ಅದನ್ನು ಎದುರಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಜೊತೆಯಾಗಿ ನಿಂತಿರುವ ಸಹದ್ಯೋಗಿಗಳನ್ನು ಸ್ಮರಿಸಿ, ಸದೃಢ ಸಮಾಜ ಕಟ್ಟಲು ವಿದ್ಯಾರ್ಥಿಗಳು ಬುದ್ಧ, ಬಸವ ಅಂಬೇಡ್ಕರ್ ಅವರಂತಹ ಆದರ್ಶಗಳನ್ನು ಬೆಳಸಿಕೊಳ್ಳಬೇಕು, ಒಗ್ಗಟ್ಟಿನ ಸಂಘಗಳನ್ನು ಒಡೆಯಲು ಅನೇಕರು ಪ್ರಯತ್ನ ಪಡುತ್ತಾರೆ ಆದರೆ, ಸವಾಲುಗಳನ್ನು ಎದುರಿಸಲು ಸಿದ್ದವಾಗಿರಬೇಕು ಎಂದರು.ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಡಾ. ಶಿವಶಂಕರ್ ಕೆ., ಗ್ರಂಥಪಾಲಕ ಡಾ. ರಾಜಶೇಖರ ಕುಂಬಾರ, ಸಂಘದ ಖಜಾಂಚಿ ರೇಣುಕಪ್ಪ ಸುಗ್ಗಿ, ಪದಾಧಿಕಾರಿಗಳಾದ ಡಾ.ಅರುಣಬಾಬು ಅಂಗಡಿ, ಶಂಕರಗೌಡ ಮಾಲಿಪಾಟೀಲ, ಸಂಘದ ಸದಸ್ಯರು ಹಾಗೂ ಸಹಾಯಕ ಪ್ರಾಧ್ಯಕರಾದ ಡಾ. ಗಿರೇಗೌಡ ಅರಳಿಹಳ್ಳಿ, ಡಾ. ಬಸವರಾಜ ಚಂದ್ರಕಾಂತ, ಡಾ. ಬಂಡು ಕೆಂಪವಾಡೆ, ಹನುಮಂತರಾಯಗೌಡ, ಸದಸ್ಯರಾದ ರಾಕೇಶ ಮನ್ಪಡೆ ಸೇರಿದಂತೆ ಸಂಘದ ಸದಸ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಹಾಯಕ ಸಂಶೋಧನಾಧಿಕಾರಿ ಡಾ. ಮಲ್ಲಿಕಾರ್ಜುನ ಮನ್ಪಡೆ ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ.ಹುಲುಗಪ್ಪ ನಾಯ್ಕರ್ ವಂದಿಸಿದರು.