ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಕೇರಳದ ಶಿವಗಿರಿ ಮಠದ ಅಂಗ ಸಂಘಟನೆಯಾಗಿರುವ ಗುರುಧರ್ಮ ಪ್ರಚಾರ ಸಭಾದ ಕರ್ನಾಟಕ ರಾಜ್ಯದ ಯುವಜನ ಘಟಕದ ಅಧ್ಯಕ್ಷರಾಗಿ ಉಡುಪಿ ಮೂಲದ ಕೆ. ಗೋಪಿಕೃಷ್ಣ ಅವರನ್ನು ನೇಮಕ ಮಾಡಲಾಗಿದೆ.
ಉಡುಪಿ: ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಕೇರಳದ ಶಿವಗಿರಿ ಮಠದ ಅಂಗ ಸಂಘಟನೆಯಾಗಿರುವ ಗುರುಧರ್ಮ ಪ್ರಚಾರ ಸಭಾದ ಕರ್ನಾಟಕ ರಾಜ್ಯದ ಯುವಜನ ಘಟಕದ ಅಧ್ಯಕ್ಷರಾಗಿ ಉಡುಪಿ ಮೂಲದ ಕೆ. ಗೋಪಿಕೃಷ್ಣ ಅವರನ್ನು ನೇಮಕ ಮಾಡಲಾಗಿದೆ.ಶಿವಗಿರಿ ಮಠದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ ಹೊರಡಿಸಿರುವ ಆದೇಶದ ಪ್ರತಿಯನ್ನು ಕೇರಳದ ಪ್ರವಾಸದಲ್ಲಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಗೋಪಿಕೃಷ್ಣ ಅವರಿಗೆ ಹಸ್ತಾಂತರಿಸಲಾಯಿತು.ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ಗುರು-ಗಾಂಧಿ ಶತಮಾನೋತ್ಸವ ಕಾರ್ಯಕ್ರಮದ ಆಯೋಜನೆಯ ಸಂಚಾಲಕರಾಗಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ಬಿ.ಕೆ. ಹರಿಪ್ರಪಸಾದ್ ಅವರ ಆಪ್ತರಾಗಿರುವ ಗೋಪಿಕೃಷ್ಣ ಅವರ ಸಂಘಟನಾತ್ಮಕ ಕಾರ್ಯಗಳನ್ನು ಗಮನಿಸಿ ಈ ನೇಮಕ ಮಾಡಲಾಗಿದೆ.