ಕಕ್ಕಬೆ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ನೆರವೇರಿತು.

ಕಕ್ಕಬೆ ಪ್ರೌಢ, ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ

ಕನ್ನಡಪ್ರಭ ವಾರ್ತೆ ನಾಪೋಕ್ಲು

ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರಕಟಪಡಿಸಲು ವಾರ್ಷಿಕೋತ್ಸವ ಒಂದು ಉತ್ತಮ ವೇದಿಕೆಯಾಗಿದೆ ಎಂದು ಕಕ್ಕಬೆ ಕೇಂದ್ರ ವಿದ್ಯಾ ಸಂಸ್ಥೆ ಅಧ್ಯಕ್ಷ ಕೇಟೋಳಿರ ಪಿ. ಕುಟ್ಟಪ್ಪ ಹೇಳಿದ್ದಾರೆ.

ಕಕ್ಕಬೆ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪೈಯಡಿ ಹಂಸ, ಬಾತ್ಮೀದಾರ ಕಲ್ಯಾಟಂಡ ಸುಧಾ ಗಣಪತಿ, ನಿರ್ದೇಶಕರಾದ ಬೊಲಿಯಾಡಿರ ಸಂತು ಸುಬ್ರಮಣಿ, ಅಂಜಪರವಂಡ ಎ. ಕುಶಾಲಪ್ಪ, ಮುಕ್ಕಾಟಿರ ರಮೇಶ್ , ಕೋಟೆರ ನೈಲ್‌ ಚಂಗಪ್ಪ, ಪರದಂಡ ಪ್ರಮೀಳಾ ಪೆಮ್ಮಯ್ಯ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಕೆ.ಬಿ. ಲೀಲಾವತಿ ಉಪಸ್ಥಿತರಿದ್ದರು.

ಕಕ್ಕಬ್ಬೆ-ಕುಂಜಿಲ ಗ್ರಾಪಂ ಅಧ್ಯಕ್ಷೆ ಶಿಲ್ಪ ಲೋಕೇಶ್ ಧ್ವಜಾರೋಹಣ ನೆರವೇರಿಸಿದರು. ಪ್ರೌಢಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿ. ನಿರ್ದೇಶಕ ಬೊಳಿಯಾಡಿರ ಸಂತು ಸುಬ್ರಮಣಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಅನಿಲ್ ರಾಜ್ ವರದಿ ವಾಚಿಸಿದರು. ಶಿಕ್ಷಕಿ ಪಿ.ಸಿ. ಬಬಿತ ನಿರೂಪಿಸಿದರು. ಶಿಕ್ಷಕ ಶರತ್ ವಂದಿಸಿದರು.