ವೇದಿಕೆಗೆ ಮಹನೀಯರ ಜಯಂತಿ ಸೀಮಿತಗೊಳ್ಳದಿರಲಿ: ಉದ್ಯಮಿ ಸದ್ಗುರು ಪ್ರದೀಪ್

| Published : May 13 2025, 01:11 AM IST

ವೇದಿಕೆಗೆ ಮಹನೀಯರ ಜಯಂತಿ ಸೀಮಿತಗೊಳ್ಳದಿರಲಿ: ಉದ್ಯಮಿ ಸದ್ಗುರು ಪ್ರದೀಪ್
Share this Article
  • FB
  • TW
  • Linkdin
  • Email

ಸಾರಾಂಶ

ಮಹನೀಯರ ಜಯಂತಿಗಳು ವೇದಿಕೆ, ಡಿಜೆಗಳಿಗೆ ಸೀಮಿತಗೊಳ್ಳದೆ ಶಿಕ್ಷಣವಂತ ಸಮಾಜಕ್ಕೆ ಪ್ರಜ್ಞಾವಂತ ಯುವಕರು ಹಾಗೂ ಉಳ್ಳವರು ಕೈಜೋಡಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಉದ್ಯಮಿ ಸದ್ಗುರು ಪ್ರದೀಪ್ ತಿಳಿಸಿದರು

134ನೇ ಅಂಬೇಡ್ಕರ್ ಜಯಂತಿ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಹನೀಯರ ಜಯಂತಿಗಳು ವೇದಿಕೆ, ಡಿಜೆಗಳಿಗೆ ಸೀಮಿತಗೊಳ್ಳದೆ ಶಿಕ್ಷಣವಂತ ಸಮಾಜಕ್ಕೆ ಪ್ರಜ್ಞಾವಂತ ಯುವಕರು ಹಾಗೂ ಉಳ್ಳವರು ಕೈಜೋಡಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಉದ್ಯಮಿ ಸದ್ಗುರು ಪ್ರದೀಪ್ ತಿಳಿಸಿದರು

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ವತಿಯಿಂದ ನಡೆದ 134ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಶೋಷಿತ ಸಮುದಾಯಗಳ ಅಭಿವೃದ್ಧಿಯಾದರೆ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಅಂಬೇಡ್ಕರ್ ಒಬ್ಬ ಮಹಾನ್ ಮಾನವತಾವಾದಿ ಸಮ ಸಮಾಜದ ನಿರ್ಮಾತೃ ಬಸವಣ್ಣನವರ ಆದರ್ಶದಲ್ಲಿ ಸಂವಿಧಾನವನ್ನು ರಚಿಸಿ ಸಮಾನತೆಯನ್ನು ತಂದ ಡಾ.ಅಂಬೇಡ್ಕರ್‌ ಅವರನ್ನ ಭಾರತೀಯರಾದ ನಾವೆಲ್ಲರೂ ಪ್ರತಿನಿತ್ಯವೂ ಸ್ಮರಿಸಲೇಬೇಕು. ಅಂಬೇಡ್ಕರ್ ಅವರ ಶಿಕ್ಷಣ ಪ್ರೇಮ ಅವರಲ್ಲಿದ್ದ ಜ್ಞಾನ ಸಂಪತ್ತಿನಿಂದ ಜಗತ್ ವಿಖ್ಯಾತಿಯಾಗಿದ್ದಾರೆ ಶಿಕ್ಷಣವು ಎಲ್ಲಾ ರಂಗದಲ್ಲಿಯೂ ವೃತ್ತಿಯನ್ನು ಉನ್ನತ ವ್ಯಕ್ತಿಯನ್ನಾಗಿಸುತ್ತದೆ ಎಂದರು.

ಮುಖಂಡ ಶಿವು ಮಠ ಮಾತನಾಡಿ, ಭಾರತ ಇಂದು ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯಲು ಅಂಬೇಡ್ಕರ್ ಅವರ ರಚಿಸಿದ ಸಂವಿಧಾನವೇ ಕಾರಣವಾಗಿದ್ದು, ಜನಸಾಮಾನ್ಯನು ಇಲ್ಲಿ ಪ್ರಧಾನಿಯಾಗುವ, ಶಾಸಕನಾಗುವ, ಸಂಸದನಾಗುವ, ಅವಕಾಶವನ್ನು ಅಂಬೇಡ್ಕರ್ ರವರು ಸಂವಿಧಾನದಲ್ಲಿ ನೀಡಿದ್ದು ಜನರಿಂದ ಮತ ಪಡೆದ ಪ್ರತಿನಿಧಿ ಅವರ ಕಷ್ಟಗಳಿಗೆ ಸ್ಪಂದಿಸಿ ಜನಸಾಮಾನ್ಯರನ್ನು ಆರ್ಥಿಕ ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿಗೆ ತರಲು ಸಹಕರಿಸಬೇಕು ಎಂದರು.

ನಗರದ ಅಂಬೇಡ್ಕರ್ ವೃತ್ತದಿಂದ ವೀರಭದ್ರ ಸ್ವಾಮಿ ದೇವಸ್ಥಾನದವರೆಗೆ ನೂರಾರು ಯುವಕರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೆರವಣಿಗೆಯು ನಗರದ ಗಾಂಧಿ ವೃತ್ತ, ಬಸವೇಶ್ವರ ಸರ್ಕಲ್, ರಾಜ್ ಕುಮಾರ್ ಸರ್ಕಲ್, ಮದಕರಿ ನಾಯಕ ಸರ್ಕಲ್‌ ಮೂಲಕ ವೀರಭದ್ರ ಸ್ವಾಮಿ ದೇವಸ್ಥಾನದವರೆಗೂ ಸಾಗಿಬಂದಿತು.

ಮುಖಂಡರಾದ ಗೂಳಿಹಟ್ಟಿ ಕೃಷ್ಣಮೂರ್ತಿ,ದೇವಗೆರೆ ಮಲ್ಲಿಕಾರ್ಜುನ್, ರವಿಕುಮಾರ್ ಮಾರುತಿ ಹೊನ್ನೇನಹಳ್ಳಿ, ಗವಿ ಗೌತಮ್, ಕರ್ಣ, ಧನು, ಹೆಗ್ಗೆರೆ ಶಂಕ್ರಪ್ಪ, ಕೈನಡು ಚಂದ್ರಪ್ಪ, ಎಂಜಿ ದಿಬ್ಬ ರಂಗಪ್ಪ, ದೊಡ್ಡಘಟ್ಟ ತಿಪ್ಪಯ್ಯ, ಪ್ರದೀಪ್ ನಾಕಿಕೆರೆ ತಿಪ್ಪಯ್ಯ, ಮೂಡಲಗಿರಿ, ಕರಿಬಸಪ್ಪ, ಲಕ್ಕಿಗುರು ಅಣ್ಣಿ ರಾಜಾಹುಲಿ, ಪ್ರದೀಪ್, ಸಿದ್ದಪ್ಪ, ಪ್ರವೀಣ್ ಸೇರಿದಂತೆ ನೂರಾರು ಯುವಕರು ಪಾಲ್ಗೊಂಡಿದ್ದರು.