ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಅಪಾರ

| Published : May 15 2024, 01:32 AM IST

ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ವಿವಿಧ ಸೌಲತ್ತುಗಳನ್ನು ಪಡೆಯಲು ಕಡ್ಡಾಯವಾಗಿ ಕಾರ್ಮಿಕರು ನೋಂದಣಿ ಮಾಡಿಸಿ ಕಾರ್ಮಿಕ ಕಾರ್ಡ್‍ನ್ನು ಪಡೆಯಬೇಕು, ಕಾರ್ಮಿಕ ಕಾರ್ಡ್‍ಹೊಂದಿರುವ ಕಾರ್ಮಿಕರಿಗೆ ಹಲವಾರು ಸೌಲಭ್ಯಗಳಿವೆ

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ದೇಶವನ್ನು ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಮಹತ್ವರವಾದ್ದು ಅಲ್ಲದೆ ಕಾರ್ಮಿಕರಿಲ್ಲದ ಯಾವುದೇ ದೇಶ ಅಭಿವೃದ್ದಿ ಹೊಂದಲು ಸಾಧ್ಯವೇ ಇಲ್ಲ ಎಂದು ಹಿರಿಯ ವಕೀಲ ಎ.ಜಿ.ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ದ್ವಾರಕ ಫಂಕ್ಷನ್ ಹಾಲ್‍ನಲ್ಲಿ ಮಂಗಳವಾರ ನಡೆದ ಭಾಗ್ಯನಗರ ಕಟ್ಟಡ ಕಾರ್ಮಿಕರ ಒಕ್ಕೂಟದ ಉದ್ಘಾಟನೆ ಹಾಗೂ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದುಶ್ಚಟಗಳಿಗೆ ಬಲಿಯಾಗಬೇಡಿ

ದೇಶವನ್ನು ಕಟ್ಟುವಲ್ಲಿ ಹಾಗೂ ಒಂದು ದೇಶ ಅಭಿವೃದ್ದಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತಹ ಬಹುತೇಕ ಕಾರ್ಮಿಕರು ತಮ್ಮ ಶ್ರಮದ ಬಹುಪಾಲು ಹಣವನ್ನು ದುಶ್ವಟಗಳಿಗೆ ಖರ್ಚು ಮಾಡುತ್ತಿದ್ದಾರೆ. ಮದ್ಯ, ಗುಟ್ಕಾ ಇತ್ಯಾಧಿ ವ್ಯಸನಗಳಿಗೆ ಶ್ರಮದ ಹಣವನ್ನು ಖರ್ಚು ಮಾಡುವ ಬದಲಿಗೆ ಕಾರ್ಮಿಕರು ತಮ್ಮ ಶ್ರಮದ ಹಣವನ್ನು ತಮ್ಮ ಮಕ್ಕಳ ಶೈಕ್ಷಣಿಕ ಹಾಗೂ ತಮ್ಮ ಕುಟುಂಬದ ಅಭಿವೃದ್ದಿಗೆ ಬಳಸಬೇಕೆಂದು ಮನವಿ ಮಾಡಿದರು.

ಕಾರ್ಮಿಕ ಕಾರ್ಡ್‌ ಪಡೆಯಿರಿ

ಕಾರ್ಮಿಕ ನಿರೀಕ್ಷಕ ಸತೀಶ್ ಮಾತನಾಡಿ, ಸರ್ಕಾರದ ವಿವಿಧ ಸೌಲತ್ತುಗಳನ್ನು ಪಡೆಯಲು ಕಡ್ಡಾಯವಾಗಿ ಕಾರ್ಮಿಕರು ನೋಂದಣಿ ಮಾಡಿಸಿ ಕಾರ್ಮಿಕ ಕಾರ್ಡ್‍ನ್ನು ಪಡೆಯಬೇಕು, ಕಾರ್ಮಿಕ ಕಾರ್ಡ್‍ಹೊಂದಿರುವ ಕಾರ್ಮಿಕರಿಗೆ ಸರ್ಕಾರದಿಂದ ವೈದ್ಯಕೀಯ, ಶಿಕ್ಷಣ, ವಿವಾಹ ಸೇರಿದಂತೆ ನಾನಾ ಸೌಲಭ್ಯಗಳನ್ನ ಪಡೆಯಲು ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಭಾಗ್ಯನಗರ ಕಟ್ಟಡ ಕಾರ್ಮಿಕರ ಒಕ್ಕೂಟದ ತಾಲೂಕು ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಚಿನ್ನಪ್ಪಯ್ಯ, ಗೌರವಾಧ್ಯಕ್ಷ ವೆಂಕಟೇಶ್ ಸಿ.ಎಸ್., ಕಾರ್ಯದರ್ಶಿ ನಯಾಜ್, ಜಂಟಿ ಕಾರ್ಯದರ್ಶಿವಿಶ್ವನಾಥ್, ಸದಸ್ಯರಾದ ಭಾಷಾ, ಮೋಹನ್, ಮೂರ್ತಿ, ಮಂಜು, ಬಷೀರ್, ಚಲಪತಿ ಮತ್ತಿತರರು ಇದ್ದರು.

14ಬಿಜಿಪಿ-1: ಬಾಗೇಪಲ್ಲಿಯಲ್ಲಿ ನಡೆದ ಭಾಗ್ಯನಗರ ಕಾರ್ಮಿಕರ ಒಕ್ಕೂಟದ ಉದ್ಘಾಟನೆ ಹಿರಿಯ ವಕೀಲ ಎ.ಜಿ.ಸುಧಾಕರ್ ನೆರವೇರಿಸಿದರು.