ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಮಾಜಿ ರಾಜ್ಯಪಾಲ ದಿ. ಬಿ. ರಾಚಯ್ಯ ಹಾಗೂ ಮಾಜಿ ಸಚಿವ ದಿ. ಕೆ.ಎಚ್. ರಂಗನಾಥ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಕೈ ತಪ್ಪಿ ಹೋಗಿದ್ದು ದುರಂತ. ಅಂದೇ ಅವರು ಮುಖ್ಯಮಂತ್ರಿಯಾಬೇಕಿತ್ತು. ಮುಂದಿನ ದಿನಗಳಲ್ಲಿ ದಲಿತರು ಮುಖ್ಯಮಂತ್ರಿ ಆಗುವುದು ಕಷ್ಟ ಇದೆ ಎಂದು ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಹೇಳಿದರು.ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ನಡೆದ 75 ವರ್ಷದ ಕರ್ನಾಟಕ ರಾಜಕಾರಣದಲ್ಲಿ ದಲಿತರಿಗೆ ನ್ಯಾಯ ಸಿಕ್ಕಿದಿಯೇ ಎಂಬುದರ ಕುರಿತು ಮಹತ್ವದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಸಜ್ಜನ ರಾಜಕಾರಣಿಗಳಾದ ಬಿ. ರಾಚಯ್ಯ ಮತ್ತು ರಂಗನಾಥ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸ್ವಲ್ಪದರದಲ್ಲೇ ತಪ್ಪಿಹೋಯಿತು. ನಂತರ ಸಣ್ಣ ಪುಟ್ಟ ಜಾತಿಯವರಿಗೆ ಅವಕಾಶ ಸಿಕ್ಕಿದರೂ ಹೆಚ್ಚಿನ ಸಂಖ್ಯೆಯಲ್ಲಿರುವ ದಲಿತರಿಗೆ ಇನ್ನೂ ಅವಕಾಶ ಸಿಗಲಿಲ್ಲ. ದಲಿತರ ನಾಯಕರ ನೇತೃತ್ವದಲ್ಲಿ ಚುನಾವಣೆ ನಡೆಸಿ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಹೈಕಮಾಂಡ್ ಬಳಿ ಮಂತ್ರಿಯಾದರೆ ಎಂದು ತೃಪ್ತಿಪಟ್ಟುಕೊಳ್ಳುತ್ತಾರೆ. ದಲಿತ ನಾಯಕರ ಪೈಕಿ ಬಿ. ಬಸವಲಿಂಗಪ್ಪ ಮಾತ್ರ ಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ದಿಟ್ಟತನ ಪ್ರದರ್ಶನ ಮಾಡಿದ್ದರು. ಅಂತಹ ನಾಯಕರಿಗೆ ಹೈಕಮಾಂಡ್ ಅವಕಾಶ ನೀಡಲಿಲ್ಲ. ಹೈಕಮಾಂಡ್ ಮುಂದೆ ಕೆಚ್ಚೆದೆಯ ಪ್ರದರ್ಶನ ಮಾಡುತ್ತಿದ್ದ ಶ್ರೀನಿವಾಸ ಪ್ರಸಾದ್ ಸಂಪೂರ್ಣ ರಾಜ್ಯ ರಾಜಕಾರಣ ಮಾಡಿದ್ದರೆ ಎಂದೋ ಮುಖ್ಯಮಂತ್ರಿಯಾಗುತ್ತಿದ್ದರು ಎಂದು ತಿಳಿಸಿದರು.ದಲಿತರಲ್ಲಿ ಒಗ್ಗಟ್ಟಿಲ್ಲ: ದೇಶದಲ್ಲಿ ದಲಿತರಲ್ಲಿ ನಾಯಕತ್ವ ಇದ್ದರು ಒಗ್ಗಟ್ಟು ಇಲ್ಲ. ದಲಿತರು ಒಗ್ಗಟ್ಟು ಆಗುವ ತನಕ ಅಧಿಕಾರ ಸಿಗಲ್ಲ 2 ನೇ ಹಂತದ ನಾಯಕರನ್ನು ಬೆಳಸಲು ಯಾರು ಮುಂದಾಗುತ್ತಿಲ್ಲ. ದೇಶದ ಜನಸಂಖ್ಯೆಯಲ್ಲಿ ಶೇ. 24ರಷ್ಟಿರುವ ಜನಸಂಖ್ಯೆ ಪೈಕಿ ಇದುವರಗೆ 35 ಮಂದಿ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ, 8 ಮಂದಿಗೆ ಅವಕಾಶ ಸಿಕ್ಕಿದ್ದು,
ಅವರ ಪೈಕಿ 7 ಮಂದಿ ಕೆಲಕಾಲ ಮಾತ್ರ ಮುಖ್ಯಮಂತ್ರಿಯಾಗಿದ್ದು, ಉತ್ತರ ಪ್ರದೇಶದಲ್ಲಿ ಮಾಯವತಿ ಮಾತ್ರ 5 ವರ್ಷ ಪೂರೈಸಿದಿದ್ದಾರೆ. ಇತರೆ ರಾಜ್ಯಗಲ್ಲಿ ಕೆಲ ಕಾಲ ಮುಖ್ಯಮಂತ್ರಿ ಸ್ಥಾನ ನೀಡಿ ಚುನಾವಣೆಗೆ ಹೋದ ಸಂದರ್ಭದಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕೊನೆಯ ಕಾಲದಲ್ಲಿ ಮುಖ್ಯಮಂತ್ರಿ ಸ್ಥಾನ ಕೊಟ್ಟು ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದರಿಂದ ಅಧಿಕಾರ ಕಳೆದುಕೊಂಡೇವು ಎಂಬ ಪಟ್ಟಕಟ್ಟಿಕೊಳ್ಳುವುದು ಬೇಡ ಎಂದು ಎಚ್ಚರಿಕೆ ನೀಡಿದರು.ದಲಿತ ನಾಯಕರಿಂದಲೇ ದಲಿತರ ಮೇಲೆ ಶೋಷಣೆಯಾಗುತ್ತಿದೆ. ನನಗೆ ಹಿಂದೆ ಮುಖ್ಯಮಂತ್ರಿಯಾಗುವ
