ಸಿಂಧನೂರಲ್ಲಿ ವೀರವನಿತೆಒನಕೆ ಓಬವ್ವ ಜಯಂತಿ

| Published : Nov 12 2025, 01:15 AM IST

ಸಿಂಧನೂರಲ್ಲಿ ವೀರವನಿತೆಒನಕೆ ಓಬವ್ವ ಜಯಂತಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಮಿನಿ ವಿಧಾನ ಸೌಧ ಕಾರ್ಯಾಲಯದಲ್ಲಿ ತಾಲ್ಲೂಕಾಡಳಿದಿಂದ ಮಂಗಳವಾರ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು.

ಸಿಂಧನೂರು: ನಗರದ ಮಿನಿ ವಿಧಾನ ಸೌಧ ಕಾರ್ಯಾಲಯದಲ್ಲಿ ತಾಲ್ಲೂಕಾಡಳಿದಿಂದ ಮಂಗಳವಾರ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು.ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಡಾ.ರಾಮಣ್ಣ ಗೋನವಾರ ಹೈದರಾಲಿಯ ಪಡೆಗಳು ಚಿತ್ರದುರ್ಗದ ಕೋಟೆಯನ್ನು ಆಕ್ರಮಿಸಲು ಪ್ರಯತ್ನಿಸುತ್ತಿದ್ದಾಗ ತನ್ನ ಪ್ರಾಣವನ್ನು ಲೆಕ್ಕಿಸದೆ ಒಂಟಿಯಾಗಿ ಆಕ್ರಮಣಕಾರರನ್ನು ಸೆದೆಬಡೆದು ಕೋಟೆಯನ್ನು ರಕ್ಷಣೆ ಮಾಡಿದ ಓಬವ್ವನ ಧೈರ್ಯ, ಶೌರ್ಯ ಮಹಿಳೆಯರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.ನಂತರ ನಗರದ ಒನಕೆ ಓಬವ್ವನವರ ವೃತ್ತದಲ್ಲಿರುವ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಂಪನಗೌಡ ಬಾದರ್ಲಿ, ಸೋಮನಗೌಡ ಬಾದರ್ಲಿ, ತಾ.ಪಂ ಇಓ ಚಂದ್ರಶೇಖರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಫ್.ಮಸ್ಕಿ, ಛಲವಾದಿ ಸಮಾಜದ ಮುಖಂಡರಾದ ಹನುಮಂತಪ್ಪ ಗೋಮರ್ಸಿ, ಹನುಮಂತಪ್ಪ ವಕೀಲ, ನರಸಪ್ಪ ಕಟ್ಟಿಮನಿ, ಶರಣಬಸವ ಮಲ್ಲಾಪುರ ಮತ್ತಿತರರು ಇದ್ದರು.