ಸಾರಾಂಶ
ಆಕಾಶದ ಚಿನ್ನದ ತೊಟ್ಟಿಲಲ್ಲಿ ಕಾಳಿಂಗ ಸರ್ಪ ಮಲಗಿತಲೇ ಎಚ್ಚರ ಎಂದು ತಾಲೂಕಿನ ಯಲವಟ್ಟಿ ಆಂಜನೇಯ ಸ್ವಾಮಿ ಕಾರ್ಣಿಕದಲ್ಲಿ ಪೂಜಾರಪ್ಪ ನುಡಿದಿದ್ದಾರೆ.
- ಶ್ರೀ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿ ಯಲವಟ್ಟಿ ಆಂಜನೇಯ ಸ್ವಾಮಿ ಕಾರ್ಣಿಕ
- - -ಹರಿಹರ: ಆಕಾಶದ ಚಿನ್ನದ ತೊಟ್ಟಿಲಲ್ಲಿ ಕಾಳಿಂಗ ಸರ್ಪ ಮಲಗಿತಲೇ ಎಚ್ಚರ ಎಂದು ತಾಲೂಕಿನ ಯಲವಟ್ಟಿ ಆಂಜನೇಯ ಸ್ವಾಮಿ ಕಾರ್ಣಿಕದಲ್ಲಿ ಪೂಜಾರಪ್ಪ ನುಡಿದರು.
ನಗರದ ತುಂಗಭದ್ರಾ ನದಿ ದಡದ ಶ್ರೀ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿ ನಾಗಪಂಚಮಿಯಂದು ತಾಲೂಕಿನ ಯಲವಟ್ಟಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕಾರ್ಣಿಕ ನುಡಿಯುವುದು ಪ್ರತಿವರ್ಷದ ಸಂಪ್ರದಾಯ.ಅದರಂತೆ ಈ ಬಾರಿ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಲವಟ್ಟಿ ಆಂಜನೇಯ ಸ್ವಾಮಿ ಕಾರ್ಣಿಕ ನಡೆಯಿತು. ಆಕಾಶದ ಚಿನ್ನದ ತೊಟ್ಟಿಲಲ್ಲಿ ಕಾಳಿಂಗ ಸರ್ಪ ಮಲಗಿತಲೇ ಎಚ್ಚರ ಎಂದು ದೈವವಾಣಿಯನ್ನು ಪೂಜಾರಪ್ಪ ನುಡಿದರು.
ಕಾರ್ಣಿಕ ನುಡಿಯನ್ನು ನುಡಿಯುತ್ತಿದ್ದಂತೆ, ಅಲ್ಲಿದ್ದ ಭಕ್ತರು ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದರೆ, ಇನ್ನು ಹಲವರು ತಮ್ಮವರಿಗೆ ಪೋನ್ ಮಾಡಿ, ಕಾರ್ಣಿಕ ನುಡಿಯ ಅರ್ಥ ವಿನಿಯಮ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.ಹರಿಹರ ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕಿನ ಹಲವು ಗ್ರಾಮಗಳ ವಿವಿಧ ದೇವತಾ ಮೂರ್ತಿಗಳು ತುಂಗಭದ್ರಾ ನದಿಯಲ್ಲಿ ಪೂಜೆ ಸಲ್ಲಿಸಿ, ಅನಂತರ ನದಿ ದಡದಲ್ಲಿರುವ ಸಂಗಮೇಶ್ವರ ದೇವಸ್ಥಾನ ಅವರಣದಲ್ಲಿ ಸೇರುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಕಾರ್ಣಿಕ ಮುಗಿದ ನಂತರ ಗೋವಿಂದಾ ಗೋವಿಂದ ಎನ್ನುತ್ತಾ ಜಯಘೋಷ ಹಾಕಿದರು.
ಹರಿಹರ ತಾಲೂಕಿನ ಕೋಮಾರನಹಳ್ಳಿ, ಹರಳಹಳ್ಳಿ ಆಂಜನೇಯ ಸ್ವಾಮಿ ಕಾರ್ಣಿಕದಲ್ಲಿ ಕರಿಯಕಂಬಳಿ ಮೇಲೆ ಮುತ್ತಿನ ರಾಶಿ ಸುರಿದೀತಲೇ.. ರಾಶಿ ಮೂರಾದೀತಲೇ ಎಚ್ಚರ... ಎಂದ ಕಾರ್ಣೀಕ ನುಡಿಯಲಾಗಿದೆ.- - - -29ಎಚ್‌ಆರ್‌ಆರ್04.ಜೆಪಿಜಿ:
ಹರಿಹರದ ತುಂಗಭದ್ರಾ ನದಿ ಸಮೀಪದ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ತಾಲೂಕಿನ ಯಲವಟ್ಟಿ ಆಂಜನೇಯ ಸ್ವಾಮಿ ಕಾರ್ಣಿಕದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.