ಶಿಕ್ಷಕರು ವಿದ್ಯಾರ್ಥಿಗಳ ಪಾಲಿಗೆ ನಿಜವಾದ ಹೀರೋಗಳು. ಅವರ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಾಲೂಕು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ದತ್ತಣ್ಣ ವೆರ್ಣೇಕರ್ ಹೇಳಿದರು.
ಶಿಗ್ಗಾಂವಿ: ಶಿಕ್ಷಕರು ವಿದ್ಯಾರ್ಥಿಗಳ ಪಾಲಿಗೆ ನಿಜವಾದ ಹೀರೋಗಳು. ಅವರ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಾಲೂಕು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ದತ್ತಣ್ಣ ವೆರ್ಣೇಕರ್ ಹೇಳಿದರು.ಪಟ್ಟಣದ ಶ್ರೀಮಂತ ಬಸವಂತರಾವ ಬುಳಪ್ಪ ಮಾಮಲೆ ದೇಸಾಯಿ ಶಾಲೆಯಲ್ಲಿ ನಡೆದ ೨೦೦೦-೨೦೦೧ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಸಮಾರಂಭ ಹಾಗೂ ನೆನಪಿನಂಗಳ-೨ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಕಲಿಕೆ ಶ್ರೇಷ್ಠ ಮಟ್ಟದಲ್ಲಿ ಇರಬೇಕೆಂದು ಶಿಕ್ಷಕರ ಬಯಕೆ. ಅವರ ಮಾರ್ಗದರ್ಶನ ಬದುಕಿನ ಸವಾಲು ಎದುರಿಸಲು ನೆರವಾಗುತ್ತದೆ. ಕಲಿಸಿದ ಗುರುಗಳನ್ನು ಗೌರವಿಸಿದರೆ ಮಾತ್ರ ಬದುಕು ಸುಂದರವಾಗಿರುತ್ತದೆ ಎಂದರು.ಪ್ರಾಚಾರ್ಯ ರಮಾಕಾಂತ್ ಭಟ್ ಮಾತನಾಡಿ, ಕಲಿಸಿದ ಗುರುಗಳನ್ನು ನೆನೆದು ಗೌರವಿಸುವ ಮನೋಭಾವ ಕಡಿಮೆಯಾಗಿರುವ ಇಂದಿನ ದಿನಗಳಲ್ಲಿ ತಾವುಗಳು ನೆನಪಿನಂಗಳ ಕಾರ್ಯಕ್ರಮವನ್ನು ಆಯೋಜಿಸಿ ಕಲಿಸಿದ ಗುರುಗಳನ್ನು ಸನ್ಮಾನಿಸಿ ಗೌರವಿಸಿರುವ ಈ ಸಮಾರಂಭ ಸದಾ ನೆನಪಿನಂಗಳದಲ್ಲಿ ಇರಲಿದೆ ಎಂದರು.ನಿವೃತ್ತ ಪ್ರಾಚಾರ್ಯ ಆರ್.ಎಸ್. ಸಿಂದೂರ ಮಾತನಾಡಿ, ಜನ್ಮ ನೀಡಿದ ತಂದೆ ತಾಯಿಯನ್ನು ಪೋಷಿಸಿ, ಪೂಜಿಸುವುದರ ಜೊತೆಗೆ ವಿದ್ಯೆ ಕಲಿಸಿದ ಗುರುಗಳನ್ನು ದೇವರೆಂದೇ ಭಾವಿಸಿದರೆ ಜೀವನ ಯಶಸ್ವಿಯಾಗುತ್ತದೆ ಎಂದರು.