ಅವಕಾಶ ಕೈ ತಪ್ಪಿ ಹೋಯಿತು ಎಂದು ಈಗ ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು ಇದೇ ರೀತಿ ಮೌನವಹಿಸುತ್ತಾ ಬಂದರೆ ಶತಮಾನ ಕಳೆದರೂ ಅವಕಾಶಗಳು ಸಿಗುವುದಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.ಚಾಮರಾಜನಗರ: ಈ ಭಾಗದ ಹಿರಿಯ ದಲಿತ ನಾಯಕ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ ಸಚಿವರಾಗಬೇಕಾದರೆ ಅವರ ಹಿಂದೆ ಸಮುದಾಯ ನಿಲ್ಲಬೇಕಿದೆ ಎಂದು ಹಿರಿಯ ಪತ್ರಕರ್ತ ಕೆ. ಶಿವಕುಮಾರ್ ಸಲಹೆ ನೀಡಿದರು.ಶಾಸಕ ಎ.ಆರ್. ಕೃಷ್ಣಮೂರ್ತಿ ನಿಷ್ಠುರವಾದಿ ರಾಜಕಾರಣಿ. ಯಾವುದೇ ಲಾಭಿ ಮಾಡುವುದಿಲ್ಲ. ಬೆಳಗ್ಗೆ ಯಿಂದ ಸಂಜೆತನಕ ಜನರ ಸೇವೆ ಮಾಡುವುದು ಮಾತ್ರ ಗೊತ್ತು. ಇವರ ರೀತಿಯಲ್ಲಿ ಮಾಜಿ ಸಚಿವ ಎಚ್. ಎಸ್.ಮಹದೇವ ಪ್ರಸಾದ್ ಮತ್ತು ಮಾಜಿ ಸಂಸದ ದಿ. ಧ್ರುವನಾರಾಯಣ ಕೆಲಸ ಮಾಡುತ್ತಿದ್ದರು. ಅದ್ದರಿಂದಲೇ ಜಿಲ್ಲಾ ಅಭಿವೃದ್ಧಿಯಾಗುತಿತ್ತು. ಮತ್ತೇ ಅಭಿವೃದ್ಧಿ ಕಾಣುವಂತಾಗಬೇಕಾದರೆ ಕೃಷ್ಣಮೂರ್ತಿ ಅಧಿಕಾರ ಸಿಗಬೇಕೆ ಹೊರತು. ಗುಲಾಮಗಿರಿ ಮಾಡುವವರಿಗೆ ಅಧಿಕಾರ ನೀಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಕೆಲ ನಾಯಕರು ತಮ್ಮ ಬಳಿಕ ಅವರ ಮಕ್ಕಳನ್ನು ಅಧಿಕಾರಕ್ಕೆ
ತರವುದನ್ನೇ ನೋಡುತ್ತಾರೆ. ಅದರ ಬದಲು ಬಿ. ರಾಚಯ್ಯ ಅವರ ಮಾದರಿಯಲ್ಲೇ ಸಜ್ಜನ ರಾಜಕಾರಣ ಮಾಡುತ್ತಾ ಬಂದಿರುವ ಕೃಷ್ಣಮೂರ್ತಿ ಅವರಿಗೆ ಅಧಿಕಾರ ಸಿಗುವಂತೆ ಮಾಡಬೇಕು. ಆಗ ಮಾತ್ರ ಈ ಭಾಗದ ಜನರಿಗೆ ಒಳ್ಳೇಯದಾಗುತ್ತದೆ ಎಂದು ತಿಳಿಸಿದರು.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ವೆಂಕಟರಮಣಸ್ವಾಮಿ(ಪಾಪು) ಮಾತನಾಡಿ, ದೇವರಾಜ ಅರಸ್ ದಲಿತರ ನಾಯಕ. ಶೋಷಿತ ಸಮುದಾಯದ ನಿಜವಾದ ನಾಯಕರು. ನಾನು, ಡಾ. ಎಚ್.ಸಿ. ಮಹದೇವಪ್ಪ, ಬಿ.ರಾಚಯ್ಯನವರ ಪ್ರಾಡಕ್ಟ್ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಋಣತೀರಿಸಲು ಎ.ಅರ್.ಕೃಷ್ಣಮೂರ್ತಿ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಹಿರಿಯ ಪತ್ರಕರ್ತ ಕೆ. ಶಿವಕುಮಾರ್ ಅವರಂತಹ ಚಿಂತಕರನ್ನು ವಿಧಾನಪರಿಷತ್‌ಗೆ ಕಳುಹಿಸಿದರೆ.ಪರಿಷತ್‌ನ ಗೌರವ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಅವರಿಗೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರಲ್ಲಿ ಮನವಿ ಮಾಡಿದರು.