ಶಿಕ್ಷಕರಿಗೆ ಆಯೋಜಿಸಿದ್ದ ಪುನಶ್ಚೇತನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಶೃಂಗೇರಿ

ದೇಶಪ್ರೇಮ, ನಾಯಕತ್ವ,ಶಿಸ್ತು ಕಲಿಸುವ ಸಂಘಟನೆ ಸೇವಾ ದಳವಾಗಿದೆ. ಸಮಾಜದಲ್ಲಿ ಭಾವೈಕ್ಯತೆ ಮೂಡಿಸುವಲ್ಲಿ ಸೇವಾ ದಳದ ಪಾತ್ರ ಮಹತ್ತರ ಎಂದು ಚಿಕ್ಕಮಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ಡಾ.ಬಿ.ಆರ್. ಗಂಗಾಧರಪ್ಪ ಹೇಳಿದರು.

ಪಟ್ಟಣದ ವಿದ್ಯಾನಗರ ಕೆಪಿಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸೇವಾ ದಳ ತರಬೇತಿ ಪಡೆದ ಶಿಕ್ಷಕರಿಗೆ ಆಯೋಜಿಸಿದ್ದ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗ‍ಳಲ್ಲಿ ಶಿಸ್ತು,ದೇಶಭಕ್ತಿ,ರಾಷ್ಟ್ರೀಯ ಭಾವನೆ,ಐಕ್ಯತೆ ಮನೋಭಾವನೆ ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಸೇವಾದಳ ಶಾಖೆ ತೆರೆಯಲಾಗಿದೆ.

ದೈಹಿಕ ಶಿಕ್ಷಕರಿಗೆ ವಿಶೇಷ ತರಬೇತಿಗಳನ್ನು ಆಯೋಜಿಸಿ ಅವರ ಮೂಲಕ ಶಾಲೆಗಳಲ್ಲಿ ಸೇವಾದಳ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಯೋಗ,ನೈತಿಕ ಶಿಕ್ಷಣ,ರಾಷ್ಟ್ರಧ್ವಜದ ಗೌರವದ ಬಗ್ಗೆ ಕಲಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ,ಮಾನವೀಯ ಮೌಲ್ಯಕಲಿಸಲಾಗುತ್ತದೆ.ಸಮಾನತೆ,ಸಹಬಾ‍ಳ್ವೆ ಗುಣಗಳನ್ನು ಕಲಿಸಲಾಗುತ್ತದೆ.


ಇದು ಕೇವಲ ಶಾಲೆಗಳಲ್ಲಿ ಅಲ್ಲದೇ ಪರವಿ, ಪದವಿಪೂರ್ವ ಕಾಲೇಜುಗಳಲ್ಲಿಯೂ ವಿಸ್ತರಿಸಬೇಕು ಎಂದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸಿದ್ದರಾಜು, ತಾಲೂಕು ಸೇವಾ ದಳ ಘಟಕದ ಅಧ್ಯಕ್ಷ ವಿವೇಕ್, ಚಂದ್ರಕಾಂತ್, ಶ್ರೀನಿವಾಸ್, ಪಾಂಡುಕುಮಾರ್, ಶಾಲಾ ಮುಖ್ಯಶಿಕ್ಷಕಿ ದಮಯಂತಿ,ಸುರೇಶ್,ವಿಜಯ್ ಕುಮಾರ್ ಮತ್ತಿತರರು ಇದ್ದರು.

ಸುಶೀಲ ಸ್ವಾಗತಿಸಿ ಮಂಜುಳಾ ನಿರೂಪಿಸಿ ಶ್ರೀನಿವಾಸ್ ವಂದಿಸಿದರು.

13 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ವಿದ್ಯಾನಗರ ಕೆಪಿಎಸ್ ಶಾಲೆಯಲ್ಲಿ ಆಯೋಜಿಸಿದ್ದ ಸೇವಾದಳ ತರಬೇತಿ ಪುನಶ್ಚೇತನ ಕಾರ್ಯಕ್ರಮವನ್ನು ಡಾ.ಬಿ.ಆರ್.ಗಂಗಾಧರಪ್ಪ ಉದ್ಘಾಟಿಸಿದರು.