ವಿಜಯಪುರ: ಇಲ್ಲಿನ ಗಾಂಧಿಚೌಕದಲ್ಲಿ ಶ್ರೀ ನಗರೇಶ್ವರಸ್ವಾಮಿ ಮತ್ತು ಆದಿನಾರಾಯಣಸ್ವಾಮಿ ೧೧ನೇ ಕಲ್ಲುಗಾಲಿ ಬ್ರಹ್ಮರಥೋತ್ಸವ ಹಾಗೂ ಬಲಮುರಿ ಗಣಪತಿ, ಶ್ರೀ ಭದ್ರಕಾಳೀ ಸಮೇತ ಶ್ರೀ ರುದ್ರದೇವರ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿಸಲಾಯಿತು
ವಿಜಯಪುರ: ಇಲ್ಲಿನ ಗಾಂಧಿಚೌಕದಲ್ಲಿ ಶ್ರೀ ನಗರೇಶ್ವರಸ್ವಾಮಿ ಮತ್ತು ಆದಿನಾರಾಯಣಸ್ವಾಮಿ ೧೧ನೇ ಕಲ್ಲುಗಾಲಿ ಬ್ರಹ್ಮರಥೋತ್ಸವ ಹಾಗೂ ಬಲಮುರಿ ಗಣಪತಿ, ಶ್ರೀ ಭದ್ರಕಾಳೀ ಸಮೇತ ಶ್ರೀ ರುದ್ರದೇವರ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿಸಲಾಯಿತು.
ವೈಜ್ಞಾನಿಕತೆ ಎಷ್ಟೇ ಪ್ರಗತಿ ಹೊಂದಿದ್ದರೂ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಚಾರಗಳು ಪ್ರತಿಯೊಬ್ಬರ ಮನಸ್ಸಿನ ನೆಮ್ಮದಿ ಹೆಚ್ಚಿಸುತ್ತವೆ. ಈ ನಿಟ್ಟಿನಲ್ಲಿ ರಥೋತ್ಸವ, ಜಾತ್ರೆಗಳು ಎಲ್ಲರಿಗೂ ಸಹಕಾರಿ ಎಂದು ಶ್ರೀ ನಗರೇಶ್ವರಸ್ವಾಮಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಂ.ಸತೀಶ್‌ಕುಮಾರ್ ತಿಳಿಸಿದರು.ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಮಾತನಾಡಿ, ಪುರಾತನ ಕಾಲದಿಂದಲೂ ನಡೆಯುತ್ತಿದ್ದ ಶ್ರೀ ನಗರೇಶ್ವರಸ್ವಾಮಿ ಜಾತ್ರೆ ಸ್ವಲ್ಪದಿನ ನಿಂತಿದ್ದು, ಇಂದಿನ ನಗರ್ತ ಯುವಕ ಸಂಘ, ಮಹಿಳಾ ಸಂಘ, ಮಹಂತಿನ ಮಠ ಹಾಗೂ ಭಕ್ತರ ಸಹಕಾರದೊಂದಿಗೆ ಇತಿಹಾಸ ಮರುಕಳಿಸಿರುವುದು ಇಲ್ಲಿನ ಸಾಂಸ್ಕೃತಿಕ ಪರಿಸರದ ಶುಭ ಸೂಚಕ ಎಂದು ತಿಳಿಸಿದರು.
ಬ್ರಹ್ಮರಥೋತ್ಸವದಲ್ಲಿ ಅಧ್ಯಕ್ಷರಾದ ಬಿ.ಕೆ.ದಿನೇಶ್, ಮಾತೃ ಸಂಸ್ಥೆ ಖಜಾಂಚಿಗಳಾದ ಎಂ.ಶಂಕರ್, ಕೃಪಾ ಶಂಕರ್, ಮಹಂತಿನ ಮಠದ ಅಧ್ಯಕ್ಷರಾದ ಪುನೀತ್ ಕುಮಾರ್, ಕಾರ್ಯದರ್ಶಿಗಳಾದ ವಿಶ್ವನಾಥ ಮಾಮ, ಹರಿಹರ ಪುರಸಭಾ ಸದಸ್ಯರಾದ ಶಿಲ್ಪ ಅಜಿತ್, ಮುರಳೀಧರ್, ದಾಸೋಹ ಕಮಿಟಿ ಅಧ್ಯಕ್ಷರಾದ ಎನ್.ರುದ್ರಮೂರ್ತಿ, ಯುವಕ ಸಂಘದ ಅಧ್ಯಕ್ಷ ವಿ.ಬಸವರಾಜು, ಬಿ.ಸಿ. ಸಿದ್ದರಾಜು,ದಾಸೋಹ ಸಮಿತಿಯ ಬಿ ಅವಿನಾಶ್, ಯುವಕ ಸಂಘದ ಪ್ರವೀಣ್, ಪುರಸಭಾ ಸದಸ್ಯರುಗಳು, ಪಟ್ಟಣದ ನಗರ್ತ ಜನಾಂಗದ ಮುಖಂಡರು ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತಾಧಿಗಳು ಜಯಘೋಷಗಳನ್ನು ಕೂಗುತ್ತಾಭಾಗವಹಿಸಿದ್ದರು. ಗಾಣಿಗರ ಸಂಘದ ಮುಖ್ಯಸ್ಥರು ರಥೋತ್ಸವದ ಹಿಂದೆ ಭಾಗವತ ಸಂಕೀರ್ತನೆ ನಡೆಸಿಕೊಂಡು ಬಂದರು.ಬಾಕ್ಸ್.......
ಮಕ್ಕಳು ಎಳೆಯುವ ರಥೋತ್ಸವನೂತನ ನಗರೇಶ್ವರಸ್ವಾಮಿ ಬ್ರಹ್ಮರಥೋತ್ಸವದ ಮುಂಭಾಗದಲ್ಲಿಯೇ ಶ್ರೀ ಬಲಮುರಿ ಗಣಪತಿ, ಶ್ರೀ ಭದ್ರಕಾಳೀಸಮೇತ ರುದ್ರದೇವರ ಚಿಕ್ಕದಾದ ಬ್ರಹ್ಮರಥೋತ್ಸವದ ವಿಶೇಷವೆಂದರೆ ಮಕ್ಕಳೇ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ರಥವನ್ನು ಎಳೆಯುವುದು. ರಥೋತ್ಸವದ ಅಂಗವಾಗಿ ದಾಸೋಹ ಕಮಿಟಿ ವತಿಯಿಂದ ಸಾವಿರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯದ ಬಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಪಾನಕ, ಪಣ್ಯಾರ, ಕೋಸಂಬರಿ ವಿತರಣೆ, ಮಂಟಪ ಪಡಿಸೇವೆ ಜರುಗಿದವು.
(ಫೋಟೋ ಕ್ಯಾಪ್ಞನ್)ವಿಜಯಪುರದ ಗಾಂಧಿಚೌಕದಲ್ಲಿ ಶ್ರೀನಗರೇಶ್ವರಸ್ವಾಮಿ ಮತ್ತು ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.