ನಿವೃತ್ತ ಶಿಕ್ಷಕ ಪಿ.ಎಸ್. ಯಲಿಗಾರ ಮಾತನಾಡಿ, ಶಿಕ್ಷಕರು ಪ್ರೇರಣಾ ಶಕ್ತಿ ಇದ್ದಂತೆ. ಅಜ್ಞಾನವನ್ನು ತೊಲಗಿಸಿ ಸುಜ್ಞಾನದ ಶಕ್ತಿಯನ್ನು ಧಾರೆಯೆರೆದ ಶಿಕ್ಷಕರನ್ನು ಸ್ಮರಿಸುತ್ತಿರುವ ಈ ಕಾರ್ಯಕ್ರಮ ಸ್ಮರಣೀಯ ಎಂದರು.ಶರಣಪ್ಪ ಹೆಸರೂರ, ಲತಾ ಶೆಟ್ಟರ್, ಧರ್ಮರಾಜ ಕಮ್ಮಾರ, ವೆಂಕಟೇಶ ಬೆಳಗಲಿ, ರವಿ ಎಲಿವಾಳ, ಉಪಪ್ರಾಚಾರ್ಯ ಕೆ.ಬಿ. ಚೆನ್ನಪ್ಪ, ಜಯಣ್ಣ ಹೆಸರೂರ, ಎಲ್.ಬಿ. ದಳವಾಯಿ, ಎಲ್.ಡಿ. ಕಾಂಗೊ, ಬಿ.ಡಿ. ಚಾರಿ, ಬಿ.ಎಸ್. ಹಿರೇಮಠ, ಕೆ.ಎಚ್. ಬಂಡಿವಡ್ಡರ, ಎಂ.ಎಸ್. ಅಸುಂಡಿ, ಪಿ.ಎಂ. ಹಿರುಲಾಲ, ಸಿ.ಎನ್. ಬಡ್ಡಿ, ಎಸ್.ವ್ಹಿ. ಸುರಗಿಮಠ, ಸಾಯಿ ಸೂಪರ್ ಮಾರ್ಕೆಟ್ ಮಾಲೀಕ ರವಿ ಕಡೇಮನಿ, ಸುರೇಶ ಯಲಿಗಾರ, ಹನುಮಂತಗೌಡ ಕರಿಗೌಡ್ರ, ಭಾಗ್ಯ ಗಾಯದ, ಹನುಮಂತಗೌಡ ಕರಿಗೌಡರ, ಸೃಷ್ಟಿ ಎರೇಸಿಮೆ, ಹೇಮಾ ಪುರಾಣಿಕಮಠ, ನಿಂಗಪ್ಪ ಸಂಶಿ, ಕೇದಾರಪ್ಪ ಕೋಕಾಟೆ, ನಾಗರಾಜ ಜೀವಾಜಿ, ಕವಿನಿ ಹಾನಗಲ್ಲ ಸೇರಿದಂತೆ ಇತರರಿದ್ದರು. ಲತಾ ಬಾವಿ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಕ ಮುದಕಪ್ಪ ಬೆಟದೂರ ವಂದಿಸಿದರು. ಕುಮಾರ ಪಟ್ಟಣಶೆಟ್ಟಿ ಸ್ವಾಗತಿಸಿದರು.ಗುರು ಎಂಬ ಪದಗಳನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ, ಗುರುಗಳು ಕಲಿಸಿದ ಅಕ್ಷರದಿಂದ ನಾನು ನನ್ನ ಜೀವನ ರೂಪಿಸಿಕೊಂಡಿರುವೆ ಎಂದು ಹಳೆ ವಿದ್ಯಾರ್ಥಿ ರಾಜು ಶಿಗ್ಲಿ ಹೇಳಿದರು.
ಎಲ್ಲ ದಾನಗಳಿಗಿಂತ ವಿದ್ಯಾದಾನ ಅತೀ ಶ್ರೇಷ್ಠ. ವಿದ್ಯಾದಾನ ಮಾಡಿ ನಮ್ಮ ಬದುಕು ರೂಪಿಸಿದ ಗುರುಗಳಿಗೆ ಗೌರವಿಸಲು ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎಂದು ಹಳೆ ವಿದ್ಯಾರ್ಥಿ ಶಿವಗಂಗಾ ದುಂಡಪ್ಪನವರಹೇಳಿದರು.