ಬಂಟ್ವಾಳ: ಜೀವನದ ಕಷ್ಟಗಳನ್ನು ಸೋಪಾನವಾಗಿಸಬೇಕು. ಧರ್ಮ ಸಂರಕ್ಷಣೆಯ ಹೋರಾಟದಿಂದ ಜಯ ನಿಶ್ಚಿತ. ಆ ಮೂಲಕ ಸಮಾಜ ವಿಕಾಸವಾಗುತ್ತದೆ. ಅಂತರಂಗ ಸ್ವಚ್ಛವಾಗಿರಬೇಕು. ಅಂತರಂಗದ ಪ್ರವೇಶಕ್ಕೆ ಪ್ರೇಮತತ್ವವೇ ರಹದಾರಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

ಅವರು ಭಾನುವಾರ ಒಡಿಯೂರು ಶ್ರೀಗಳ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ ಒಳಾಂಗಣ ಸ್ಪರ್ಧೆಗಳನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ತಾಳಿಪ್ಪಾಡಿಗುತ್ತು, ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ತಾರೆಮಾರು, ಒಡಿಯೂರು ಶ್ರೀ ವಿ.ಸ.ಸಂಘದ ನಿರ್ದೇಶಕ ಭವಾನಿಶಂಕರ ಶೆಟ್ಟಿ ಪುತ್ತೂರು, ಪ್ರಧಾನ ಕೋಶಾಧಿಕಾರಿ ಶಶಿಧರ ಶೆಟ್ಟಿ ಜಮ್ಮದಮನೆ, ಕ್ರೀಡಾ ಸಮಿತಿ ಸಂಚಾಲಕ ರಮೇಶ್ ಶೆಟ್ಟಿ ಅನೆಯಾಲಗುತ್ತು, ಕಾರ್ಯದರ್ಶಿ ತಾರಾಸುಂದರ ರೈ, ಉಪಾಧ್ಯಕ್ಷೆ ಹರಿಣಾಕ್ಷಿ ಜೆ.ಶೆಟ್ಟಿ, ಯಶವಂತ ವಿಟ್ಲ, ಸೇರಾಜೆ ಗಣಪತಿ ಭಟ್, ರೇಣುಕಾ ಎಸ್.ರೈ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕಿ ಅನಿತಾ ಸ್ವಾಗತಿಸಿದರು. ಶಿಕ್ಷಕಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಗಂಗಾ ವಂದಿಸಿದರು.